ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಗುಣಮುಖ; ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಡಿಸ್ಚಾರ್ಜ್

|
Google Oneindia Kannada News

ಲಂಡನ್, ಏಪ್ರಿಲ್.12: ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ ಇಂಗ್ಲೆಂಡ್ ಪ್ರಧಾನಮಂತ್ರಿಯನ್ನು ಬಿಟ್ಟಿಲ್ಲ. ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಂದು ವಾರಗಳ ಕಾಲ ಚಿಕಿತ್ಸೆಗೆ ಒಳಗಾದ ಬೋರಿಸ್ ಜಾನ್ಸನ್ ರನ್ನು ಮೂರು ತುರ್ತು ನಿಗಾ ಘಟಕದಲ್ಲಿ ಇರಿಸಿ ಟ್ರೀಟ್ ಮೆಂಟ್ ನೀಡಲಾಯಿತು. ವೈದ್ಯರ ನಿರಂತರ ಪರಿಶ್ರಮದಿಂದ ಇಂಗ್ಲೆಂಡ್ ಪ್ರಧಾನಮಂತ್ರಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ

ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋರಿಸ್ ಜಾನ್ಸನ್ ರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ತಂಡವು ಸಲಹೆ ನೀಡಿದೆ. ಮುಂದಿನ ಸೂಚನೆವರೆಗೂ ಯಾವುದೇ ರೀತಿ ಆಡಳಿತಾತ್ಮಕ ಕಾರ್ಯಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳದಂತೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

UK Prime Minister Boris Johnson Discharge From Hospital After Covid19 Treatment

ವೈದ್ಯರಿಗೆ ಧನ್ಯವಾದ ಅರ್ಪಿಸಿದ ಬೋರಿಸ್ ಜಾನ್ಸನ್:
ಕೊರೊನಾ ವೈರಸ್ ಎಂಬ ಸಾವಿನ ಕೂಪದಿಂದ ನನ್ನ ಪಾರು ಮಾಡಿದ ವೈದ್ಯರ ಬಗ್ಗೆ ಹೇಳುವುದಕ್ಕೆ ಪದಗಳೇ ಬರುತ್ತಿಲ್ಲ. ನನಗೆ ಪುನರ್ಜನ್ಮ ನೀಡಿದ ವೈದ್ಯರ ಕಾರ್ಯಕ್ಕೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಕೋಟಿ ಕೋಟಿ ಜನರಿಗೋಸ್ಕರ ವೈದ್ಯರು ಹಗಲು ಇರುಳು ದುಡಿಯುತ್ತಿದ್ದಾರೆ.

ಮನೆಯಲ್ಲೇ ಇರುವ ಮೂಲಕ ಅವರ ಜೊತೆಗೆ ಕೈ ಜೋಡಿಸೋಣ. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ ಎಂದು ಬೋರಿಸ್ ಜಾನ್ಸನ್ ಮನವಿ ಮಾಡಿಕೊಂಡಿದ್ದಾರೆ.

English summary
UK Prime Minister Boris Johnson Discharge From Hospital After Covid-19 Treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X