ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪುರಾತನದ ಸಂಸತ್ತಿಗೆ 20 ವರ್ಷದ 'ಬೇಬಿ' ಎಂಟ್ರಿ!

By Mahesh
|
Google Oneindia Kannada News

ಲಂಡನ್, ಮೇ.8: ಬ್ರಿಟನ್ನಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬರು ಚುನಾವಣೆ ಸ್ಪರ್ಧಿಸಿ ಹಿರಿಯ ಮುಖಂಡರೊಬ್ಬರನ್ನು ಸೋಲಿಸಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಅತ್ಯಂತ ಕಿರಿಯ ಸಂಸತ್ ಸದಸ್ಯೆಯನ್ನು 'ಬೇಬಿ ಆಫ್ ದಿ ಹೌಸ್' ಎಂದು ಅನಧಿಕೃತವಾಗಿ ಕರೆಯಲಾಗುತ್ತಿದೆ.

20 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಮಯರಿ ಬ್ಲ್ಯಾಕ್ ಈಗ ಸಂಸದೆಯಾಗಿ ವಿಶ್ವದ ಪುರಾತನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅದರೆ, ಇತಿಹಾಸದ ಪುಟವನ್ನು ತಿರುವಿ ನೋಡಿದರೆ ಅತ್ಯಂತ ಕಿರಿಯ ಸಂಸದ ಎನಿಸಿದ ಗೌರವ ಕ್ರಿಸ್ಟೋಫರ್ ಮೊನ್ಕ್ ಅವರಿಗೆ ಸಲ್ಲುತ್ತದೆ. 1667ರಲ್ಲಿ 13 ವರ್ಷ ವಯಸ್ಸಿನಲ್ಲೇ ಸಂಸತ್ತಿಗೆ ಆಯ್ಕೆಯಾಗಿದ್ದರು.

ಬ್ರಿಟನ್ನಿನ ಸಾರ್ವತ್ರಿಕ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದ್ದು, ಸ್ವತಂತ್ರ್ಯ ಸ್ಕಾಟಿಷ್ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬ್ಲ್ಯಾಕ್ ಜಯಭೇರಿ ಬಾರಿಸಿದ್ದಾರೆ.

Mhairi Black SNP

ಲೇಬರ್ ಕನ್ಸರ್ವೇಟಿವ್ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿದ್ದ ಡೊಗ್ಲಾಸ್ ಅಲೆಗ್ಸಾಂಡರ್(47) ಅವರನ್ನು ಪೈಸ್ಲಿ(Paisley) ಲೋಕಸಭಾ ಕ್ಷೇತ್ರದಲ್ಲಿ ಮಣಿಸಿ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಕಾಟ್‌ಲ್ಯಾಂಡ್‌ನ 59 ಸ್ಥಾನಗಳ ಪೈಕಿ 58 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಎಸ್‌ಎನ್‌ಪಿ ಪಕ್ಷ ಈ ಗೆಲುವಿನೊಂದಿಗೆ ವಿಜಯೋತ್ಸವ ಆಚರಿಸಿದೆ. ಸ್ಕಾಟ್ಲೆಂಡ್ ಅನ್ನು ಸ್ವತಂತ್ರ ರಾಷ್ಟ್ರ ಮಾಡಲು ಮತ್ತೊಮ್ಮೆ ಚರ್ಚೆ ಆಗ್ರಹ ಶುರು ಮಾಡುವುದು ಎಸ್ ಎನ್ ಪಿಯ ಪ್ರಮುಖ ಆದ್ಯತೆಯಾಗಲಿದೆ.

ಚುನಾವಣೆ ಗೆದ್ದ ಖುಷಿಯಲ್ಲಿ ಮಾತನಾಡಿದ ಮಯರಿ, ನನಗೆ ಮತ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು ಪೈಸ್ಲಿ ಹಾಗ್ ಊ ರೆನ್ ಫ್ರೂಷೈರ್(Renfrewshire) ಜನತೆಗೆ ನಾನು ಆಭಾರಿಯಾಗಿದ್ದೇನೆ. ನನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.

English summary
A 20 year old student has become Britain’s youngest lawmaker for centuries, defeating one of the country’s most senior politicians to do it. But the country’s youngest lawmaker since Christopher Monck, who entered Parliament in 1667 at age 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X