ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಜನರಿಗೆ ಬೆಂಬಲ ನೀಡುವಂತೆ ಬ್ರಿಟನ್ ಪ್ರಧಾನಿ ಕರೆ

|
Google Oneindia Kannada News

ಲಂಡನ್, ಆಗಸ್ಟ್‌ 24: ತಾಲಿಬಾನಿಗಳ ವಶದಲ್ಲಿರುವ ಅಫ್ಘಾನಿಸ್ತಾನದ ಜನರಿಗೆ ಬೆಂಬಲ ನೀಡಬೇಕೆಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕರೆ ನೀಡಿದ್ದಾರೆ.

ಅಫ್ಘಾನಿಸ್ತಾನದ ಜನರನ್ನು ಬೆಂಬಲಿಸುವಂತೆ ಬ್ರಿಟನ್ ಪ್ರಧಾನಿ ಕರೆ ನೀಡಿರುವುದಾಗಿ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಅಧೀಕೃತ ಪ್ರಕಟಣೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮಂಗಳವಾರ ನಡೆಯಲಿರುವ ಜಿ7 ದೇಶಗಳ ತುರ್ತು ವರ್ಚುಯಲ್ ಸಭೆಯ ಅಧ್ಯಕ್ಷತೆಯನ್ನು ಬೋರಿಸ್ ವಹಿಸಲಿದ್ದಾರೆ. ಮಂಗಳವಾರ ಮಧ್ಯಾಹ್ನ ಜಿ7 ನಾಯಕರ ಸಭೆ ಆರಂಭವಾಗಲಿದೆ.

UK PM Johnson To Call On G7 Leaders To Support Afghan People

ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಮಾನವೀಯ ನೆಲೆಯಲ್ಲಿ ಅಲ್ಲಿನ ಜನರಿಗೆ ಸ್ಪಂದಿಸಬೇಕು ಹಾಗೂ ಬೆಂಬಲ ನೀಡಬೇಕು ಎಂದು ಬೋರಿಸ್ ಕೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನ ಜನರ ಮಾನವ ಹಕ್ಕುಗಳನ್ನು ಕಾಪಾಡಲು ಜಿ7 ದೇಶಗಳೊಂದಿಗೆ ಸಹಕಾರ ಕೋರಲಿರುವ ನಿರೀಕ್ಷೆಯಿದೆ.

ಕಾಬೂಲ್‌ನಿಂದ ಜನರನ್ನು ವಾಪಸ್ ಕರೆಸಿಕೊಳ್ಳುವ ಕುರಿತು, ಅಫ್ಘಾನಿಸ್ತಾನದ ಭವಿಷ್ಯದ ಕುರಿತು, ಅಲ್ಲಿನ ಜನರ ಹಕ್ಕುಗಳು, ಸ್ಥಿತಿಗತಿ ಹಾಗೂ ಹೊಸ ಸರ್ಕಾರಕ್ಕೆ ಸಂಬಂಧಿಸಿದಂತೆ ಹಲವು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

ಸೋಮವಾರ ಜಿ7 ಸಭೆ ಕುರಿತು ವಿವರ ನೀಡಿದ್ದ ಬೋರಿಸ್, 'ನಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವುದು ಆದ್ಯತೆಯಾಗಿರಬೇಕು. ಜೊತೆಗೆ ಕಳೆದ 20 ವರ್ಷಗಳಿಂದ ನಮಗೆ ನೆರವು ನೀಡಿರುವ ಅಫ್ಘಾನ್ ಜನರಿಗೆ ಸಹಾಯ ಮಾಡಬೇಕು. ಹೀಗಾಗಿ ನಾನು ತುರ್ತು ಸಭೆ ಕರೆದೆ. ಅಫ್ಘಾನ್ ಜನರ ಸುರಕ್ಷತೆ ಹಾಗೂ ಅವರ ಹಕ್ಕುಗಳನ್ನು ಕಾಪಾಡಿಕೊಳ್ಳಲು ನೆರವಾಗುವಲ್ಲಿ ನಾವು ಬದ್ಧರಾಗಿಬೇಕು' ಎಂದು ಬೋರಿಸ್ ಹೇಳಿದ್ದರು.

ತಾಲಿಬಾನ್ ಭೀಕರ ಸಂಘರ್ಷದ ನಡುವೆ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ..!ತಾಲಿಬಾನ್ ಭೀಕರ ಸಂಘರ್ಷದ ನಡುವೆ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ..!

ಬ್ರಿಟನ್ ಪ್ರಜೆಗಳು, ರಾಯಭಾರಿ ಸಿಬ್ಬಂದಿ ಸೇರಿ ಆರು ಸಾವಿರ ಮಂದಿಯನ್ನು ಕಾಬುಲ್‌ನಿಂದ ಸ್ಥಳಾಂತರಿಸಿರುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದೆ.

'ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ನಡೆಸುತ್ತಿರುವ ಕಾರ್ಯಗಳನ್ನು ನೋಡಿ ನಿರ್ಣಯ ತೆಗೆದುಕೊಳ್ಳಬೇಕೇ ಹೊರತು ಅವರ ಮಾತುಗಳನ್ನು ಕೇಳಿ ಅಲ್ಲ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಕಾಬೂಲ್‌ನಿಂದ ನಿರ್ಗಮಿಸಲು ನಿಗದಿ ಮಾಡಿರುವ ಆಗಸ್ಟ್‌ 31ರ ಗಡುವನ್ನು ವಿಸ್ತರಿಸಲು ತಾಲಿಬಾನ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಿ7 ರಾಷ್ಟ್ರಗಳ ತುರ್ತು ಸಭೆ ಆಯೋಜಿಸಲಾಗಿದೆ. ಸೋಮವಾರ ಸಂಜೆ ಜಾನ್ಸನ್, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಚರ್ಚೆ ನಡೆಸಿದ್ದಾರೆ.

ಭಾರತದಲ್ಲಿ ಅಫ್ಘಾನ್ ಚಿತ್ರಣ ತೆರೆದಿಡಲು ಸರ್ವ ಪಕ್ಷ ಸಭೆ ಕರೆದ ಕೇಂದ್ರ ಸರ್ಕಾರಭಾರತದಲ್ಲಿ ಅಫ್ಘಾನ್ ಚಿತ್ರಣ ತೆರೆದಿಡಲು ಸರ್ವ ಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಬ್ರಿಟನ್ ಪ್ರಧಾನಿ ಜೊತೆಗೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಅಮೆರಿಕದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎರಡು ದಶಕಗಳ ಕಾಲ ಅಮೆರಿಕ ಸೇನೆ ಭದ್ರತೆಯಡಿ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಎಚ್ಚೆತ್ತಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

UK PM Johnson To Call On G7 Leaders To Support Afghan People

ಅಫ್ಘಾನ್ ಬಿಕ್ಕಟ್ಟಿನ ಕುರಿತು ಭಾರತದಲ್ಲಿ ಸರ್ವಪಕ್ಷಗಳ ಸಭೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ದೇಶದ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ನೀಡುವಂತೆ ಮೋದಿ ಸೂಚನೆ ನೀಡಿದ್ದಾರೆ.

Recommended Video

ಇವತ್ತಿಗೂ ನನಗೆ ನೆಹರೂ,ಇಂದಿರಾ ಗಾಂಧಿ ಅಂದ್ರೆ ಇಷ್ಟ | Prathap Simha Part 2 | Oneindia Kannada

'ಆಗಸ್ಟ್ 26ರ ಬೆಳಿಗ್ಗೆ 11 ಗಂಟೆಗೆ ಮುಖ್ಯ ಸಮಿತಿಯ ಕೊಠಡಿಯಲ್ಲಿ ನಡೆಯುವ ಸರ್ವಪಕ್ಷ ಸಭೆಯಲ್ಲಿ ಹಾಜರಾಗಬೇಕೆಂದು ಆಹ್ವಾನಿಸುತ್ತೇವೆ," ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

English summary
UK PM Johnson to call on G7 leaders to step up support for Afghan people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X