• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

3ನೇ ಮಹಾಯುದ್ಧದ ಆತಂಕ ಸ್ಫೋಟ..! ಕಪ್ಪು ಸಮುದ್ರಕ್ಕೆ ನುಗ್ಗುತ್ತಾ ಬ್ರಿಟಿಷ್ ನೌಕೆ..?

|
Google Oneindia Kannada News

ಯುರೋಪ್ ಖಂಡದಲ್ಲಿ ಎಲ್ಲವೂ ಸರಿಯಿಲ್ಲ. ಈಗಾಗಲೇ ಕೊರೊನಾ ಮಹಾಮಾರಿ ವಕ್ಕರಿಸಿ ಇಡೀ ಖಂಡ ಅಲುಗಾಡಿ ಹೋಗಿದೆ. ಈ ನಡುವೆ ಉಕ್ರೇನ್ ಗಡಿಯಲ್ಲಿ ರಷ್ಯಾ ಭಾರಿ ಪ್ರಮಾಣದಲ್ಲಿ ಸೇನೆ ಹಾಗೂ ಶಸ್ತ್ರಾಸ್ತ್ರ ನಿಯೋಜನೆ ಮಾಡಿರುವುದು ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದೆ.

ಉಕ್ರೇನ್ ಗಡಿಯಲ್ಲಿ ರಷ್ಯಾ ಮಿಲಿಟರಿಯ ಚಟುವಟಿಕೆ ಹೆಚ್ಚಾದ ಬೆನ್ನಲ್ಲೇ 'ಸೂರ್ಯ ಮುಳುಗದ ನಾಡು' ಬ್ರಿಟನ್ ಅಲರ್ಟ್ ಆಗಿದ್ದು, ಕಪ್ಪು ಸಮುದ್ರಕ್ಕೆ ಯುದ್ಧನೌಕೆ ರವಾನಿಸಲು ಸಿದ್ಧವಾಗಿದೆ. ಕಪ್ಪು ಸಮುದ್ರದ ಮೇಲೆ ಹಲವು ರಾಷ್ಟ್ರಗಳ ಒಡೆತನವಿದೆ. ಇದರಲ್ಲಿ ಪ್ರಮುಖವಾಗಿ ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಪದೇಪದೆ ಕಿರಿಕ್ ಕೂಡ ಆಗಿದೆ.

ರಷ್ಯಾಗೆ ಠಕ್ಕರ್ ಕೊಡಲು ಸಿದ್ಧವಾಗಿರುವ ಅಮೆರಿಕ ಮತ್ತು ಅದರ ಮಿತ್ರಪಡೆಗಳು ಹೊಸದೊಂದು ದಾಳ ಉರುಳಿಸಿವೆ. ಇದರ ಮೊದಲ ಭಾಗವಾಗಿ ಬ್ರಿಟನ್ ನೌಕೆ ರವಾನಿಸಲು ಸಿದ್ಧವಾಗಿದೆ. ಮೇ ತಿಂಗಳ ಒಳಗೆ ನೌಕೆ ಕಪ್ಪು ಸಮುದ್ರ ತಲುಪಲಿದೆ. ಈ ಮೂಲಕ ಉಕ್ರೇನ್‌ ಪರವಾಗಿ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನ ಬ್ರಿಟನ್ ರವಾನಿಸಲಿದೆ.

ರಷ್ಯಾ ಸುಮ್ಮನೆ ಕೂರುತ್ತಾ..?

ರಷ್ಯಾ ಸುಮ್ಮನೆ ಕೂರುತ್ತಾ..?

ಬ್ರಿಟನ್‌ನ ಪ್ರಚೋದನೆಗೆ ರಷ್ಯಾದ ಪ್ರತಿಕ್ರಿಯೆ ಆಘಾತಕಾರಿಯಾಗಿ ಇರಲಿದೆ ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ ರಷ್ಯಾ ಮಿಲಿಟರಿ ಎದುರು ಬ್ರಿಟನ್ ಮಿಲಿಟರಿ ಅಷ್ಟು ಪ್ರಬಲವೂ ಅಲ್ಲ, ರಷ್ಯಾ ವಿರುದ್ಧ ಗುಡುಗಲು ಸಾಧ್ಯವಿಲ್ಲ. ಆದರೆ ಅಮೆರಿಕ ಬ್ರಿಟನ್ ಬೆನ್ನಿಗೆ ನಿಂತು ಇದನ್ನೆಲ್ಲಾ ಆಡಿಸುತ್ತಿದೆ ಎಂಬ ಆರೋಪವಿದೆ.

ಆದರೂ ಈವರೆಗೆ ರಷ್ಯಾದಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ. ಬಹುಶಃ ಪರಿಸ್ಥಿತಿ ಹೀಗೆ ರೀತಿ ಮುಂದುವರಿದಿದ್ದೇ ಆದರೆ, ರಷ್ಯಾವನ್ನ ಬ್ರಿಟನ್ ಕೆಣಕಿದರೆ ಪುಟಿನ್ ರೊಚ್ಚಿಗೇಳುವುದು ಗ್ಯಾರಂಟಿ. ಮುಂದಿನ ಪರಿಸ್ಥಿತಿ ಊಹೆಗೂ ನಿಲುಕದ್ದು. ಏಕೆಂದರೆ ಯುರೋಪ್‌ನ ಬಲಾಢ್ಯರ ನಡುವೆ ನಡೆಯುವ ಕಾಳಗ ಭಯಾನಕ ರೂಪದ್ದಾಗಿರಲಿದೆ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಅಪಾರ ಪ್ರಮಾಣದ ಸೇನೆಯನ್ನು ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ಅಮೆರಿಕದ ಆಪ್ತಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನು ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ.

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

English summary
UK planning to send warships to Black Sea after Ukraine-Russia tensions rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X