ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UK-India Week 2022 ಎರಡನೇ ದಿನ: ಹವಾಮಾನ ಬದಲಾವಣೆ ಸಮಸ್ಯೆ ಮತ್ತು ತಂತ್ರಜ್ಞಾನ ಪರಿಹಾರ ಬಗ್ಗೆ ಚರ್ಚೆ

|
Google Oneindia Kannada News

ಲಂಡನ್, ಜೂನ್ 29: ಇಂಡಿಯಾ ಗ್ಲೋಬಲ್ ಫೋರಂ ಆಯೋಜಿಸಿರುವ ಯುಕೆ-ಇಂಡಿಯಾ ವೀಕ್ 2022ಕ್ಕೆ ಇಂದು ಬುಧವಾರ ಮೂರನೇ ದಿನ. ನಿನ್ನೆ ಎರಡನೇ ದಿನದಂದು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ಶೃಂಗವಾಗಿ ನಡೆಸಲಾಗಿತ್ತು. ಪರಿಸರಪೂರಕ ವಿಚಾರಗಳಿಗೆ ಗಮನ ಕೇಂದ್ರಿತವಾಗಿತ್ತು.

ಬ್ರಿಟನ್ ಮತ್ತು ಭಾರತದ ಉನ್ನತ ಸಚಿವರು, ನೀತಿರೂಪಕರು ಮತ್ತು ಉದ್ಯಮ ಮುಖಂಡರು ಈ ಶೃಂಗ ಸಭೆಯ ಎರಡನೇ ದಿನದಂದು ಭಾಷಣ ಮತ್ತು ಚರ್ಚೆಗಳಲ್ಲಿ ಪಾಲ್ಗೊಂಡರು.

ಹವಾಮಾನ ಬದಲಾವಣೆಯ ಗಂಭೀರ ಸಮಸ್ಯೆಗಳನ್ನು ಚರ್ಚಿಸಲಾಯಿತು. ಬಹುವ್ಯಾಪಿಯ ಯುಕೆ ಮತ್ತು ಭಾರತದ ಸಹಭಾಗಿತ್ವವನ್ನು ಸರಿಯಾಗಿ ಬಳಸಿಕೊಳ್ಳಲು ತಂತ್ರಜ್ಞಾನ ಮತ್ತು ಹಣಕಾಸು ಯೋಜನೆಗಳ ಪಾತ್ರ ಏನು ಎಂಬುದನ್ನೂ ಚರ್ಚಿಸಲಾಯಿತು.

UK-India Week 2022, ಲಂಡನ್‌ನಲ್ಲಿ ವಜ್ರಮಹೋತ್ಸವ ಆರಂಭUK-India Week 2022, ಲಂಡನ್‌ನಲ್ಲಿ ವಜ್ರಮಹೋತ್ಸವ ಆರಂಭ

ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆಯ ಸಚಿವ ಭೂಪೇಂದರ್ ಯಾದವ್, ಸಿಒಪಿ26 ಸಂಸ್ಥೆಯ ಅಧ್ಯಕ್ಷ ಅಲೋಕ್ ಶರ್ಮಾ, ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಐಜಿಎಫ್ ಸ್ಥಾಪಕ ಪ್ರೊ. ಮನೋಜ್ ಲಾಡ್ವಾ ಮತ್ತಿತರರು ಎರಡನೇ ದಿನದ ಶಂಗಸಭೆಯಲ್ಲಿ ಮಾತನಾಡಿದರು.

ಜುಲೈ 1ರವರೆಗೂ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮಗಳು ನಡೆಯಲಿವೆ. ಇವತ್ತು ಗುರುವಾರದ್ದೂ ಸೇರಿ ಇನ್ನೂ ಮೂರು ದಿನಗಳ ಕಾಲ ಶೃಂಗಸಭೆಗಳು ನಡೆಯಲಿವೆ.

ಯುಕೆ-ಇಂಡಿಯಾ ವೀಕ್ 2022: ಅಗ್ರಗಣ್ಯ ಸಚಿವರು, ಉದ್ಯಮಿಗಳಿಂದ ಸಂವಾದಯುಕೆ-ಇಂಡಿಯಾ ವೀಕ್ 2022: ಅಗ್ರಗಣ್ಯ ಸಚಿವರು, ಉದ್ಯಮಿಗಳಿಂದ ಸಂವಾದ

ಭೂಪೇಂದ್ರ ಯಾದವ್ ಭಾಷಣ

ಭೂಪೇಂದ್ರ ಯಾದವ್ ಭಾಷಣ

"ಅಭಿವೃದ್ಧಿಶೀಲ ದೇಶಗಳಿಗೆ ಹೊಂದಿಕೆಯ ಹಣಕಾಸು ಬಹಳ ಮುಖ್ಯ. 100 ಬಿಲಿಯನ್ ಡಾಲರ್ (8 ಲಕ್ಷಕೋಟಿ ರೂಪಾಯಿ) ಹಣಕಾಸು ಗುರಿ ಈಡೇರಲು ಮುಂದುವರಿದ ದೇಶಗಳು ಸಹಾಯ ಮಾಡಬೇಕು. ಹವಾಮಾನ ಹಣಕಾಸು ವ್ಯವಸ್ಥೆ ತನ್ನ ಕಾರ್ಯವ್ಯಾಪ್ತಿ, ಅಗಾಧತೆ ಮತ್ತು ವೇಗವನ್ನು ಹೆಚ್ಚಿಸುವಂತಿರಬೇಕು" ಎಂದು ಭೂಪೇಂದ್ರ ಯಾದವ್ ಹೇಳಿದರು

"ಹವಾಮಾನ ಬದಲಾವಣೆ ಎಂಬುದು ಭವಿಷ್ಯದಲ್ಲಿ ನಮಗೆ ಎದುರಾಗುವಂಥದ್ದಲ್ಲ, ಈಗಲೇ ವಾಸ್ತವದಲ್ಲೇ ಇರುವ ಸಮಸ್ಯೆಯಾಗಿದೆ. ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಭಾರತ ಹೆಚ್ಚಾಗಿ ದೇಶೀಯ ಸಂಪನ್ಮೂಲಗಳನ್ನೇ ನೆಚ್ಚಿಕೊಂಡಿದೆ. ಜಾಗತಿಕ ಗುರಿಗಳನ್ನು ಈಡೇರಿಸಲು ಸಾಕಷ್ಟು ಹಣಕಾಸು ಮತ್ತು ತಂತ್ರಜ್ಞಾನದ ಹರಿವು ಅಗತ್ಯವಿದೆ" ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.

ಸಿಒಪಿ26 ಅಧ್ಯಕ್ಷರು:

ಸಿಒಪಿ26 ಅಧ್ಯಕ್ಷರು:

ಕಳೆದ ವರ್ಷ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆಯ 26ನೇ ಸಮಾವೇಶದ ಅಧ್ಯಕ್ಷರಾಗಿದ್ದ ಅಲೋಕ್ ಶರ್ಮಾ ಮಾತನಾಡಿ, "ಸಿಒಪಿ26ನಲ್ಲಿ ಐತಿಹಾಸಿಕ ಹವಾಮಾನ ಒಪ್ಪಂದಕ್ಕೆ 200 ದೇಶಗಳನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆವು. ಈ ಒಪ್ಪಂದವು ಎಲ್ಲಾ ದೇಶಗಳ ಹಿತಾಸಕ್ತಿಗೆ ಪೂರಕವಾದ್ದರಿಂದ ಇದು ಸಾಧ್ಯವಾಯಿತು. ಆದರೆ ಒಪ್ಪಂದದ ಆಶಯದಲ್ಲಿ ಎಷ್ಟು ಪ್ರಗತಿಯಾಗಿದೆಯಾ ಎಂದರೆ ಉತ್ತರ ಹೌದು. ಆದರೆ ಸಿಒಪಿ27 ಶೃಂಗಸಭೆಗೆ ನಾವು ಇನ್ನಷ್ಟು ವೇಗದಲ್ಲಿ ಕಾರ್ಯಾಚರಿಸಬೇಕಿದೆ" ಎಂದು ತಿಳಿಸಿದರು.

"ನಾವು ಪಳೆಯುಳಿಕೆ ಇಂಧನಗಳ (Fossil Fuel) ಮೇಲೆ ಅವಲಂಬಿತವಾಗುವಂತಿಲ್ಲ. ಪುನರ್ ಬಳಕೆ ಇಂಧನದ ಉತ್ಪಾದನೆ ತ್ವರಿತವಾಗಿ ಆಗಬೇಕಿದೆ ಎಂಬುದನ್ನು ನಾವು ಅರಿತಿದ್ದೇವೆ... ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹವಾಮಾನ ಬದಲಾವಣೆ ವಿಚಾರದಲ್ಲಿ ಬಹಳ ಬದ್ಧವಾಗಿದ್ದಾರೆ. ಹವಾಮಾನ ಗುರಿಗಳ ವಿಚಾರದಲ್ಲಿ ಬ್ರಿಟನ್ ಜೊತೆ ಸೇರಿ ಕೆಲಸ ಮಾಡಲು ಭಾರತಕ್ಕೆ ಬದ್ಧತೆ ಇದೆ" ಎಂದು ಅಲೋಕ್ ಶರ್ಮಾ ಹೊಗಳಿದರು.

ಸದ್ಗುರು ಜಗ್ಗಿ ವಾಸುದೇವ್:

ಸದ್ಗುರು ಜಗ್ಗಿ ವಾಸುದೇವ್:

ಈಶ ಫೌಂಡೇಶನ್‌ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ನಮ್ಮ ಈ ತಲೆಮಾರಿನವರಿಗೆ ದೊಡ್ಡ ಸವಾಲು ಎದುರಾಗಿದೆ. ಅದರೆ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಅವಕಾಶವೂ ನಮಗೆ ಇದೆ ಎಂದು ವಿಶ್ಲೇಷಿಸಿದರು.

"ಮಣ್ಣಿನ ಸಮಸ್ಯೆಗೆ ಪರಿಹಾರ ಹುಡುಕದೇ ಹವಾಮಾನ ಬದಲಾವಣೆಯಾಗಲೀ, ಜಾಗತಿಕ ಉಷ್ಣಾಂಶ ಏರಿಕೆ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ? ವಿಶ್ವದ ಶೇ. 35-40ರಷ್ಟು ಗ್ಲೋಬಲ್ ವಾರ್ಮಿಂಗ್ ಸಮಸ್ಯೆಗೆ ಮಣ್ಣೇ ಕಾರಣ. ಮಣ್ಣು ಉಳಿಸಿ ಎಂಬ ಅಭಿಯಾನವನ್ನು ಇದಕ್ಕಾಗಿಯೇ ಕೈಗೊಳ್ಳಲಾಗಿದೆ.

"2030ರಷ್ಟರಲ್ಲಿ ಆಫ್ರಿಕಾ ಖಂಡದ ಮೂರನೇ ಎರಡರಷ್ಟು ಭಾಗದ ನೆಲವು ಹಾಳಾಗಲಿದೆ. ಕಳೆದ 25 ವರ್ಷದಲ್ಲಿ ವಿಶ್ವದ ಶೇ. 10ರಷ್ಟು ನೆಲ ಬರಡುಭೂಮಿಯಾಗಿ ಪರಿವರ್ತಿತವಾಗಿದೆ. ನಾವು ಎಚ್ಚೆತ್ತುಕೊಳ್ಳಲು ಇನ್ನೇನು ಆಗಬೇಕಿದೆ" ಎಂದು ಸದ್ಗುರು ಪ್ರಶ್ನಿಸಿದರು.

ಪ್ರೊ. ಮನೋಜ್ ಲಾಡ್ವಾ

ಪ್ರೊ. ಮನೋಜ್ ಲಾಡ್ವಾ

"ಮುಂದಿನ ತಲೆಮಾರುಗಳಿಗೆ ವಾಸಯೋಗ್ಯ ಪ್ರಪಂಚ ಸಿಗಬೇಕೆಂದರೆ ನಾವು ಬಹಳ ತ್ವರಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಹವಾಮಾನ ಬದಲಾವಣೆ ವಿರುದ್ಧ ವೇಗವಾಗಿ ಕೆಲಸ ಮಾಡಲು ತಂತ್ರಜ್ಞಾನ ಬಹಳ ಮುಖ್ಯ.. ಈ ನಿಟ್ಟಿನಲ್ಲಿ ಐಜಿಎಫ್ ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಇಂಡಿಯಾ ಗ್ಲೋಬಲ್ ಫೌಂಡೇಶನ್ ಸಂಸ್ಥೆಯ ಸಿಇಒ ಪ್ರೊ. ಮನೋಜ್ ಲಾಡ್ವಾ ಹೇಳಿದ್ದಾರೆ.

ಯುಕೆ-ಇಂಡಿಯಾ ವೀಕ್ 2022ನ ಮೊದಲ ದಿನದಂದು ಕ್ರಿಯಾತ್ಮಕ ಉದ್ಯಮಗಳು ಮತ್ತು ಸಾಂಸ್ಕೃತಿಕ ಆರ್ಥಿಕತೆ ವಿಚಾರವಾಗಿ ಸಂಕಿರಣಗಳು ನಡೆದಿದ್ದವು. ಬುಧವಾರ ನಡೆಯಲಿರುವ ಮೂರನೇ ದಿನದಂದು ಮಹಿಳಾ ನಾಯಕತ್ವದ ಬಗ್ಗೆ ಗಮನ ಹರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು

* ರಿಷಿ ಸುನಕ್, ಬ್ರಿಟನ್ ಸರಕಾರದ ಹಣಕಾಸು ಸಚಿವ
* ಡಾ. ಎಸ್ ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ
* ಸಾಜಿದ್ ಜಾವಿದ್, ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಪೋಷಣೆ ವಿಭಾಗದ ಕಾರ್ಯದರ್ಶಿ
* ಡಾ. ಮನಸುಖ್ ಮಾಂಡವೀಯ, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
* ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಖಾತೆಗಳ ಸಚಿವ
* ಭೂಪೇಂದ್ರ ಯಾದವ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಪರಿಸರ, ಅರಣ್ಯ, ಹವಾಮಾವ ಬದಲಾವಣೆ ಖಾತೆಗಳ ಸಚಿವ
* ಡಾ. ರಾಜೀವ್ ಚಂದ್ರಶೇಖರ್, ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಐಟಿ ರಾಜ್ಯ ಖಾತೆಗಳ ಸಚಿವ
* ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ
* ಅಲೋಕ್ ಶರ್ಮಾ, ಸಿಒಪಿ 26ನ ಅಧ್ಯಕ್ಷ
* ಲಾರ್ಡ್ ಜೆರಿ ಗ್ರಿಮ್‌ಸ್ಟೋನ್, ಬ್ರಿಟನ್‌ನ ಹೂಡಿಕೆ ಸಚಿವ
* ಆನ್-ಮೇರೀ ಟ್ರೆವೆಲಯಾನ್, ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ ಕಾರ್ಯದರ್ಶಿ, ಮತ್ತು ವ್ಯಾಪಾರ ಮಂಡಳಿ ಅಧ್ಯಕ್ಷೆ
* ಬಿಲ್ ವಿಂಟರ್ಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್
* ಆರಿಯಾನಾ ಹಫಿಂಗ್ಟನ್, ಥ್ರೈವ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಒ
* ಹರ್ಮೀನ್ ಮೆಹತಾ, ಬ್ರಿಟಿಷ್ ಟೆಲಿಕಾಂ ಕಂಪನಿಯ ಚೀಫ್ ಡಿಜಿಟಲ್ ಅಂಡ್ ಇನ್ನೋವೇಶನ್ ಆಫೀಸರ್.
* ಡಾ. ಶಶಿ ತರೂರ್, ಸಂಸದರು
* ಭವೀಶ್ ಅಗರ್ವಾಲ್, ಒಲಾದ ಸಹ-ಸಂಸ್ಥಾಪಕರು ಮತ್ತು ಸಿಇಒ
* ಅಮಿತ್ ಕಪುರ್, ಟಿಸಿಎಸ್‌ನ ಯುಕೆ, ಐರ್‌ಲೆಂಡ್ ವಿಭಾಗದ ಮುಖ್ಯಸ್ಥರು
* ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್ ಸ್ಥಾಪಕರು.

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಐಜಿಎಫ್ ಅಥವಾ ಇಂಡಿಯಾ ಗ್ಲೋಬಲ್ ಫೋರಂ ಎಂಬುದು ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಜಾಗತಿಕ ನಾಯಕರಿಗೆ ವಿಚಾರ ಹಂಚುವ ವೇದಿಕೆಯಾಗಿದೆ. ವಿವಿಧ ವಲಯಗಳಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ನೀತಿರೂಪಕರಿಗೆ ಆ ವಲಯ ಸಂಬಂಧಿತ ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸುವ ವೇದಿಕೆ ಇದಾಗಿದೆ. ಬಹಳ ಆಳವಾದ ವಿಶ್ಲೇಷಣೆ, ಸಂದರ್ಶನ, ಸಂವಾದಗಳು ಇಂಡಿಯಾ ಗ್ಲೋಬಲ್ ಫೋರಂನ ವಿಶೇಷತೆಗಳಾಗಿವೆ ಎಂದು ಫೋರಂನ ವೆಬ್‌ಸೈಟ್‌ನಲ್ಲಿ ಹೇಳಿಕೊಳ್ಳಲಾಗಿದೆ.

ಇಂಡಿಯಾ ಇನ್ಕ್ ಗ್ರೂಪ್ ಎಂಬ ಸಂಸ್ಥೆಯು ಇಂಡಿಯಾ ಗ್ಲೋಬಲ್ ಫೋರಂ ಅನ್ನು ಆಯೋಜಿಸುತ್ತದೆ. ಭಾರತಕ್ಕೆ ಸಂಬಂಧಿಸಿದ ಜಾಗತಿಕವಾಗಿ ಮಹತ್ವವಾಗಿರುವ ಆರ್ಥಿಕ ವ್ಯವಹಾರ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಹೂಡಿಕೆ, ವ್ಯಾಪಾರ ಮತ್ತು ನೀತಿ ವಿಚಾರಗಳ ಬಗ್ಗೆ ಇಂಡಿಯಾ ಇನ್ಕ್ ಗ್ರೂಪ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಲೇಖನಗಳನ್ನು ಪ್ರಕಟಿಸುತ್ತದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ.

(ಒನ್ಇಂಡಿಯಾ ಸುದ್ದಿ)

Recommended Video

T20 ಸರಣಿ ಟೀಂ‌ಇಂಡಿಯಾ ಪಾಲು: ಗೆಲ್ಲಲು ಭಾರತ ಪರದಾಡಿದ್ದು ಹೀಗೆ.. | Oneindia Kannada

English summary
Day Two of UK-India Week 2022, organised by the UK-headquartered India Global Forum (IGF), took on a green focus with the Climate Finance and Technology Summit at Bloomberg headquarters in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X