ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಇಂಗ್ಲೆಂಡ್‌ ಬಾಂಧವ್ಯ ಭವಿಷ್ಯದ ಸಂಬಂಧಕ್ಕೆ ರಹದಾರಿ

|
Google Oneindia Kannada News

ಭಾರತ ಮತ್ತು ಇಂಗ್ಲೆಂಡ್ ನಡುವಣ ಸಂಬಂಧವು ಅದರ ಐತಿಹಾಸಿಕ ಚೌಕಟ್ಟಿನಾಚೆ ಹೊಸ ಅವಕಾಶಗಳೊಂದಿಗೆ ತೆರೆದುಕೊಳ್ಳುವ ಭವಿಷ್ಯದೆಡೆಗೆ ಸಾಗುತ್ತಿದೆ ಎಂದು ಬರೆಯುತ್ತಾರೆ ಇಂಡಿಯಾ ಐಎನ್‌ಸಿಯ ಸಂಸ್ಥಾಪಕ ಹಾಗೂ ಸಿಇಒ ಮನೋಜ್ ಲಾಡ್ವಾ.

ಭಾರತ-ಇಂಗ್ಲೆಂಡ್ ಬಾಂಧವ್ಯದ ಸ್ಥಿತಿ ಕುರಿತು ಲಂಡನ್ ಅಥವಾ ನವದೆಹಲಿಯ ಯಾವುದೇ ವಿದೇಶಾಂಗ ನೀತಿ ಪರಿಣತರನ್ನು ಪ್ರಶ್ನಿಸಿದರೆ ಬಹುತೇಕ ಎಲ್ಲರ ಉತ್ತರ ಪ್ರಾಯಶಃ 'ಸುಮಧುರ ಮತ್ತು ಆತ್ಮೀಯ' ಎಂದಾಗಿರುತ್ತದೆ. ಆದರೆ ಇನ್ನೂ ಆಳವಾಗಿ ಕೆದಕಿದರೆ ಈ ಪರಿಣತರು ಉತ್ತರಿಸಲು ಪದಗಳನ್ನು ಹುಡುಕಲು ತಡವರಿಸುತ್ತಾರೆ.

ಐದನೇ ವಾರ್ಷಿಕ ಯುಕೆ- ಭಾರತ ನಾಯಕತ್ವ ಸಮಾವೇಶ ತಪ್ಪಿಸಿಕೊಳ್ಳಬೇಡಿಐದನೇ ವಾರ್ಷಿಕ ಯುಕೆ- ಭಾರತ ನಾಯಕತ್ವ ಸಮಾವೇಶ ತಪ್ಪಿಸಿಕೊಳ್ಳಬೇಡಿ

ವಾಸ್ತವವೆಂದರೆ ಈ ಎರಡೂ ದೇಶಗಳು ಹಲವು ಪೀಳಿಗೆಗಳ ಹಳೆಯ ಕುಟುಂಬದ ಸ್ನೇಹಿತರಂತೆ ಎಲ್ಲ ಸಂದರ್ಭಗಳಲ್ಲಿಯೂ ಆತ್ಮೀಯರಾಗಿ ಇರುತ್ತಾರೆ. ಆದರೆ, ಅಗತ್ಯ ಬೀಳುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮೊದಲ ಆದ್ಯತೆಯ ಆಯ್ಕೆಯಾಗಿರುವುದಿಲ್ಲ. ಈ ಬಿಕ್ಕಟ್ಟಿಗೆ ಐತಿಹಾಸಿಕ ಕಾರಣಗಳಿವೆ.

ಆದರೆ, ಜಗತ್ತಿನ ಅತಿ ದೀರ್ಘಕಾಲೀನ ಅಭೇದ್ಯ ಆರ್ಥಿಕ ವಿಸ್ತರಣೆಯ ಅವಧಿ ಮತ್ತು ಸಮೃದ್ಧಿಯನ್ನು ನೀಡಿದ ಜಾಗತೀಕರಣ, ವ್ಯಾಪಾರ, ಮುಕ್ತತೆ ಮತ್ತು ಸಹಕಾರದ ಮೌಲ್ಯಗಳನ್ನು ಪುನರ್‌ಸ್ಥಾಪಿಸಲು, ಒಡೆಯುವಿಕೆ ಹೆಚ್ಚುತ್ತಿರುವ ಹಾಗೂ ಪ್ರತ್ಯೇಕವಾಗುತ್ತಿರುವ ಜಗತ್ತನ್ನು ಸರಿಪಡಿಸುವ ನಾಯಕತ್ವಕ್ಕಾಗಿ

ಜಾಗತಿಕ ಬ್ರಿಟನ್ ಮತ್ತು ಜಾಗತಿಕ ಭಾರತಗಳು ಒಂದಾಗುವುದು ಅತಿ ಅಗತ್ಯವಾಗಿದೆ.

ಮುಂದಿನ ದಾರಿ ಏನಿದೆ?

ಮುಂದಿನ ದಾರಿ ಏನಿದೆ?

ಜಗತ್ತಿನ ಐದು ಮತ್ತು ಆರನೇ ಅತಿ ದೊಡ್ಡ ಆರ್ಥಿಕತೆಯ ದೇಶಗಳು ಎನಿಸಿಕೊಂಡಿರುವ ಇಂಗ್ಲೆಂಡ್ ಮತ್ತು ಭಾರತಗಳು ಈ ಗುರಿ ತಲುಪಲು ಸಾಕಷ್ಟು ಸುದೀರ್ಘ ಮತ್ತು ಕಷ್ಟದ ಹಾದಿಯನ್ನು ಕ್ರಮಿಸಬೇಕಿದೆ.

ದುರಂತವೆಂದರೆ ತುಂಬಾ ಉತ್ತಮವಾಗಿರುವಂತೆ ತೋರುವ ಭಾರತ-ಬ್ರಿಟನ್ ಬಾಂಧವ್ಯ, ಕೇವಲ ವ್ಯಾವಹಾರಿಕವಾಗಿದೆ. ಅದರಾಚೆ ನೋಡಲು ಎರಡೂ ದೇಶಗಳು ಮುಂದಾಗುತ್ತಿಲ್ಲ.

ಬ್ರಿಟನ್‌ಗೆ ತನ್ನ ಸರಕುಗಳು ಭಾರತಕ್ಕೆ ಸುಲಭವಾಗಿ ತಲುಪಬೇಕು ಎಂಬುದಾಗಿದ್ದರೆ, ಭಾರತಕ್ಕೆ ತನ್ನ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸುಲಭ ಪ್ರವೇಶ ಹಾಗೂ ಉದ್ಯೋಗ ನೀತಿ ಬೇಕು. ಈ ಎರಡೂ ದೇಶಗಳು ಮುಂದುವರಿದರೆ ಇದು ಅಸಾಧ್ಯವೇನಲ್ಲ.

'ಬ್ರೆಕ್ಸಿಟ್' ಚಾಲ್ತಿಗೆ ಬರುವವರೆಗೂ ಭಾರತದ ವ್ಯಾವಹಾರಿಕ ಸಂಸ್ಥೆಗಳು ಯುರೋಪಿನ ಉಳಿದ ದೇಶಗಳಲ್ಲಿನ ತನ್ನ ವಿಸ್ತರಣೆಯ ನೆಲೆಯಾಗಿ ಇಂಗ್ಲೆಂಡ್‌ಅನ್ನು ಬಳಸುತ್ತಿದ್ದವು. ಅಲ್ಲದೆ, ಇಂಗ್ಲೆಂಡ್‌ಅನ್ನು ಭಾರತ ತನ್ನ ನೆಚ್ಚಿನ ರಜೆ ಸ್ಥಳವಾಗಿಯೂ ಪರಿಗಣಿಸಿದೆ.

ಭಾರತ-ಇಂಗ್ಲೆಂಡ್‌ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಗತ್ಯ ಸಂಪನ್ಮೂಲದ ಕೊರತೆ ಎದುರಾಗದಂತೆ ಇಲ್ಲಿ ಎರಡೂ ದೇಶಗಳ ಸುಪ್ರಸಿದ್ಧರು, ಅಷ್ಟೇನೂ ಖ್ಯಾತರಲ್ಲದ ವ್ಯಕ್ತಿಗಳು ಹಣ, ಶ್ರಮ ಹಾಗೂ ವೈಯಕ್ತಿಕ ಸಂಪರ್ಕಗಳ ಮೂಲಕ ಸಾಕಷ್ಟು ವ್ಯಯ ಮಾಡಿದ್ದಾರೆ.

ಕಾಮನ್‌ವೆಲ್ತ್ ಕೂಟ

ಕಾಮನ್‌ವೆಲ್ತ್ ಕೂಟ

ಸಣ್ಣ ಆರಂಭವಂತೂ ಆಗಿದೆ. ಈ ಹಿಂದೆ ಬ್ರಿಟಿಷರ ವಸಾಹತುಗಳಾಗಿದ್ದ 53 ರಾಷ್ಟ್ರಗಳ ಬೃಹತ್ ಒಕ್ಕೂಟವು ಆಧುನಿಕ 21ನೇ ಶತಮಾನದಲ್ಲಿ ಕಾಮನ್‌ವೆಲ್ತ್ ಒಕ್ಕೂಟವಾಗಿ ಒಂದಾಗಿವೆ.

ಇದು ಜಗತ್ತಿನ ಪ್ರತಿ ಖಂಡಗಳನ್ನೂ ಒಳಗೊಂಡ ಒಕ್ಕೂಟವಾಗಿರುವುದರಿಂದ ಉಚಿತ ವ್ಯಾಪಾರ ಮತ್ತು ಜಾಗತಿಕ ಸಮೃದ್ಧತೆಯನ್ನು ಹರಡಲು ಉತ್ತೇಜನ ನೀಡುತ್ತದೆ.

ಬ್ರೆಕ್ಸಿಟ್‌ನ ಬೆನ್ನಲ್ಲೇ ಉದ್ಭವಿಸಿರುವ ಭಿನ್ನಾಭಿಪ್ರಾಯಗಳಿಂದ ಹೊರಬಂದು ಭಾರತದಂತಹ ವಿಶೇಷ ಸಹಭಾಗಿ ದೇಶಗಳ ಜತೆ ಉತ್ತಮ ಭವಿಷ್ಯಕ್ಕಾಗಿ ಶ್ರಮ ಪಡಬೇಕಿದೆ. ಭಾರತಕ್ಕೆ ಇಂಗ್ಲೆಂಡ್ ಹೆಚ್ಚು ಗಾಢ ಮತ್ತು ಕಾರ್ಯತಂತ್ರ ಮಟ್ಟದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ನೀಡಿದೆ. ಉಭಯ ದೇಶಗಳು ಇದನ್ನು ಪರಿಣಾಮಕಾರಿಯನ್ನಾಗಿಸಿದರೆ ಇದು ಬಹು ದೊಡ್ಡ ಗೆಲುವಾಗಲಿದೆ.

ಮೌಲ್ಯಗಳ ಹಂಚಿಕೆ, ಏಕಸ್ವರೂಪದ ಕಾನೂನು ವ್ಯವಸ್ಥೆ ಮತ್ತು ಪರಿಚಿತ ಆಡಳಿತ ಕ್ರಮಗಳು ಈ ಬಾಂಧವ್ಯಕ್ಕೆ ಉತ್ತಮ ಅಡಿಗಲ್ಲು ಹಾಕಬಲ್ಲವು. ಆದರೆ, ಈ ದೇಶಗಳ ನಡುವಣ ಸಂಬಂಧ ಇನ್ನಷ್ಟು ತೀವ್ರವಾಗಬೇಕಿದೆ.

ಜತೆಗೂಡಬೇಕಾದ ಕ್ಷೇತ್ರಗಳು

ಜತೆಗೂಡಬೇಕಾದ ಕ್ಷೇತ್ರಗಳು

ಉಭಯ ದೇಶಗಳು ಕೆಲವು ಕ್ಷೇತ್ರಗಳಲ್ಲಿ ಸುಲಭವಾಗಿ ಸಹಕಾರದ ತತ್ವ ಅನುಸರಿಸಬಹುದು. ವ್ಯಾಪಾರ, ರಕ್ಷಣಾ ತಂತ್ರಜ್ಞಾನ, ಲಂಡನ್‌ನಲ್ಲಿ ಬಂಡವಾಳ ಸಂಗ್ರಹ, ಜನರು-ಜನರ ನಡುವೆ ಒಪ್ಪಂದಗಳು ಮತ್ತು ಸಾಫ್ಟ್ ಪವರ್ ಆಮದು ಕ್ಷೇತ್ರಗಳಲ್ಲಿ ಜತೆಗೂಡಬಹುದು.

ಬ್ರೆಕ್ಸಿಟ್‌ನ ಆಘಾತಕಾರಿ ನಿರ್ಧಾರದ ಬಳಿಕ ಥೆರೆಸಾ ಮೇ ಸರ್ಕಾರವು ಐರೋಪ್ಯ ಒಕ್ಕೂಟದಾಚೆಗಿನ ದೇಶಗಳೊಂದಿಗೂ ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದಗಳನ್ನು ತುಂಡರಿಸಿಕೊಳ್ಳಬೇಕಾಗಿದೆ.

ಇಂತಹ ಸಂದರ್ಭದಲ್ಲಿ ಬ್ರಿಟನ್ ಸರ್ಕಾರವು ಬ್ರೆಕ್ಸಿಟ್‌ನಿಂದಾದ ನಷ್ಟವನ್ನು ತುಂಬಿಕೊಳ್ಳಲು ಪರ್ಯಾಯ ಮಾರುಕಟ್ಟೆಗಳನ್ನು ಮತ್ತು ವ್ಯಾಪಾರ ಒಪ್ಪಂದಗಳನ್ನು ಕಂಡುಕೊಳ್ಳಬೇಕಿದೆ.

ಜಾಗತಿಕ ಆರ್ಥಿಕ ಶಕ್ತಿಕೇಂದ್ರ ಮತ್ತು ತಾಂತ್ರಿಕ ನಾಯಕನಾಗಿರುವ ಇಂಗ್ಲೆಂಡ್, ಭಾರತದೊಂದಿಗೆ ಅನೇಕ ವ್ಯವಹಾರಗಳನ್ನು ನಡೆಸಬಹುದು.

ಪ್ರಧಾನಿ ಮೋದಿ ಅವರ ಜಾಗತಿಕ ಭಾರತದ ಗುರಿಗೆ ಅನುಗುಣವಾಗಿ ಬ್ರೆಕ್ಸಿಟ್‌ನಿಂದ ಪ್ರತ್ಯೇಕಗೊಂಡಿರುವ ಜಾಗತಿಕ ಬ್ರಿಟನ್‌ ಕುರಿತ ಮೇ ಅವರ ವಿಷನ್ ತಾಳೆ ಹೊಂದುತ್ತದೆ.

ಜೀವನ ಸೇತು

ಜೀವನ ಸೇತು

ಬ್ರಿಟನ್‌ನ ಸಾರ್ವಜನಿಕ ಜೀವನ ಮತ್ತು ಸಾಮಾಜಿಕ ವೈವಿಧ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಭಾರತ ಮೂಲದ ಜನರನ್ನು ಉಭಯ ದೇಶಗಳ ನಡುವಣದ 'ಜೀವ ಸೇತು' ಎಂದು ಪ್ರಧಾನಿ ನರೇಂದ್ರ ಮೋದಿ ವರ್ಣಿಸಿದ್ದರು. ಈ ಸೇತುವೆ ದ್ವಿಪಕ್ಷೀಯ ಬಾಂಧವ್ಯವನ್ನು ವ್ಯಾಪಾರ ಹಾಗೂ ತತ್‌ಕ್ಷಣದ ವ್ಯವಹಾರಗಳ ಆಚೆಗೆ ಕೊಂಡೊಯ್ಯುವ ನೆಲಗಟ್ಟಾಗಲಿದೆ ಎಂದು ಅವರು ವಿಶ್ಲೇಷಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ತಿಂಗಳ ಲಂಡನ್ ಭೇಟಿ ವೇಳೆ ಸಣ್ಣ ಆರಂಭವನ್ನು ನೀಡಲಾಗಿದೆ. ಎರಡೂ ದೇಶಗಳ ನಡುವೆ ಹಲವು ಖಾಸಗಿ ವಲಯ ಹಾಗೂ ಸರ್ಕಾರಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮುಕ್ತ, ಶಾಂತಿಯುತ ಮತ್ತು ಸುರಕ್ಷಿತ ಸೈಬರ್ ಸ್ಪೇಸ್; ಮಾಹಿತಿ ವಿನಿಮಯದಲ್ಲಿ ಸಹಕಾರ ಮತ್ತು ಸೈಬರ್ ಭದ್ರತೆ ಹಾಗೂ ಬೆದರಿಕೆಗಳ ಪರಿಣಾಮಕಾರಿ ನಿರ್ವಹಣೆ; ವ್ಯವಹಾರ ಚಟುವಟಿಕೆಗಳು, ಕಾರ್ಯಕ್ರಮಗಳು ಮತ್ತು ಯೋಜನಾ ವಿನ್ಯಾಸಗಳನ್ನು ಒಳಗೊಳ್ಳಲು ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಸಾಂಸ್ಥಿಕ ಸಹಕಾರವನ್ನು ಬಲಪಡಿಸುವುದು ಸೇರಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಲಂಡನ್ ಮತ್ತು ನವದೆಹಲಿ ಎರಡೂ ಈ ಒಪ್ಪಂದಗಳಿಂದ ಮಹತ್ವದ ಪ್ರಯೋಜನಗಳನ್ನು ಪಡೆದುಕೊಳ್ಳಲಿವೆ.

ಮೊದಲೇ ಹೇಳಿದಂತೆ ಇವು ಸಾಕಷ್ಟು ಪ್ರಯತ್ನಗಳು ಮತ್ತು ಕಠಿಣ ಶ್ರಮವನ್ನು ಬೇಡುತ್ತವೆ. ಆದರೆ, ಖಚಿತತೆ ಇಲ್ಲದ ಮತ್ತು ಸದಾ ಬದಲಾಗುವ ಜಗತ್ತಿನಲ್ಲಿ ಭಾರತ-ಇಂಗ್ಲೆಂಡ್ ಸಂಬಂಧವು ಜಾಗತಿಕ ಸಹಯೋಗದ ಮೂಲಕ ಚಿತ್ರಣವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿವೆ.

ಮಾಧವ್ ಲಾಡ್ವಾ ಅವರು ಇಂಡಿಯಾ ಐಎನ್‌ಸಿ.ನ ಸಂಸ್ಥಾಪಕ ಮತ್ತು ಎಂಎಲ್‌ಎಸ್‌ ಚೇಸ್ ಸಮೂಹದ ಮುಖ್ಯ ಕಾರ್ಯನಿರ್ವಾಹಕ.

English summary
India and Britain future will be great if both the countries give attention to improve their bondings. Here is an article regarding India-UK future and possible ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X