India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ-ಇಂಡಿಯಾ ವೀಕ್ 2022: ಅಗ್ರಗಣ್ಯ ಸಚಿವರು, ಉದ್ಯಮಿಗಳಿಂದ ಸಂವಾದ

|
Google Oneindia Kannada News

ಲಂಡನ್‌, ಜೂನ್ 27: ಭಾರತ ಮತ್ತು ಬ್ರಿಟನ್ ದೇಶಗಳ ನಡುವಿನ ಸಂಬಂಧದ ವಿವಿಧ ಮಜುಲುಗಳನ್ನು ಗುರುತಿಸಿ ಪ್ರತಿ ವರ್ಷ ಆಚರಿಸಲಾಗುವ ಯುಕೆ-ಇಂಡಿಯಾ ವೀಕ್‌ನ (UK-India Week 2022) ಸರಣಿ ಕಾರ್ಯಕ್ರಮಗಳು ಇಂದು ಸೋಮವಾರ ಆರಂಭಗೊಂಡಿವೆ. ಐದು ದಿನಗಳ ಕಾಲ ವಿವಿಧ ವಿಚಾರಗಳು, ವ್ಯವಹಾರಗಳ ಬಗ್ಗೆ ಚರ್ಚೆ, ಸಂವಾದ, ಉಪನ್ಯಾಸಗಳು ನಡೆಯಲಿವೆ.

ಇಂಡಿಯಾ ಗ್ಲೋಬಲ್ ಫೋರಂ (IGF- India Global Forum) ಈ ಕಾರ್ಯಕ್ರಮ ಆಯೋಜಿಸಿದೆ. ಭಾರತ ಮತ್ತು ಬ್ರಿಟನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ - Free Trade Agreement) ಸಂಬಂಧ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮ ಬಹಳ ಮಹತ್ವ ಪಡೆದಿದೆ. ಎಫ್‌ಟಿಎ ಮಾತುಕತೆಗಳ ಬಗ್ಗೆ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ.

ಪೇಟೆಂಟ್ ಬಿಡಲೊಲ್ಲದ ಸಿರಿವಂತ ದೇಶಗಳು; ಡಬ್ಲ್ಯೂಟಿಒದಲ್ಲಿ ಮುರಿದುಬಿದ್ದ ಭಾರತದ ಯತ್ನಪೇಟೆಂಟ್ ಬಿಡಲೊಲ್ಲದ ಸಿರಿವಂತ ದೇಶಗಳು; ಡಬ್ಲ್ಯೂಟಿಒದಲ್ಲಿ ಮುರಿದುಬಿದ್ದ ಭಾರತದ ಯತ್ನ

ಭಾರತ ಮತ್ತು ಬ್ರಿಟನ್ ನಡುವಿನ 75 ವರ್ಷಗಳ ದ್ವಿಪಕ್ಷೀಯ ಸಂಬಂಧದ ಆಚರಣೆಯಾಗಿಯೂ ಯುಕೆ ಇಂಡಿಯಾ ವೀಕ್ 2022 ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಸಂಬಂಧಕ್ಕೆ ಪುಷ್ಟಿ ಕೊಡುವ ಥೀಮ್ ಅನ್ನು ಯುಕೆ ಇಂಡಿಯಾ ವೀಕ್ ಕಾರ್ಯಕ್ರಮಕ್ಕೆ ಹಾಕಿಕೊಳ್ಳಲಾಗಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್, ಕಾಂಗ್ರೆಸ್ ಸಂಸದ ಶಶಿ ತರೂರ್, ಬ್ರಿಟನ್ ಸಚಿವ ಋಷಿ ಸುನಕ್ ಮೊದಲಾದವರು ಈ ವೇದಿಕೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ಧಾರೆ.

ಭಾರತ-ಬ್ರಿಟನ್ ವ್ಯವಹಾರಕ್ಕೆ ಪುಷ್ಟಿ:

ಭಾರತ-ಬ್ರಿಟನ್ ವ್ಯವಹಾರಕ್ಕೆ ಪುಷ್ಟಿ:

ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್‌ನ ಆರ್ಥಿಕತೆಗಳಿಗೆ ಭರ್ಜರಿ ಲಾಭ ಆಗುವ ನಿರೀಕ್ಷೆ ಇದೆ. ಭಾರತಕ್ಕೆ ಬ್ರಿಟನ್ ಮಾಡುವ ರಫ್ತು ದುಪ್ಪಟ್ಟಾಗಲಿದೆ. ಎಫ್‌ಟಿಎ ಕೈಗೂಡಿದರೆ 2035ರಷ್ಟರಲ್ಲಿ ಬ್ರಿಟನ್‌ನ ಒಟ್ಟು ವ್ಯವಹಾರ ವರ್ಷಕ್ಕೆ 28 ಬಿಲಿಯನ್ ಯೂರೋನಷ್ಟು (ಸುಮಾರು 2.38 ಲಕ್ಷ ಕೋಟಿ ರೂ) ಏರಿಕೆಯಾಗಬಹುದು. ಬ್ರಿಟಿನ್‌ನ ವಿವಿಧೆಡೆ ಉದ್ಯೋಗಿಗಳ ಸಂಬಳ ಇತ್ಯಾದಿ ಹೆಚ್ಚಬಹುದು ಎಂದು ಬ್ರಿಟನ್ ಸರಕಾರ ಆಶಯ ಇಟ್ಟುಕೊಂಡಿದೆ.

ಭಾರತ-ಬ್ರಿಟನ್ ಸಂಬಂಧ:

ಭಾರತ-ಬ್ರಿಟನ್ ಸಂಬಂಧ:

ಭಾರತ ಮತ್ತು ಬ್ರಿಟನ್ ನಡುವೆ ಕೇವಲ ವಾಣಿಜ್ಯ ವ್ಯವಹಾರದ ಸಂಬಂಧ ಮಾತ್ರ ಇಲ್ಲ. ಎರಡೂ ದೇಶಗಳ ಸಂಬಂಧ ಇದಕ್ಕಿಂತಲೂ ಮಿಗಿಲಾದುದು. ಭಾರತವನ್ನು ಹಿಂದೊಮ್ಮೆ ಆಕ್ರಮಿಸಿಕೊಂಡಿದ್ದ ಬ್ರಿಟನ್ ಮತ್ತು ಭಾರತದ ಸಂಬಂಧ ಬೇರೆಯೇ ಆಯಾಮದಲ್ಲಿದೆ. ಬ್ರಿಟನ್‌ನ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾರತೀಯ ಸಮುದಾಯದವರ ಪಾತ್ರ ಬಹಳ ಗಣನೀಯವಾಗಿದೆ. ತಂತ್ರಜ್ಞಾನ, ಆರೋಗ್ಯ, ಕ್ರಿಯಾತ್ಮಕತೆ ಇತ್ಯಾದಿಯಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಿವೆ.

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು:

ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಮುಖರು:

* ರಿಷಿ ಸುನಕ್, ಬ್ರಿಟನ್ ಸರಕಾರದ ಹಣಕಾಸು ಸಚಿವ
* ಡಾ. ಎಸ್ ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ
* ಸಾಜಿದ್ ಜಾವಿದ್, ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಪೋಷಣೆ ವಿಭಾಗದ ಕಾರ್ಯದರ್ಶಿ
* ಡಾ. ಮನಸುಖ್ ಮಾಂಡವೀಯ, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
* ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಖಾತೆಗಳ ಸಚಿವ
* ಭೂಪೇಂದ್ರ ಯಾದವ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಪರಿಸರ, ಅರಣ್ಯ, ಹವಾಮಾವ ಬದಲಾವಣೆ ಖಾತೆಗಳ ಸಚಿವ
* ಡಾ. ರಾಜೀವ್ ಚಂದ್ರಶೇಖರ್, ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಐಟಿ ರಾಜ್ಯ ಖಾತೆಗಳ ಸಚಿವ
* ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ
* ಅಲೋಕ್ ಶರ್ಮಾ, ಸಿಒಪಿ 26ನ ಅಧ್ಯಕ್ಷ
* ಲಾರ್ಡ್ ಜೆರಿ ಗ್ರಿಮ್‌ಸ್ಟೋನ್, ಬ್ರಿಟನ್‌ನ ಹೂಡಿಕೆ ಸಚಿವ
* ಆನ್-ಮೇರೀ ಟ್ರೆವೆಲಯಾನ್, ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ ಕಾರ್ಯದರ್ಶಿ, ಮತ್ತು ವ್ಯಾಪಾರ ಮಂಡಳಿ ಅಧ್ಯಕ್ಷೆ
* ಬಿಲ್ ವಿಂಟರ್ಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್
* ಆರಿಯಾನಾ ಹಫಿಂಗ್ಟನ್, ಥ್ರೈವ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಒ
* ಹರ್ಮೀನ್ ಮೆಹತಾ, ಬ್ರಿಟಿಷ್ ಟೆಲಿಕಾಂ ಕಂಪನಿಯ ಚೀಫ್ ಡಿಜಿಟಲ್ ಅಂಡ್ ಇನ್ನೋವೇಶನ್ ಆಫೀಸರ್.
* ಡಾ. ಶಶಿ ತರೂರ್, ಸಂಸದರು
* ಭವೀಶ್ ಅಗರ್ವಾಲ್, ಒಲಾದ ಸಹ-ಸಂಸ್ಥಾಪಕರು ಮತ್ತು ಸಿಇಒ
* ಅಮಿತ್ ಕಪುರ್, ಟಿಸಿಎಸ್‌ನ ಯುಕೆ, ಐರ್‌ಲೆಂಡ್ ವಿಭಾಗದ ಮುಖ್ಯಸ್ಥರು
* ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್ ಸ್ಥಾಪಕರು.

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಐಜಿಎಫ್ ಅಥವಾ ಇಂಡಿಯಾ ಗ್ಲೋಬಲ್ ಫೋರಂ ಎಂಬುದು ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಜಾಗತಿಕ ನಾಯಕರಿಗೆ ವಿಚಾರ ಹಂಚುವ ವೇದಿಕೆಯಾಗಿದೆ. ವಿವಿಧ ವಲಯಗಳಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ನೀತಿರೂಪಕರಿಗೆ ಆ ವಲಯ ಸಂಬಂಧಿತ ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸುವ ವೇದಿಕೆ ಇದಾಗಿದೆ. ಬಹಳ ಆಳವಾದ ವಿಶ್ಲೇಷಣೆ, ಸಂದರ್ಶನ, ಸಂವಾದಗಳು ಇಂಡಿಯಾ ಗ್ಲೋಬಲ್ ಫೋರಂನ ವಿಶೇಷತೆಗಳಾಗಿವೆ ಎಂದು ಫೋರಂನ ವೆಬ್‌ಸೈಟ್‌ನಲ್ಲಿ ಹೇಳಿಕೊಳ್ಳಲಾಗಿದೆ.

ಇಂಡಿಯಾ ಇನ್ಕ್ ಗ್ರೂಪ್ ಎಂಬ ಸಂಸ್ಥೆಯು ಇಂಡಿಯಾ ಗ್ಲೋಬಲ್ ಫೋರಂ ಅನ್ನು ಆಯೋಜಿಸುತ್ತದೆ. ಭಾರತಕ್ಕೆ ಸಂಬಂಧಿಸಿದ ಜಾಗತಿಕವಾಗಿ ಮಹತ್ವವಾಗಿರುವ ಆರ್ಥಿಕ ವ್ಯವಹಾರ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಹೂಡಿಕೆ, ವ್ಯಾಪಾರ ಮತ್ತು ನೀತಿ ವಿಚಾರಗಳ ಬಗ್ಗೆ ಇಂಡಿಯಾ ಇನ್ಕ್ ಗ್ರೂಪ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಲೇಖನಗಳನ್ನು ಪ್ರಕಟಿಸುತ್ತದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ.

English summary
UK-India Week 2002 organised by India Global Forum has begun on Monday, and would have series of big programs till July 1st. This year's UK-India Week is in focus because of ongoing FTA negotiations between India and Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X