• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಕೆ-ಇಂಡಿಯಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ಪಟ್ಟಿ ಪ್ರಕಟ

By Sachhidananda Acharya
|

ಲಂಡನ್, ಜೂನ್ 22: ಬ್ರಿಟನ್-ಭಾರತದ ಗಟ್ಟಿ ಬಾಂಧವ್ಯದ ದ್ಯೋತಕವಾದ ಯುಕೆ-ಇಂಡಿಯಾ ಪ್ರಶಸ್ತಿ ಅಂತಿಮ ಹಂತದ ನಾಮ ನಿರ್ದೇಶಗೊಂಡವರ ಪಟ್ಟಿ ಪ್ರಕಟಗೊಂಡಿದೆ. ಸುನೀಲ್ ಭಾರ್ತಿ ಮಿತ್ತಲ್, ಸಂಸದೆ ಪ್ರೀತಿ ಪಟೇಲ್, ಸಂಸದ ಬ್ಯಾರಿ ಗಾರ್ಡಿನರ್ ಹಾಗೂ ಲಾರ್ಡ್ ಮಾರ್ಲ್ಯಾಂಡ್ ಅವರನ್ನೊಳಗೊಂಡ ನಿರ್ಣಾಯಕರ ತಂಡ ಈ ಪಟ್ಟಿಯನ್ನು ಅಂತಿಮಗೊಳಿಸಿದೆ.

ಅಂತಾರಾಷ್ಟ್ರೀಯ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಗಳು, ಸಾಮಾಜಿಕ ಜವಾಬ್ದಾರಿಯ ನಿಧಿ ನಿರ್ವಹಣೆ ಸಂಸ್ಥೆಗಳು, ವಿಶ್ವವಿಖ್ಯಾತ ಬ್ರಿಟಿಷ್ ಸಾಂಸ್ಕೃತಿಕ ಸಂಘಗಳು ಹಾಗೂ ಯುಕೆಯಲ್ಲಿನ ಡಿಜಿಟಲ್ ಕ್ಷೇತ್ರದ ಪ್ರತಿನಿಧಿಗಳು 2018ರ ಯುಕೆ-ಇಂಡಿಯಾ ಅವಾರ್ಡ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

4 ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ಭದ್ರ ಅಡಿಪಾಯ: ಪಿಯೂಷ್ ಗೋಯಲ್

ತಮ್ಮ ಆವಿಷ್ಕಾರ ಹಾಗೂ ಪರಿಶ್ರಮಗಳ ಮೂಲಕ ಯುಕೆ-ಇಂಡಿಯಾ ಮಧ್ಯೆ ಬಾಂಧವ್ಯ ವೃದ್ಧಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಲಿರುವುದು ವಿಶೇಷವಾಗಿದೆ.

ಉದ್ಯಮ, ತಂತ್ರಜ್ಞಾನ, ಮಾಧ್ಯಮ, ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿಪುಣರಾದ ನಿರ್ಣಾಯಕರ ಮಂಡಳಿಯು ಯುಕೆ-ಇಂಡಿಯಾ ಅವಾರ್ಡ್ಸ್ ಗಳ ವಿಜೇತರನ್ನು ಆಯ್ಕೆ ಮಾಡಲಿದೆ. ಈ ನಿರ್ಣಾಯಕ ಮಂಡಳಿಯಲ್ಲಿರುವ ಪ್ರಮುಖರೆಂದರೆ:

* ಲಾರ್ಡ್ ಮಾರ್ಲ್ಯಾಂಡ್ - ಚೇರಮನ್, ಕಾಮನ್‌ವೆಲ್ತ್ ಎಂಟರ್‌ಪ್ರೈಸ್ ಆಂಡ್ ಇನ್ವೆಸ್ಟ್‌ಮೆಂಟ್ ಕೌನ್ಸಿಲ್

* ಸುನೀಲ್ ಭಾರ್ತಿ ಮಿತ್ತಲ್ - ಚೇರಮನ್ ಹಾಗೂ ಸಂಸ್ಥಾಪಕ, ಭಾರ್ತಿ ಎಂಟರ್‌ಪ್ರೈಸಸ್

* ಸಂಸದ ಬ್ಯಾರಿ ಗಾರ್ಡಿನರ್ - ಶಾಡೊ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್‌ನ್ಯಾಷನಲ್ ಟ್ರೇಡ್

* ಸಂಸದೆ ಪ್ರೀತಿ ಪಟೇಲ್ - ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್

* ಎಡ್ವಿನಾ ಡನ್ - ಸಿಇಓ, ಸ್ಟಾರ್‌ಕೌಂಟ್

* ಬರ್ಖಾ ದತ್ - ಲೇಖಕಿ ಹಾಗೂ ಪತ್ರಕರ್ತೆ

ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡ 25 ಸಂಸ್ಥೆಗಳ ಪಟ್ಟಿ ಹೀಗಿದೆ,

* ಬ್ರಿಟಿಷ್ ಏಶಿಯನ್ ಟ್ರಸ್ಟ್‌ನ 'ಸೋಶಿಯಲ್ ಇಂಪ್ಯಾಕ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್' ಪ್ರಶಸ್ತಿಗಾಗಿ ವೋಡಾಫೋನ್ ಫೌಂಡೇಶನ್, ರೀಡ ಸ್ಮಿತ್, ಮಾರ್ಕ್ಸ ಆಂಡ್ ಸ್ಪೆನ್ಸರ್ ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್

* 'ಮೀಡಿಯಾ, ಆರ್ಟ್ಸ್ ಆಂಡ್ ಕಲ್ಚರ್ ಅವಾರ್ಡ್'ಗಾಗಿ ದಿ ಸೈನ್ಸ್ ಮ್ಯೂಸಿಯಂ, ಬಿಬಿಸಿ ನ್ಯೂಸ್ ಇಂಡಿಯನ್ ಲ್ಯಾಂಗ್ವೇಜಸ್, ದಿ ಪಾರ್ಟಿಶನ್ ಮ್ಯೂಸಿಯಂ ಆಂಡ್ ದ ಜೇಮ್ಸ್ ಎರ್ಸಕೈನ್, ೨೦೦ ನಾಟ್ ಔಟ್ ಫಿಲಂಸ್ ಹಾಗೂ ಕಾರ್ನಿವಲ್ ಸಿನೇಮಾಸ್

* 'ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಸ್ ಫೈನಾನ್ಸಿಯಲ್ ಸರ್ವಿಸಸ್ ಆರ್ಗನೈಸೇಶನ್ ಆಫ್ ದ ಇಯರ್' ಪ್ರಶಸ್ತಿಗಾಗಿ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್, ವಾಧವನ್ ಗ್ಲೋಬಲ್ ಕ್ಯಾಪಿಟಲ್ ಹಾಗೂ ಬಾರ್ಕಲೇಸ್ ಬ್ಯಾಂಕ್ ಇಂಡಿಯಾ

* 'ಇನ್ವೆಸ್ಟ್ ಇಂಡಿಯಾಸ್ ಟ್ರೇಡ್ ಆಂಡ್ ಇನ್ವೆಸ್ಟ್‌ಮೆಂಟ್ ಪ್ರಮೋಶನ್ ಆರ್ಗನೈಸೇಶನ್ ಆಫ್ ದ ಇಯರ್' ಪ್ರಶಸ್ತಿಗಾಗಿ ದಿ ಮ್ಯಾಂಚೆಸ್ಟರ್ ಇಂಡಿಯಾ ಪಾರ್ಟನರ್ಶಿಪ್, ಟೆಕ್ ಯುಕೆ, ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರೀಸ್ ಹಾಗೂ ದಿ ಮಿಡ್‌ಲ್ಯಾಂಡ್ಸ್ ಎಂಜಿನ್

* 'ಲಾ ಫರ್ಮ್ ಆಫ್ ದ ಇಯರ್ ಪ್ರಶಸ್ತಿಗಾಗಿ ವೆಡ್ಲೇಕ್ ಬೆಲ್, ಲಿಂಕಲೇಟರ್ಸ್, ಸಿರಿಲ್ ಅಮರಚಂದ್ ಮಂಗಲದಾಸ್, ಹಾಗೂ ಟ್ರೈಲೀಗಲ್

* 'ಕನ್ಸಲ್ಟನ್ಸಿ ಫರ್ಮ್ ಆಫ್ ದ ಇಯರ್ ಪ್ರಶಸ್ತಿ'ಗಾಗಿ ಸನ್ನಾಮ್ ಎಸ್4, ಗ್ರ್ಯಾಂಟ್ ಥಾರ್ನಟನ್ ಹಾಗೂ ಕಿಂಗ್‌ಸ್ಟನ್ ಸ್ಮಿತ್

* 'ಪಿಆರ್ ಫರ್ಮ ಆಫ್ ದ ಇಯರ್ ಪ್ರಶಸ್ತಿ'ಗಾಗಿ ಏವಿಯನ್ ಮೀಡಿಯಾ, ಸ್ಟರ್ಲಿಂಗ್ ಮೀಡಿಯಾ ಹಾಗೂ ಓಗಿಲ್ವಿ ಆ್ಯಂಡ್ ಮಾಥರ್

ಯುಕೆ-ಇಂಡಿಯಾ ವಿನ್ನಿಂಗ್ ಪಾರ್ಟನರ್ ಶಿಪ್‌ಗಾಗಿ ಕೊಡಮಾಡುವ 'ಪ್ರೊಫೆಶನಲ್ ಆಫ್ ದ ಇಯರ್' ಪ್ರಶಸ್ತಿಗೆ ನಾಲ್ಕು ಜನ ಖ್ಯಾತ ವೃತ್ತಿಪರರು ನಾಮಿನೇಟ್ ಆಗಿದ್ದಾರೆ. ಅವರ ಪಟ್ಟಿ ಹೀಗಿದೆ,

* ಅರ್ಬಿಂದರ್ ಛತ್ವಾಲ್ - ಪಾರ್ಟನರ್, ಬಿಡಿಓ

* ಸಿರಿಲ್ ಶ್ರಾಫ್ - ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಪಾರ್ಟನರ್, ಸಿರಿಲ್ ಅಮರಚಂದ್ ಮಂಗಲದಾಸ್

* ಡೇವಿಡ್ ಲ್ಯಾಂಡ್ಸ್‌ಮನ್ - ಎಕ್ಸಿಕ್ಯುಟಿವ್ ಡೈರೆಕ್ಟರ್, ಟಾಟಾ ಸನ್ಸ್

* ಪ್ಯಾಟ್ ಸೈನಿ - ಪಾರ್ಟ್ ನರ್ ಹಾಗೂ ಹೆಡ್ ಆಫ್ ಇಮಿಗ್ರೇಶನ್, ಪೆನಿಂಗಟನ್ಸ್ ಮ್ಯಾಂಚೆಸ್, ಎಲ್‌ಎಲ್‌ಪಿ

ಈ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಇಂಡಿಯನ್ ಉದ್ಯಮಿ, ರಾಜಕೀಯ ವಿಶ್ಲೇಷಕ, ಯುಕೆ-ಇಂಡಿಯಾ ವೀಕ್ ಸಂಸ್ಥಾಪಕ ಹಾಗೂ 'ವಿನ್ನಿಂಗ್ ಪಾರ್ಟನರ್‌ಶಿಪ್ : ಇಂಡಿಯಾ ಯುಕೆ ರಿಲೇಷನ್ಸ್ ಬೆಯಾಂಡ್ ಬ್ರೆಕ್ಸಿಟ್' ಸಂಪಾದಕ ಮನೋಜ ಲಡ್ವಾ, "ಯುಕೆ-ಇಂಡಿಯಾ ಅವಾರ್ಡ್ಸ್ ಸಮಾರಂಭ ಭಾರತ ಹಾಗೂ ಬ್ರಿಟನ್‌ಗಳ ಸಂಬಂಧವನ್ನು ಸಂಭ್ರಮಾಚರಿಸುವ ಕಾರ್ಯಕ್ರಮವಾಗಿದೆ. ಆವಿಷ್ಕಾರ ಹಾಗೂ ಕ್ರಿಯಾಶೀಲತೆಗಳ ಮೂಲಕ ಜನರನ್ನು ಒಗ್ಗೂಡಿಸುವ ವೇದಿಕೆ ಇದಾಗಿದೆ," ಎಂದರು.

"ಜಾಗತಿಕವಾಗಿ ಬ್ರಿಟನ್ - ಭಾರತದ ಪಾತ್ರ ಮಹತ್ತರವಾಗಿದೆ. ಭಾರತ, ಬ್ರಿಟನ್‌ಗಳ ಬಾಂಧವ್ಯ ವೃದ್ಧಿ ಹಾಗೂ ಜಾಗತಿಕ ಬದಲಾವಣೆಗೆ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸುವ ವೇದಿಕೆಯಾಗಿದೆ. ಇವರು ಹೊಸ ಅವಕಾಶಗಳನ್ನು ಸೃಷ್ಟಿಸುತ್ತ ಎರಡೂ ದೇಶಗಳ ಜಾಗತಿಕ ಸಂಬಂಧಕ್ಕೆ ಅರ್ಥಪೂರ್ಣ ಅಡಿಪಾಯ ಹಾಕುತ್ತಿದ್ದಾರೆ," ಎನ್ನುವುದು ಲಡ್ವಾ ಅಭಿಪ್ರಾಯವಾಗಿದೆ.

ಕಳೆದ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ತೆರೇಸಾ ಮೇ, "ಈ ಭವ್ಯವಾದ ಸಮಾರಂಭ ಭಾರತ, ಯುಕೆ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ನೀವು ಮಾಡುತ್ತಿರುವ ಕಾರ್ಯವನ್ನು ಅಭಿನಂದಿಸುತ್ತೇನೆ" ಎಂದು ಸಂದೇಶ ನೀಡಿದ್ದರು.

ಜೂನ್ 22, 2018ರಂದು ಖ್ಯಾತ ಬಾಲಿವುಡ್ ನಟ ವಿವೇಕ ಒಬೇರಾಯ್ ನಡೆಸಿಕೊಡಲಿರುವ ಕಣ್ಣುಕೋರೈಸುವ ಭವ್ಯ ಸಮಾರಂಭದಲ್ಲಿ ಯುಕೆ-ಇಂಡಿಯಾ ಪ್ರಶಸ್ತಿ ವಿಜೇತರ ಹೆಸರುಗಳನ್ನು ಘೋಷಣೆ ಮಾಡಲಾಗುವುದು.

ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್, ಭಾರತದ ಕ್ಯಾಬಿನೆಟ್ ದರ್ಜೆ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹೈ ಕಮೀಶನರ್ ಯಶವರ್ಧನ್ ಸಿನ್ಹಾ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಆರಂಭವಾದ ಎರಡನೇ ವರ್ಷವೇ ಯುಕೆ-ಇಂಡಿಯಾ ಪ್ರಶಸ್ತಿ ಪ್ರದಾನ ಸಮಾರಂಭವು, ಜೂನ್ 18ರಿಂದ 22ರವರೆಗೆ ನಡೆಯಲಿರುವ ಯುಕೆ-ಇಂಡಿಯಾ ವೀಕ್‌ನ ಉದ್ಘಾಟನೆಯೊಂದಿಗೆ ನೆರವೇರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯುಕೆ-ಇಂಡಿಯಾ ವೀಕ್ ಎರಡೂ ರಾಷ್ಟ್ರಗಳ ಮಧ್ಯದ ಗಟ್ಟಿ ಬಾಂಧವ್ಯವನ್ನು ಬಿಂಬಿಸುವ ಸಮಾರಂಭವಾಗಿದ್ದು, ಎರಡೂ ದೇಶಗಳ ಮಧ್ಯೆ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಲು ಇದು ಪೂರಕವಾಗಲಿದೆ.

ಬ್ರೆಕ್ಸಿಟ್ ಬ್ರಿಟನ್ ಹಾಗೂ ಗ್ಲೋಬಲ್ ಇಂಡಿಯಾಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಬೆಳವಣಿಗೆಗೆ ಇರುವ ಮಾರ್ಗಗಳ ಅನಾವರಣಗೊಳಿಸುವ ಯುಕೆ - ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್ (20-21 ಜೂನ್) ಇದೇ ಸಂದರ್ಭದಲ್ಲಿ ಜರುಗಿತು.

ಸ್ಥಳೀಯ ಭಾಷೆಯಲ್ಲಿ ಭಾರತದ ನಂ.1 ಸುದ್ದಿ ಸರದಾರನಾಗಿರುವ ಡೈಲಿಹಂಟ್ ಈ ಅಂತಾರಾಷ್ಟ್ರೀಯ ಸಮ್ಮೇಳನದ ಅಧಿಕೃತ ಮಾಧ್ಯಮ ಸಹಭಾಗಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A host of leading international development schemes, social impact funds, world-leading British cultural institutions and representative bodies for tech and digital clusters around the UK are among the nominees for the 2018 UK-India Awards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more