ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರಿಗೆ 24 ಗಂಟೆಗಳ ವೀಸಾ ಸೌಲಭ್ಯ ಕೊಟ್ಟ ಯುಕೆ!

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 19: ವಿಶೇಷ ಆದ್ಯತೆ ಮೇರೆಗೆ ನೀಡಲಾಗುವ (ಎಸ್ ಪಿ ವಿ) ವೀಸಾ ಸೌಲಭ್ಯವನ್ನು ಪುಣೆ ಹಾಗೂ ಬೆಂಗಳೂರಿಗೆ ವಿಸ್ತರಿಸಲಾಗಿದೆ ಎಂದು ಯುಕೆ ವೀಸಾ ಹಾಗೂ ಇಮಿಗ್ರೇಷನ್ (ಯುಕೆ VI) ಸರ್ವೀಸಸ್ ಗುರುವಾರದಂದು ಘೋಷಿಸಿದೆ.

ಈ ಸೌಲಭ್ಯದ ಮೂಲಕ ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ 24 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ವೀಸಾ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.

UK extends 24-hour visa service to Pune, Bengaluru

ತುರ್ತಾಗಿ ಯುಕೆಗೆ ತೆರಳಬೇಕಾದ ಸಂದರ್ಭ ಬಂದರೆ, ಭಾರತೀಯ ನಾಗರಿಕರು ಈ ಸೌಲಭ್ಯವನ್ನು ಬಳಸಬಹುದಾಗಿದೆ. ಎಸ್ ಪಿವಿ ಸೌಲಭ್ಯ ಬಳಸುವವರ ನೆರವಿಗಾಗಿ ಪ್ರತ್ಯೇಕ ಸಾಲು ಹಾಗೂ ಸಿಬ್ಬಂದಿಗಳಿರುತ್ತಾರೆ. ಸುಲಭವಾಗಿ, ತ್ವರಿತವಾಗಿ ವೀಸಾ ಪಡೆಯಬಹುದು ಎಂದು ಬ್ರಿಟಿಷ್ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ಹೇಳಲಾಗಿದೆ.

 ಚೆನ್ನೈಗೆ ಹೋಗಬೇಕಿಲ್ಲ, ಬೆಂಗಳೂರಲ್ಲೇ ಬ್ರಿಟನ್‌ ವೀಸಾ ಕೇಂದ್ರ ಆರಂಭ ಚೆನ್ನೈಗೆ ಹೋಗಬೇಕಿಲ್ಲ, ಬೆಂಗಳೂರಲ್ಲೇ ಬ್ರಿಟನ್‌ ವೀಸಾ ಕೇಂದ್ರ ಆರಂಭ

ಈ ವಿಶೇಷ ಸೌಲಭ್ಯವು ಪುಣೆ ಹಾಗೂ ಬೆಂಗಳೂರು ಕೇಂದ್ರದಲ್ಲಿ ಸದ್ಯಕ್ಕೆ ಲಭ್ಯವಿದ್ದು, ದೆಹಲಿ, ಚೆನ್ನೈ ಮತ್ತು ಮುಂಬೈಗೆ ವಿಸ್ತರಿಸಲಾಗುತ್ತದೆ.

ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನ್‌ 'ವಿಎಫ್‌ಎಸ್‌ ಗ್ಲೋಬಲ್‌ ಸರ್ವಿಸ್‌' ಸಹಯೋಗದಲ್ಲಿ 2017ರಲ್ಲಿ ಬೆಂಗಳೂರಿನ ನಲ್ಲೂರಹಳ್ಳಿಯ ಬ್ರಿಗೇಡ್ ಐಆರ್ ವಿ ಕಟ್ಟಡದಲ್ಲಿ ಯುಕೆ(ಬ್ರಿಟನ್) ವೀಸಾ ಅರ್ಜಿ ಕೇಂದ್ರವನ್ನು ಸ್ಥಾಪಿಸಲಾಯಿತು.

ವೀಸಾ ಬೇಕಾದವರು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ಸೋಮವಾರದಿಂದ ಶುಕ್ರವಾರದವರೆಗೆ ವಾರದ ಐದು ದಿನ ಈ ವೀಸಾ ಅರ್ಜಿ ಕೇಂದ್ರ ತೆರೆದಿರುತ್ತದೆ

English summary
UK Visas and Immigration (UKVI) services on Thursday announced an extension of Super Priority Visa service (SPV) to Pune and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X