ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ನಿಂದ ರಷ್ಯಾದ 23 ಅಧಿಕಾರಿಗಳ ಗಡಿಪಾರು!

|
Google Oneindia Kannada News

ಲಂಡನ್, ಮಾರ್ಚ್ 14: ರಷ್ಯಾದ ಬೇಹುಗಾರಿಕೆ ಏಜೆಂಟ್ (ಡಬಲ್ ಏಜೆಂಟ್) ಮೇಲಿನ ರಾಸಾಯನಿಕ ದಾಳಿಗೆ ಸಂಬಂಧಿಸಿದಂತೆ ರಷ್ಯಾದ 23 ರಾಜತಾಂತ್ರಿಕ ಅಧಿಕಾರಿಗಳನ್ನು ಇಂಗ್ಲೆಂಡ್ ಸರ್ಕಾರ ಗಡಿಪಾರು ಮಾಡಿ ಆದೇಶ ಹೊರಡಿಸಿದೆ.

ಡಬಲ್ ಏಜೆಂಟ್ ಸರ್ಗಿ ಸ್ಕ್ರಿಪಲ್ (66) ಮತ್ತು ಅವರ ಮಗಳು ಯುಲಿಯಾ (33) ಎಂಬುವವರು ಇಂಗ್ಲೆಂಡ್‌ನ ಸಾಲಿಸ್ಬರಿ ನಗರ ಕೇಂದ್ರ ಬೆಂಚ್ ವೊಂದರಲ್ಲಿ ಮಾ.4ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರ ಮೇಲೆ ರಾಸಾಯನಿಕ ದಾಳಿ ನಡೆದಿದ್ದು, ಇದಕ್ಕೆ ರಷ್ಯಾವೇ ಹೊಣೆ ಎಂದು ಇಂಗ್ಲೆಂಡ್ ಹೇಳಿದೆ.

ಉತ್ತರ ಕೊರಿಯಾ ಮೇಲಿನ ನಿರ್ಬಂಧ ನಿಷ್ಪ್ರಯೋಜಕ : ಪುಟಿನ್‌ ಉತ್ತರ ಕೊರಿಯಾ ಮೇಲಿನ ನಿರ್ಬಂಧ ನಿಷ್ಪ್ರಯೋಜಕ : ಪುಟಿನ್‌

ಕಳೆದ 30 ವರ್ಷಗಳಲ್ಲಿ ಅತ್ಯಂತ ಹೆಚ್ಚು ಅಧಿಕಾರಿಗಳನ್ನು ಗಡಿಪಾರು ಮಾಡಿದ ದಾಖಲೆಯನ್ನೀಗ ಇಂಗ್ಲೆಂಡ್ ಬರೆದಿದೆ!

UK expels 23 Russian diplomats over spy poisoning

ದಾಳಿಗೊಳಗಾದ ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪದೆಯುತ್ತಿದ್ದಾರೆ. ಗಡಿಪಾರಾದ 23 ಅಧಿಕಾರಿಗಳೂ ಒಂದು ವಾರದೊಳಗೆ ದೇಶ ಬಿಡುವಂತೆ ಬ್ರಿಟೀಷ್ ಪ್ರಧಾನಿ ತೆರೆಸಾ ಮೇ ಹೇಳಿದ್ದಾರೆ. ಇಷ್ಟೇ ಅಲ್ಲದೆ, ರಷ್ಯಾದೊಂದಿಗೆ ಎಲ್ಲ ರೀತಿಯ ಉನ್ನತ ಮಟ್ಟದ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಮೇ ಹೇಳಿದ್ದಾರೆ.

ರಷ್ಯಾ ನಮ್ಮೊಂದಿಗೆ ಹೀಗೆ ವರ್ತಿಸುತ್ತಿರುವುದು ಇದೇ ಮೊದಲೇನಲ್ಲ, ರಷ್ಯಾ ನಮಗೆ ಆಮಂತ್ರಣ ನೀಡಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೋಯ್ ಲಾವ್ರೋವ್ ಅವರ ಆಮಂತ್ರಣವನ್ನೂ ನಾವು ತಿರಸ್ಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ರಷ್ಯಾ-ಇಂಗ್ಲೆಂಡ್ ನಡುವೆ ಸಂಬಂಧ ಹದಗೆಟ್ಟಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದರೆ, ಅಮೆರಿಕ ಮಾತ್ರ ಈ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದೆ!

English summary
British Prime Minister Theresa May on Wednesday expelled 23 Russian diplomats over spy poisoning. The Guardian quoted May as saying, "23 Russian diplomats will be expelled. They have been identified as undeclared intelligence officers. It will be the largest expulsion for 30 years."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X