ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಚುನಾವಣೆ: ಸಮ್ಮಿಶ್ರ ಸರಕಾರದೊಂದಿಗೆ ಥೆರಸಾ ಮೇ ಮತ್ತೆ ಅಧಿಕಾರಕ್ಕೆ

By Sachhidananda Acharya
|
Google Oneindia Kannada News

ಲಂಡನ್, ಜೂನ್ 9: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು ಆಡಳಿತರೂಢ ಕನ್ಸರ್ವೇಟಿವ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅತಂತ್ರ ಸಂಸತ್ ಸೃಷ್ಟಿಯಾಗಿದ್ದರೂ ಇತರ ಪಕ್ಷಗಳ ಬೆಂಬಲದೊಂದಿದೆ ಹಾಲಿ ಪ್ರಧಾನ ಮಂತ್ರಿ ಥೆರೆಸಾ ಮೇ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

650 ಸದಸ್ಯ ಬಲದ ಬ್ರಿಟನ್ ಸಂಸತ್ತಿನಲ್ಲಿ ಬಹುಮತಕ್ಕೆ 326 ಸ್ಥಾನಗಳು ಅಗತ್ಯವಾಗಿದ್ದು ಥೆರೆಸಾ ಮೇ ನೇತೃತ್ವದ ಪಕ್ಷ 319 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಹುಮತಕ್ಕೆ ಕೇವಲ 7 ಸ್ಥಾನಗಳ ಕೊರತೆ ಆ ಪಕ್ಷಕ್ಕೆ ಎದುರಾಗಿದೆ.

[UK ಸಂಸತ್ ಚುನಾವಣೆ: ಅತಂತ್ರ ಸಂಸತ್ತಿನ ಸೂಚನೆ ನೀಡಿದ ಸಮೀಕ್ಷೆಗಳು]

UK Election 2017: With the support of DUP Theresa May to seek to form government

ಆದರೆ 'ಡೆಮಾಕ್ರಾಟಿಕ್ ಯೂನಿಯನಿಸ್ಟ್ ಆಫ್ ನಾರ್ಥರ್ನ್ ಐರ್ಲಾಂಡ್' (ಡಿಯುಪಿ) ಪಕ್ಷ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಪಕ್ಷದ ಬೆಂಬಲ ಗಿಟ್ಟಿಸಿಕೊಂಡಿರುವ ಥೆರೆಸಾ ಮೇ 329 ಸ್ಥಾನಗಳನ್ನು ಹೊಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ರಾಣಿ ಎಲಿಜಬೆತ್ ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

[ಬ್ರಿಟನ್ ಚುನಾವಣೆಯಲ್ಲಿ ನಾರಾಯಣ ಮೂರ್ತಿ ಅಳಿಯನಿಗೆ ಭರ್ಜರಿ ಗೆಲುವು]

ಬ್ರಿಟನ್ ಚುನಾವಣಾ ಫಲಿತಾಂಶ

ಒಟ್ಟು ಸ್ಥಾನಗಳು - 650

ಬಹಮತಕ್ಕೆ ಅಗತ್ಯವಾದ ಸ್ಥಾನಗಳು - 326

ಕನ್ಸರ್ವೇಟಿವ್ - 319

ಲೇಬರ್ ಪಾರ್ಟಿ - 261

ಸ್ಕಾಟಿಷ್ ನ್ಯಾಷನಲ್ ಪಾರ್ಟಿ - 35

ಲಿಬರಲ್ ಡೆಮಾಕ್ರಾಟಿಕ್ - 12

ಡಿಯುಪಿ - 10

ಇತರ - 13

ಲೇಬರ್ ಪಕ್ಷ ಜೆರೋಮಿ ಕಾರ್ಬೈನ್ ನೇತೃತ್ವದಲ್ಲಿ ಕಳೆದ ಬಾರಿಗಿಂತ 29 ಹೆಚ್ಚುವರಿ ಸ್ಥಾನಗಳನ್ನು ಗೆದ್ದಿತಾದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಲೇಬರ್ ಪಕ್ಷ ವಿಫಲವಾಗಿದೆ.

English summary
UK Parliament Election 2017: With support of small party DUP British Prime Minister Theresa May will ask Queen Elizabeth for permission to form a government after her Conservative Party lose its parliamentary majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X