ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಜೂಲಿಯನ್ ಅಸ್ಸಾಂಜೆ ಗಡಿಪಾರಿಗೆ ಅಧಿಕೃತ ಆದೇಶ

|
Google Oneindia Kannada News

ಲಂಡನ್, ಏಪ್ರಿಲ್ 20; ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಬ್ರಿಟನ್ ನ್ಯಾಯಾಲಯ ಆದೇಶ ಹೊರಡಿಸಿದೆ. ಅಸ್ಸಾಂಜೆ ಪರ ವಕೀಲರು ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಬ್ರಿಟನ್ ನ್ಯಾಯಾಲಯ ಬುಧವಾರ ಜೂಲಿಯನ್ ಅಸ್ಸಾಂಜೆಯನ್ನು ಗಡಿಪಾರು ಮಾಡಲು ಆದೇಶ ಹೊರಡಿಸಿದೆ. ಆಂತರಿಕ ಸಚಿವೆ ಪ್ರೀತಿ ಪಟೇಲ್ ಗಡಿಪಾರು ಮಾಡು ತೀರ್ಮಾನ ಕೈಗೊಳ್ಳಬೇಕಿದೆ. ಗಡಿಪಾರಿಗೆ ಅನುಮೋದನೆ ನೀಡಿದಲ್ಲಿ, ಅಸ್ಸಾಂಜೆ ಪರ ವಕೀಲರು ಹೈಕೋರ್ಟ್‌ ಮೊರೆ ಹೋಗಲಿದ್ದಾರೆ.

ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

ಇರಾಕ್ ಮತ್ತು ಅಘ್ಫಾನಿಸ್ತಾನದ ಯುದ್ಧಗಳಿಗೆ ಸಂಬಂಧಿಸಿದಂತೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ ಪ್ರಕರಣದ ವಿಚಾರಣೆಗಾಗಿ ಜೂಲಿಯನ್ ಅಸ್ಸಾಂಜೆ ಅಮೆರಿಕಕ್ಕೆ ಬೇಕಾಗಿದ್ದಾರೆ. ಅಮೆರಿಕ ಬೇಹುಗಾರಿಕೆ ಕಾನೂನಿನ ಉಲ್ಲಂಘನೆ ಸೇರಿದಂತೆ 18 ಪ್ರಕರಣಗಳನ್ನು ಅವರ ವಿರುದ್ಧ ದಾಖಲು ಮಾಡಲಾಗಿದೆ.

ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ

UK Court Issued Order To Extradite Julian Assange To United States

ಸಚಿವೆ ಪ್ರೀತಿ ಪಟೇಲ್ ಗಡಿಪಾರು ಕುರಿತು ತೀರ್ಮಾನ ಕೈಗೊಂಡರೆ ಜೂಲಿಯನ್ ಅಸ್ಸಾಂಜೆ 14 ದಿನದಲ್ಲಿ ಈ ಕುರಿತು ಮೇಲ್ಮನವಿ ಸಲ್ಲಿಕೆ ಮಾಡಲು ಅವಕಾಶವಿದೆ. ಬುಧವಾರ ಗಡಿಪಾರಿಗೆ ಆದೇಶ ಹೊರಡಿಸುವ ಮೂಲಕ ಲಂಡನ್‌ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಸುಧೀರ್ಘ ವಿಚಾರಣೆ ಪೂರ್ಣಗೊಂಡಿದೆ.

ಅಕ್ರಮ ವಲಸಿಗರಿಗೆ ಕಾಂಗ್ರೆಸ್ ರಕ್ಷಣೆ?: ವಿಕಿಲೀಕ್ಸ್ ಮಾಹಿತಿ ಬಹಿರಂಗಅಕ್ರಮ ವಲಸಿಗರಿಗೆ ಕಾಂಗ್ರೆಸ್ ರಕ್ಷಣೆ?: ವಿಕಿಲೀಕ್ಸ್ ಮಾಹಿತಿ ಬಹಿರಂಗ

ಜೂಲಿಯನ್ ಅಸ್ಸಾಂಜೆಯನ್ನು ಗಡಿಪಾರು ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಇದುವರೆಗೂ ಯಾವುದೇ ಅರ್ಜಿಗಳನ್ನು ಸಲ್ಲಿಕೆ ಮಾಡಿಲ್ಲ ಎಂದು ಅವರ ಪರ ವಕೀಲರು ಕಳೆದ ತಿಂಗಳು ಹೇಳಿದ್ದರು. ಬುಧವಾರ ಕೋರ್ಟ್‌ ಆದೇಶದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸ್ಸಾಂಜೆ ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಮೆರಿಕ ಸೇನೆಯ ಹಲವು ದಾಖಲೆಗಳನ್ನು ಸಂಗ್ರಹ ಮಾಡಿದ್ದರು. ಅದನ್ನು ತಮ್ಮ ವಿಕಿಲೀಕ್ಸ್ ತಾಣದ ಮೂಲಕ ಬಿಡುಗಡೆ ಮಾಡಿದ್ದರು. ಇದರಲ್ಲಿ ಅಮೆರಿಕ ಸೇನೆ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಸಿದ ದೌರ್ಜನ್ಯಗಳ ಕುರಿತು ಸಹ ಮಾಹಿತಿ ಇತ್ತು.

ಈ ದಾಖಲೆ ಬಿಡುಗಡೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ ಜೂಲಿಯನ್ ಅಸ್ಸಾಂಜೆ ವಿರುದ್ಧ ದೇಶದ್ರೋಹ ಸೇರಿದಂತೆ 18 ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳ ವಿಚಾರಣೆಗಾಗಿ ಅಸ್ಸಾಂಜೆ ಅಮೆರಿಕಕ್ಕೆ ಬೇಕಾಗಿದ್ದಾರೆ.

English summary
United Kingdom court issued a formal order to extradite WikiLeaks founder Julian Assange to the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X