ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

|
Google Oneindia Kannada News

Recommended Video

ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ | ಮಲ್ಯಗೆ ದೇಶಭ್ರಷ್ಟ ಆರ್ಥಿಕ ಅಪರಾಧಿ ಪಟ್ಟ

ಬ್ರಿಟನ್, ಫೆಬ್ರವರಿ 04 : ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ. ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿಜಯ ಮಲ್ಯ ಪರಾಗಿಯಾಗಿದ್ದರು.

ಉದ್ಯಮಿ ವಿಜಯ ಮಲ್ಯ ಗಡಿಪಾರು ಮಾಡುವ ಪತ್ರಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಇದರಿಂದಾಗಿ ವಿಜಯ ಮಲ್ಯ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

UK accepted Vijay Mallya extradition order

ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್ ವಿಜಯ ಮಲ್ಯ ಗಡಿಪಾರಿಗೆ ಒಪ್ಪಿಗೆ ನೀಡಿತ್ತು. ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಿತ್ತು. ಅವರು ಇಂದು ಗಡಿಪಾರಿಗೆ ಒಪ್ಪಿಗೆ ನೀಡಿ, ನ್ಯಾಯಾಲಯದ ಆದೇಶ ಪ್ರತಿಗೆ ಸಹಿ ಹಾಕಿದ್ದಾರೆ.

ವಿಜಯ ಮಲ್ಯ ಇನ್ನು ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿ!ವಿಜಯ ಮಲ್ಯ ಇನ್ನು ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿ!

ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಲು ಕಾನೂನು ತೊಡಕು ಉಂಟಾಗಿತ್ತು. ಮಲ್ಯ ಗಡಿಪಾರು ಮಾಡಲು ಯುಕೆ ಸರ್ಕಾರ ಎಂಎಲ್‌ಟಿ ಒಪ್ಪಂದ ಅಡ್ಡವಾಗಿತ್ತು. ಈಗ ಎಲ್ಲಾ ಕಾನೂನು ತೊಡಕು ಅಂತ್ಯಗೊಂಡಿದ್ದು, ಗಡಿಪಾರಿಗೆ ಅಂಕಿತ ಬಿದ್ದಿದೆ.

ಸಾಲ ಮರುಪಾವತಿಗೂ, ಹಸ್ತಾಂತರ ಪ್ರಕರಣಕ್ಕೂ ಸಂಬಂಧವಿಲ್ಲ : ಮಲ್ಯಸಾಲ ಮರುಪಾವತಿಗೂ, ಹಸ್ತಾಂತರ ಪ್ರಕರಣಕ್ಕೂ ಸಂಬಂಧವಿಲ್ಲ : ಮಲ್ಯ

A mutual legal assistance treaty (MLAT) ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಡ್ 1995ರಲ್ಲಿ ಸಹಿ ಮಾಡಿದ್ದವು. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತೆ ಮಾಡಿಕೊಳ್ಳಲು ಅವಕಾಶವಿದೆ.

ವಿಜಯ ಮಲ್ಯ ಅವರು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಣೆ ಮಾಡಲಾಗಿದೆ. ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಈ ಕುರಿತು ಘೋಷಣೆ ಮಾಡಲಾಗಿದೆ. ವಿಜಯ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲು ಸಾಕಷ್ಟು ಒತ್ತಡವಿತ್ತು.

English summary
United Kingdom home secretary signed for the business tycoon Vijay Mallya extradition order. Vijay Mallya's extradition accepted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X