ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ?

|
Google Oneindia Kannada News

ಸ್ಯಾನ್ ಫ್ರಾನಿಸ್ಕೋ, ಸೆಪ್ಟೆಂಬರ್ 12: ಕ್ಯಾಲಿಫೋರ್ನಿಯಾ ಮೂಲದ ಉಬರ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಚಾಲಕರಿಗೆ ನೀಡಬೇಕಿರುವ ಗುತ್ತಿಗೆ ಮೊತ್ತವನ್ನು ನೀಡದೆ ಭಾರಿ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ.

ಪ್ರತಿ ಗಂಟೆಗೆ ನೀಡಬೇಕಿರುವ 9.07 ಡಾಲರ್ ಭತ್ಯೆಯನ್ನು ನೀಡುತ್ತಿಲ್ಲ. ಚಾಲಕರನ್ನು ಉದ್ಯೋಗಿಗಳಂತೆ ಪರಿಗಣಿಸದೆ ಅವರಿಗೆ ಸಿಗಬೇಕಿರುವ ಸಂಬಳ, ಭತ್ಯೆ ಗುಳಂ ಮಾಡಲಾಗಿದೆ. ಈ ರೀತಿ 500 ಮಿಲಿಯನ್ ಡಾಲರ್ ಗೂ ಅಧಿಕ ಮೊತ್ತ ಉಳಿಸಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೋದಿ ಭರವಸೆ : ಉಬರ್ ನಿಂದ ಶೀಘ್ರವೇ ಏರ್ ಟ್ಯಾಕ್ಸಿ ಹಾರಾಟಮೋದಿ ಭರವಸೆ : ಉಬರ್ ನಿಂದ ಶೀಘ್ರವೇ ಏರ್ ಟ್ಯಾಕ್ಸಿ ಹಾರಾಟ

ಚಾಲಕರಿಗೆ ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಭತ್ಯೆ ಸಿಗುತ್ತಿಲ್ಲ, ಕನಿಷ್ಟ ವೇತನ, ಓವರ್ ಟೈಮ್, ಊಟ, ವಿಶ್ರಾಂತಿ ಅವಧಿ, ಕಾರ್ಮಿಕ ಪರಿಹಾರ, ನಿರುದ್ಯೋಗ ಭತ್ಯೆ, ಆರೋಗ್ಯ ವಿಮೆ ಯಾವುದೂ ಅವರನ್ನು ತಲುಪುತ್ತಿಲ್ಲ ಎಂದು ವಾದಿಸಲಾಗಿದೆ.

Uber accused of saving $500 million a year by cheating drivers

ಕಳೆದ ಏಪ್ರಿಲ್ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾ ಸುಪ್ರೀಂಕೋರ್ಟ್, ಸ್ವತಂತ್ರ ಗುತ್ತಿಗೆದಾರರನ್ನು ಕಾರ್ಮಿಕರಂತೆ ಪರಿಗಣಿಸಲು ಆದೇಶಿಸಿತ್ತು. ಇದನ್ನು ಉಲ್ಲೇಖಿಸಿರುವ ದೂರುದಾರರಾದ ಕಾರು ಸರ್ವೀಸ್ ಸಂಸ್ಥೆ, ಉಬರ್ ನಿಂದ ಗುತ್ತಿಗೆ ಅಧಾರಿತ ಸಿಬ್ಬಂದಿಗಳಿಗೆ ಮೋಸವಾಗಿದೆ ಎಂದಿದೆ.

ಉಬರ್ ನಿಂದ ಹಾರಾಡುವ ಕ್ಯಾಬ್ ಸೇವೆ, ಐದು ದೇಶಗಳಲ್ಲಿ ಭಾರತವೂ ಒಂದುಉಬರ್ ನಿಂದ ಹಾರಾಡುವ ಕ್ಯಾಬ್ ಸೇವೆ, ಐದು ದೇಶಗಳಲ್ಲಿ ಭಾರತವೂ ಒಂದು

Diva Limousine v. Uber Technologies Inc., 18-cv-05546, U.S. District Court, Northern District of California (San Francisco)- ಬಗ್ಗೆ ಉಬರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
Uber Technologies Inc. may be saving more than $500 million a year by misclassifying its California drivers as independent contractors, according to a lawsuit that claims the ride-hailing company is flouting a ruling by the state’s highest court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X