• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಸಾ ಗಗನಯಾನ ತರಬೇತಿಗೆ ಆಯ್ಕೆಯಾದ ಮೊದಲ ಅರಬ್ ಮಹಿಳೆ

|
Google Oneindia Kannada News

ದುಬೈ, ಏಪ್ರಿಲ್ 12: ನಾಸಾ ಗಗನಯಾನ ತರಬೇತಿಗೆ 27 ವರ್ಷದ ನೋರಾ ಅಲ್ ಮಾತ್ರೂಶಿ ಅವರನ್ನು ಸಂಯುಕ್ತ ಅರಬ್ ಸಂಸ್ಥಾನ ಆಯ್ಕೆ ಮಾಡಿದ್ದು, ಗಗನಯಾನ ತರಬೇತಿಗೆ ಯುಎಇಯಿಂದ ಆಯ್ಕೆಯಾದ ಮೊದಲ ಅರಬ್ ಮಹಿಳೆ ಎನಿಸಿಕೊಂಡಿದ್ದಾರೆ.

ಅಬುದಾಬಿಯ ನ್ಯಾಷನಲ್ ಪೆಟ್ರೋಲಿಯಂ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌರಾ ಅಲ್ ಮಾತ್ರೂಶಿ, ನಾಸಾದ 2021ರ ಗಗನಯಾನ ತರಬೇತಿ ತಂಡವನ್ನು ಶೀಘ್ರ ಸೇರಿಕೊಳ್ಳಲಿರುವುದಾಗಿ ತಿಳಿದುಬಂದಿದೆ. ಯುಎಇ ಬಾಹ್ಯಾಕಾಶ ಯೋಜನೆಯಡಿ ತರಬೇತಿ ಪಡೆದ ಒಟ್ಟು ನಾಲ್ವರು ಗಗನಯಾತ್ರಿಗಳಲ್ಲಿ ನೌರಾ ಅಲ್ ಮಾತ್ರೂಶಿ ಒಬ್ಬರಾಗಿದ್ದು, ಮೊಹಮದ್ ಅಲ್ ಮುಲ್ಲಾ ಎಂಬುವವರು ಗಗನಯಾನ ನಾಸಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜುಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು

ಅರಬ್‌ನ ಮೊದಲ ಮಹಿಳಾ ಗಗನಯಾತ್ರಿ ನೌರಾ ಅವರ ಹೆಸರನ್ನು ದುಬೈ ದೊರೆ ಶೇಖ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

4300 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ವೈಜ್ಞಾನಿಕ ಜ್ಞಾನ, ಶಿಕ್ಷಣ ಹಾಗೂ ಪ್ರಾಯೋಗಿಕ ಅನುಭವದ ಆಧಾರದಲ್ಲಿ ನೌರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದುಬೈನ ಮೊಹಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರ ಮಾಹಿತಿ ನೀಡಿದೆ. 2017ರಲ್ಲಿ ಯುಎಇ ರಾಷ್ಟ್ರೀಯ ಬಾಹ್ಯಾಕಾಶ ಕಾರ್ಯಕ್ರಮ ಆರಂಭಿಸಿತ್ತು.

English summary
United arab emirates selected Nora al Matrooshi a first arab woman to train as an astronaut in NASA,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X