ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಆಫರ್ ನೀಡಿದ ರೆಸ್ಟೋರೆಂಟ್

|
Google Oneindia Kannada News

ದುಬೈ, ಜನವರಿ.26: ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಖಾಸಗಿ ರೆಸ್ಟೋರೆಂಟ್ ಒಂದು ಬಂಪರ್ ಆಫರ್ ನೀಡಿದೆ. ಕೊವಿಡ್-19 ಲಸಿಕೆ ಪಡೆದವರಿಗೆ ವಿನಾಯಿತಿ ನೀಡುವುದಾಗಿ ದುಬೈನ ರೆಸ್ಟೋರೆಂಟ್ ಘೋಷಿಸಿದೆ.

ದುಬೈನಲ್ಲಿರುವ ಗೇಟ್ಸ್ ಹಾಸ್ಟಿಟಲಿಟಿ ಅಧೀನದ ಮೂರು ರೆಸ್ಟೋರೆಂಟ್ ನಲ್ಲಿ ವಿನಾಯಿತಿ ನೀಡುವುದಕ್ಕೆ ನಿರ್ಧರಿಸಲಾಗಿದೆ. ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡವರಿಗೆ ಶೇ.10ರಷ್ಟು ಮತ್ತು ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಶೇ.20ರಷ್ಟು ವಿನಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿದೆ.

ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ! ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ!

ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣಪತ್ರ ತೋರಿಸಿದ್ದಲ್ಲಿ ಅಂಥವರಿಗೆ ವಿನಾಯಿತಿ ದರದಲ್ಲಿ ಊಟ ಮತ್ತು ತಿಂಡಿಯನ್ನು ನೀಡಲಾಗುತ್ತದೆ. ಇತ್ತೀಚಿಗೆ ಇದೇ ರೆಸ್ಟೋರೆಂಟ್ ಗಳಲ್ಲಿ "ನಾವು ಪ್ರೀತಿಯನ್ನು ಹಂಚಬೇಕು, ಬದಲಿಗೆ ರೋಗಾಣು ಹರಡಬಾರದು(Spread Love, Not Rona)" ಎಂದು ಹಾಕಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವೈರಲ್ ಆಗಿತ್ತು.

UAE Restaurant Are Offering Discounts To Diners Who Have Been Vaccinated Against Coronavirus

ರೆಸ್ಟೋರೆಂಟ್ ಆಫರ್ ಹಿಂದೆ ಎರಡು ದೃಷ್ಟಿಕೋನ:

ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡವರಿಗೆ ವಿನಾಯಿತಿ ದರದಲ್ಲಿ ಡಿನ್ನರ್ ನೀಡುವುದಕ್ಕೆ ರೆಸ್ಟೋರೆಂಟ್ ಆಫರ್ ನೀಡಿದೆ. ಕೆಲವರು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಲು ಪ್ರೇರಿಪಿಸುವ ದೃಷ್ಟಿಯಲ್ಲಿ ಉತ್ತಮ ನಡೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲ ರೆಸ್ಟೋರೆಂಟ್ ಮಾಲೀಕರ ಮಾರ್ಕೇಟಿಂಗ್ ನೀತಿ ಎಂದು ಟೀಕಿಸುತ್ತಿದ್ದಾರೆ.

ದುಬೈನಲ್ಲಿ ಶೇ.25ರಷ್ಟು ಮಂದಿಗೆ ಲಸಿಕೆ:

ಯುನೈಟೆಡ್ ಅರಬ್ ಎಮರೇಟ್ಸ್ ನಲ್ಲಿರುವ ಒಟ್ಟು ಜನಸಂಖ್ಯೆಯ ಶೇ.25ರಷ್ಟು ಜನರಿಗೆ ಈಗಾಗಲೇ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ದೇಶದ 1 ಕೋಟಿ ಜನಸಂಖ್ಯೆಯಲ್ಲಿ ಈವರೆಗೂ 25 ಲಕ್ಷ ಜನರಿಗೆ ಲಸಿಕೆ ವಿತರಿಸಲಾಗಿದೆ. ಇಸ್ರೇಲ್ ನಂತರದಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ರಾಷ್ಟ್ರದ ಸ್ಥಾನದಲ್ಲಿ ಯುಎಇ ಗುರುತಿಸಿಕೊಂಡಿದೆ.

English summary
UAE Restaurant Are Offering Discounts To Diners Who Have Been Vaccinated Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X