ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬುಧಾಬಿ: ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಅಧ್ಯಕ್ಷ

|
Google Oneindia Kannada News

ಅಬುಧಾಬಿ ಜೂನ್ 29: ಜಿ-7 ಶೃಂಗಸಭೆಯ ಬಳಿಕ ಮಂಗಳವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಬುಧಾಬಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಆತ್ಮೀಯ ಸ್ವಾಗತ ಕೋರಿದರು. ಮಾಹಿತಿಯ ಪ್ರಕಾರ, ಪಿಎಂ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರೊಂದಿಗೆ ಅಬುಧಾಬಿಯಲ್ಲಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಗಲ್ಫ್ ರಾಷ್ಟ್ರದ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಅಲ್ಲಿಂದ ನಿರ್ಗಮಿಸಿದರು.

ಅಬುಧಾಬಿಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮೂಲಕ, "ಅತ್ಯಂತ ವಿಶೇಷ ರೀತಿಯಲ್ಲಿ, ಹೆಚ್.ಎಚ್. ​​ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ರಾಜಮನೆತನದ ಸದಸ್ಯರು, ಅಬುಧಾಬಿಗೆ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು'' ಎಂದು ತಿಳಿಸಿದ್ದಾರೆ.

UAE President warmly met PM Modi in Abu Dhabi, watch video

ಗಲ್ಫ್ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ವೈಯಕ್ತಿಕವಾಗಿ ಸಂತಾಪ ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಆಗಮಿಸಿದರು. ಮಾಜಿ ರಾಷ್ಟ್ರಪತಿಯವರ ನಿಧನಕ್ಕೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಯುಎಇಯಿಂದ ನಿರ್ಗಮಿಸಿದರು. ಶೇಖ್ ಖಲೀಫಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ 73 ನೇ ವಯಸ್ಸಿನಲ್ಲಿ ಮೇ 13 ರಂದು ನಿಧನರಾದರು.

ಶೇಖ್ ಖಲೀಫಾ ಯಾರು?

ಶೇಖ್ ಖಲೀಫಾ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹಿರಿಯ ಮಗ. ಅವರು ಯುಎಇ ಅಧ್ಯಕ್ಷರಾಗಿ ಮತ್ತು ಅಬುಧಾಬಿಯ ಆಡಳಿತಗಾರರಾಗಿ 3 ನವೆಂಬರ್ 2004 ರಿಂದ ಅವರ ಮರಣದ ತನಕ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಕಳೆದ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಭೇಟಿ ನೀಡಿದ್ದರು ಮತ್ತು ಶೇಖ್ ಖಲೀಫಾ ಅವರ ನಿಧನದ ಬಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಯಕತ್ವಕ್ಕೆ ಸಂತಾಪ ಸೂಚಿಸಿದರು.

UAE President warmly met PM Modi in Abu Dhabi, watch video

Recommended Video

ಹೊಸ ದಾಖಲೆ ಬರೆದ ದೀಪಕ್ ಹೂಡಾ | *Cricket | OneIndia Kannada

2019 ರಲ್ಲಿ ಯುಎಇಯ ಅತ್ಯುನ್ನತ ಗೌರವ

ಆಗಸ್ಟ್ 2019 ರಲ್ಲಿ ಯುಎಇಗೆ ಮೋದಿಯವರ ಕೊನೆಯ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಅವರು ಯುಎಇ ಅಧ್ಯಕ್ಷರಿಂದ ದೇಶದ ಅತ್ಯುನ್ನತ ಪ್ರಶಸ್ತಿ 'ಆರ್ಡರ್ ಆಫ್ ಜಾಯೆದ್' ಪಡೆದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಯುಎಇ ಚೀನಾ ಮತ್ತು ಯುಎಸ್ ನಂತರ 2019-20 ನೇ ಸಾಲಿನಲ್ಲಿ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ

English summary
Prime Minister Narendra Modi, who arrived in the United Arab Emirates on Tuesday after the G-7 summit, was warmly received in Abu Dhabi by the President of the UAE (UAE), Sheikh Mohamed bin Zayed Al Nahyan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X