ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂದಿ ಜಿಲಾಟಿನ್ ನಿಂದ ಮಾಡಿದರೂ ಲಸಿಕೆ ತಗೊಳ್ಳಿ: ಇಸ್ಲಾಂ ಫತ್ವಾ ಸಮಿತಿ ಸೂಚನೆ

|
Google Oneindia Kannada News

ಸೌದಿ ಅರೇಬಿಯಾ, ಡಿಸೆಂಬರ್ 23: ಕೊರೊನಾ ವೈರಸ್ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸುತ್ತಿರುವ ಹಲವು ಲಸಿಕೆಗಳಲ್ಲಿ ಹಂದಿ ಮಾಂಸದ ಜಿಲಾಟಿನ್ ಅಂಶದ ಬಳಕೆ ಕುರಿತು ಈಚೆಗೆ ಇಂಡೋನೇಷ್ಯಾದಲ್ಲಿ ವಿವಾದ ಉಂಟಾಗಿತ್ತು.

ಈ ಕಾರಣಕ್ಕೆ ಕೊರೊನಾ ಲಸಿಕೆಗಳನ್ನು ತಿರಸ್ಕರಿಸುವಂತೆ ಇಸ್ಲಾಂನ ಕೆಲವು ಧಾರ್ಮಿಕ ಗುರುಗಳು ಕರೆ ನೀಡಿದ್ದು, ಲಸಿಕೆ ಬಳಕೆಯ ಕುರಿತು ಚರ್ಚೆಗಳು ಆರಂಭವಾಗಿದ್ದವು. ಇದೀಗ ಹಂದಿ ಮಾಂಸದ ಜಿಲಾಟಿನ್ ಬಳಸಿದ್ದರೂ ಲಸಿಕೆ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಇಸ್ಲಾಂ ಪ್ರಾಧಿಕಾರ ಸೂಚನೆ ನೀಡಿದೆ.

ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ; ಬಳಕೆಗೆ ಒಪ್ಪಿದ ವ್ಯಾಟಿಕನ್ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ; ಬಳಕೆಗೆ ಒಪ್ಪಿದ ವ್ಯಾಟಿಕನ್

ಯುನೈಟೆಡ್ ಅರಬ್ ಎಮಿರೇಟ್ಸ್ ನ ಇಸ್ಲಾಂ ಫತ್ವಾ ಸಮಿತಿ, ಜಿಲಾಟಿನ್ ಬಳಸಿದ್ದರೂ ಮುಸ್ಲಿಮರು ಲಸಿಕೆ ಪಡೆಯಲು ಸಮಸ್ಯೆಯಿಲ್ಲ ಎಂದು ಅನುಮತಿ ನೀಡಿದೆ. ಇಸ್ಲಾಮಿಕ್ ಪದ್ಧತಿ ಪ್ರಕಾರ, ಹಂದಿ ಮಾಂಸದ ಉತ್ಪನ್ನ ಬಳಸುವುದು ನಿಷಿದ್ಧ. ಆದರೆ ಜೀವಕ್ಕೇ ಮಾರಕವಾಗಿರುವ ಕೊರೊನಾ ಸೋಂಕಿನ ವಿರುದ್ಧ ನಮ್ಮನ್ನು ನಾವು ಕಾಪಾಡಿಕೊಳ್ಳುವುದೂ ಮುಖ್ಯ. ಲಸಿಕೆಯಲ್ಲಿ ಹಂದಿ ಮಾಂಸದ ಉತ್ಪನ್ನ ಬಳಸಿರುವ ಒಂದೇ ಕಾರಣಕ್ಕೆ ಮುಸ್ಲಿಮರು ಲಸಿಕೆಯಿಂದ ದೂರವುಳಿಯಬಾರದು ಎಂದು ತಿಳಿಸಿದೆ.

UAE Islamic Council Approves Corona Vaccine With Pork Gelatin

ಕೊರೊನಾ ವೈರಸ್ ಲಸಿಕೆಯು ಇಸ್ಲಾಂ ಧರ್ಮದ ನಿರ್ಬಂಧಗಳಿಗೆ ಒಳಪಡುವುದಿಲ್ಲ. ಪ್ರಸ್ತುತ ಜೀವವನ್ನು ರಕ್ಷಿಸಿಕೊಳ್ಳುವ ಅಗತ್ಯವೇ ಹೆಚ್ಚಿದ್ದು, ಬೇರೆ ಪರ್ಯಾಯವಿಲ್ಲದಿರುವ ಈ ಸಂದರ್ಭದಲ್ಲಿ ಲಸಿಕೆ ಬಳಕೆಗೆ ಅನುಮತಿ ಇದೆ ಎಂದು ಸಮಿತಿಯ ಅಧ್ಯಕ್ಷ ಶೇಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಕೊರೊನಾ ವೈರಸ್ ಪ್ರಕರಣದಲ್ಲಿ ಹಂದಿ ಮಾಂಸವನ್ನು ಔಷಧಿಯಂತೆ ಪರಿಗಣಿಸಲಾಗುತ್ತಿದೆ, ಆಹಾರದಂತೆ ಅಲ್ಲ. ಹೀಗಾಗಿ ವಿಶ್ವಕ್ಕೆ ಮಾರಕವಾಗಿರುವ ಸೋಂಕಿಗೆ ಲಸಿಕೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದಿದ್ದಾರೆ.

English summary
United Arab Emirates Islamic authority, the UAE Fatwa Council, has approved for the use of coronavirus vaccines to Muslims even if they contain pork gelatin
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X