ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್‌ಕಾಂಗ್‌ಗೆ ಅಪ್ಪಳಿಸಿದ ಟೈಫೂನ್ ಚಂಡಮಾರುತ, ಶಾಲೆಗಳು ಬಂದ್

|
Google Oneindia Kannada News

ಬೀಜಿಂಗ್, ಅಕ್ಟೋಬರ್ 13: ಚೀನಾದ ಹಾಂಗ್‌ಕಾಂಗ್‌ನಲ್ಲಿ ಟೈಫೂನ್ ಚಂಡಮಾರುತ ದಾಳಿ ಇಟ್ಟಿದೆ. ಪರಿಣಾಮ ಶಾಲೆಗಳನ್ನು ಮುಚ್ಚಲಾಗಿದೆ. ಹಾಗೆಯೇ ಷೇರು ಮಾರುಕಟ್ಟೆ ಹಾಗೂ ಸರ್ಕಾರಿ ಸೇವೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ಗಂಟೆಗೆ 83 ಕಿ.ಮೀ ವೇಗದೊಂದಿಗೆ ಚಂಡಮಾರುತ ಬೀಸುತ್ತಿದೆ. ಕೆಲ ಸಂದರ್ಭಗಳಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತ ಗಂಟೆಗೆ 101 ಕಿ.ಮೀ ವೇಗದೊಂದಿಗೆ ಮುನ್ನುಗ್ಗುತ್ತಿದೆ ಎಂದು ಹಾಂಕ್‌ಕಾಂಗ್ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ದಕ್ಷಿಣ ಚೀನಾ ಸಮುದ್ರದ ಉತ್ತರ ಭಾಗದ ಮೂಲಕ ಚೀನಾದ ಹೈನಾನ್ ಪ್ರಾಂತ್ಯದತ್ತ ಚಂಡಮಾರುತ ಸಾಗುವ ನಿರೀಕ್ಷೆ ಇದೆ. ನಂತರ ವಿಯೆಟ್ನಾಂನ ಉತ್ತರ ಭಾಗದಲ್ಲಿ ನೆಲಸ್ಪರ್ಶ ಮಾಡಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Typhoon Prompts Hong Kong To Close Schools, Stock Market

ಹಾಂಗ್‌ಕಾಂಗ್‌ಗೆ ನಗರದ ದಕ್ಷಿಣ ಭಾಗದ ಮೂಲದ ಚಂಡಮಾರುತ ಹಾಯ್ದು ಹೋಗಿದೆ. ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಚಂಡಮಾರುತಗಳು ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆಯನ್ನು ಚಂಡಮಾರುತ ಎಂದು ಕರೆಯಲಾಗುತ್ತದೆ. ಬಿರುಗಾಳಿಯ ರಭಸವು ಸಂಜೆಯ ಬಳಿಕ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ವಿಷುವುದ್ರೇಖೆಯಿಂದ ಸುಮಾರು 10 ಡಿಗ್ರಿ ದೂರದಲ್ಲಿ ಹೆಚ್ಚಾಗಿ ಇದು ಉಂಟಾಗುತ್ತದೆ. ಭೂಮಿ ತಿರುಗುವ ದಿಕ್ಕಿನಲ್ಲೇ ಇದು ಸುತ್ತುತ್ತದೆ.ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ. ದಕ್ಷಿಣ ಗೋಳದಲ್ಲಿ ಚಂಡಮಾರುತ ಗಡಿಯಾರದ ದಿಕ್ಕಿನಲ್ಲಿ ಸುತ್ತುತ್ತದೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳೇಳುತ್ತವೆ.

ಟೈಫೂನ್ ರಚನೆಯ ಕಾರ್ಯವಿಧಾನವು ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ, ಏಕೆಂದರೆ ಅದರ ಗೋಚರಿಸುವ ಸ್ಥಳಕ್ಕೆ ಅಗತ್ಯ ಉಪಕರಣಗಳನ್ನು ತಲುಪಿಸುವುದು ಅಸಾಧ್ಯ. ಚಂಡಮಾರುತದ ನೋಟವು ಹೆಚ್ಚಿನ ಪ್ರಮಾಣದ ತೇವಾಂಶದ ಕುಸಿತದಿಂದ ಮುಂಚಿತವಾಗಿರುತ್ತದೆ ಎಂದು ಮಾತ್ರ ತಿಳಿದಿದೆ. ಅಲ್ಲದೆ, ಕೆಲವು ಟೈಫೂನ್ ಗಳು ಇತರರಿಗಿಂತ ಹೆಚ್ಚು ತೇವಾಂಶವನ್ನು ಏಕೆ ಹೊಂದಿರುತ್ತವೆ ಎಂಬುದನ್ನು ವಿಜ್ಞಾನಿಗಳು ಇನ್ನೂ ವಿವರಿಸಲು ಸಾಧ್ಯವಿಲ್ಲ.

ಚಂಡಮಾರುತವು ಫಿಲಿಪೈನ್ಸ್ ಪೂರ್ವದಿಂದ ವಾಯುವ್ಯಕ್ಕೆ ಚಲಿಸುತ್ತದೆ, ತೈವಾನ್, ಜಪಾನ್ ಅನ್ನು ಮುಟ್ಟುತ್ತದೆ ಮತ್ತು ಬೇರಿಂಗ್ ಜಲಸಂಧಿಯನ್ನು ತಲುಪುತ್ತದೆ.

ಮಧ್ಯ ಅಮೆರಿಕದ ಕರಾವಳಿಯಲ್ಲಿ ಟೈಫೂನ್ ತನ್ನ ಚಲನೆಯನ್ನು ಆರಂಭಿಸುತ್ತದೆ. ಕೊರಿಯಾ, ಚೀನಾ, ಭಾರತ, ಮೆಕ್ಸಿಕೋ ಮತ್ತು ರಷ್ಯಾದ ಪ್ರಿಮೊರಿ, ಕುರಿಲೆ ದ್ವೀಪಗಳುಮತ್ತು ಕಮ್ಚಟ್ಕಾ ... ಎಲ್ಲೆಡೆ ಚಂಡಮಾರುತಗಳು ವಿನಾಶಕಾರಿ ಶಕ್ತಿಯನ್ನು ಹೊಂದಿವೆ.

ಚಂಡಮಾರುತದ ಅವಧಿ ಜೂನ್‌ನಲ್ಲಿ ಆರಂಭವಾಗಿ ಅಕ್ಟೋಬರ್ ನಲ್ಲಿ ಕೊನೆಗೊಳ್ಳುತ್ತದೆ. ಆದರೂ ಕೆಲವೊಮ್ಮೆ ಚಂಡಮಾರುತಗಳು ಚಳಿಗಾಲದಲ್ಲೂ ಸಂಭವಿಸುತ್ತವೆ.
ಅಮೆರಿಕದಲ್ಲಿ ಕತ್ರಿನಾ ಹುರಿಕೇನ್‌, ಫಿಲಿಪ್ಪೀನ್ಸ್‌ನಲ್ಲಿ ನಾರಿ ಟೈಫೂನ್‌ ಅಪ್ಪಳಿಸಿದ ಸುದ್ದಿಯನ್ನು ನಾವೆಲ್ಲ ಕೇಳಿದ್ದೇವೆ.

ವಾಸ್ತವವಾಗಿ ಸೈಕ್ಲೋನ್‌ , ಹುರಿಕೇನ್‌ ಮತ್ತು ಟೈಫೂನ್‌ ಇವೆಲ್ಲವೂ ಉಷ್ಣವಲಯದ ಚಂಡಮಾರುತಗಳೇ... ಅಟ್ಲಾಂಟಿಕ್‌ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನ ಹುರಿಕೇನ್‌ ಎಂದು ಕರೆಯುತ್ತಾರೆ. ಪೆಸಿಫಿಕ್‌ ಮಹಾಸಾಗರದಲ್ಲಿ ಸೃಷ್ಟಿಯಾಗುವ ಚಂಡಮಾರುತವನ್ನ ಟೈಫೂನ್‌ ಎಂದು ಹೇಳುತ್ತಾರೆ. ನಮ್ಮ ಹಿಂದೂ ಮಹಾಸಾಗರದ ಚಂಡಮಾರುತವನ್ನ ಸೈಕ್ಲೋನ್‌ ಎಂದು ಸಂಬೋಧಿಸುತ್ತಾರೆ.

ಸಮುದ್ರ ಪ್ರದೇಶದಲ್ಲಿ ಈ ಚಂಡಮಾರುತದ ತೀವ್ರತೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ನಾಡಿನತ್ತ ಬಂದಂತೆಲ್ಲಾ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತದೆ. ಹೀಗಾಗಿ ಸಮುದ್ರ ದಾಟಿ ಮೊದಲು ಸಿಗುವ ಕರಾವಳಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಘನಘೋರವಾಗಿರುತ್ತದೆ.

ಭೂಭಾಗದ ಒಳಬಂದಂತೆಲ್ಲಾ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ... ಆದರೆ, ಭೀಕರ ಮಳೆ ಒಳಪ್ರದೇಶಗಳನ್ನ ಬಾಧಿಸುವ ಸಾಧ್ಯತೆ ಇರುತ್ತದೆ

English summary
Hong Kong suspended classes, stock market trading and government services as a typhoon passed south of the city Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X