ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾನ್‌ಫೋನ್ ತೂಫಾನಿನ ಅಬ್ಬರಕ್ಕೆ ಕನಿಷ್ಠ 28 ಸಾವು

|
Google Oneindia Kannada News

ಮನಿಲಾ, ಡಿಸೆಂಬರ್ 27: ಕ್ರಿಸ್ ಮಸ್ ದಿನದಿಂದ ಫಿಲಿಪ್ಪೀನ್ಸ್‌ನ ಕೇಂದ್ರ ಭಾಗದ ವಿವಿಧ ದ್ವೀಪಗಳ ಮೇಲೆ ಅಪ್ಪಳಿಸಿರುವ ಭೀಕರ ಫಾನ್‌ಫೋನ್ ತೂಫಾನು ಸೃಷ್ಟಿಸಿರುವ ಅನಾಹುತಕ್ಕೆ ಕನಿಷ್ಠ 28 ಮಂದಿ ಬಲಿಯಾಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ವಿವಿಧ ಪ್ರಾಂತ್ಯಗಳಲ್ಲಿ ವೇಗವಾಗಿ ಬೀಸುತ್ತಿರುವ ಚಂಡಮಾರುತದಿಂದ ಮಂಗಳವಾರ ಅನೇಕ ಕಡೆ ಭೂಕುಸಿತದಿಂದ ತೀವ್ರ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅನೇಕ ಕಡೆ ಮನೆಗಳು ನೆಲಕಚ್ಚಿವೆ. ರಾಷ್ಟ್ರೀಯ ವಿಪತ್ತು ಅಪಾಯ ನಿಯಂತ್ರಣ ಸಮಿತಿಯ ಪ್ರಕಾರ 12 ಜನರು ನಾಪತ್ತೆಯಾಗಿದ್ದಾರೆ.

ತೂಫಾನಿಗೆ ತತ್ತರಿಸಿದ ಜಪಾನ್: ಭಾರಿ ಮಳೆ ಗಾಳಿಯಿಂದ ಅನಾಹುತತೂಫಾನಿಗೆ ತತ್ತರಿಸಿದ ಜಪಾನ್: ಭಾರಿ ಮಳೆ ಗಾಳಿಯಿಂದ ಅನಾಹುತ

ಫಾನ್‌ಫೋನ್ ತೂಫಾನಿನಿಂದಾಗಿ 58,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಜತೆಗೆ ರಜೆ ಸಮಯ ಕಳೆಯಲು ಬಂದು ಸಿಲುಕಿದ್ದ ಸಾವಿರಾರು ಮಂದಿ ಪ್ರವಾಸಿಗರನ್ನು ಕೂಡ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ತೂಫಾನಿನಿಂದ ಧರೆಗುರುಳಿದ ಮರಗಳ ಅಡಿ ಸಿಲುಕಿ ಸತ್ತಿದ್ದರೆ, ಇನ್ನು ಕೆಲವರು ವಿದ್ಯುದಾಘಾತ ಹಾಗೂ ಪ್ರವಾಹದಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.

Typhoon Phanfone Kills At Least 28 In The Philippines

ಫಾನ್‌ಫೋನ್ ತೂಫಾನು ಈ ವರ್ಷ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿರುವ ಏಳನೇ ಚಂಡಮಾರುತವಾಗಿದೆ. ಪಿಲಿಪ್ಪೀನ್ಸ್‌ನ ಅತ್ಯಂತ ಮಾರಕ ತೂಫಾನು ಎಂದೇ ಪರಿಗಣಿಸಲಾಗಿರುವ ಹೈಯಾನ್ ತೂಫಾನು 2013ರಲ್ಲಿ 6,000ಕ್ಕೂ ಅಧಿಕ ಮಂದಿಯ ಜೀವ ತೆಗೆದಿತ್ತು. ಗಂಟೆಗೆ 200 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಫಾನ್‌ಫೋನ್ ಚಂಡಮಾರುತ ಕೂಡ ಅಷ್ಟೇ ಭೀಕರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಪಾನಿನಲ್ಲಿ ಜಲ ಪ್ರಳಯ 11 ಮಂದಿ ಸಾವು, 21 ಮಂದಿ ನಾಪತ್ತೆ!ಜಪಾನಿನಲ್ಲಿ ಜಲ ಪ್ರಳಯ 11 ಮಂದಿ ಸಾವು, 21 ಮಂದಿ ನಾಪತ್ತೆ!

ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿದ್ದ ಫಿಲಿಪ್ಪೀನ್ಸ್‌ನ ಜನತೆಯ ಖುಷಿಯನ್ನು ಫಾನ್‌ಫೋನ್ ಕಸಿದುಕೊಂಡಿದೆ. ವಿಸಯಾಸ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿರುವ ಮೂರು ಪ್ರಮುಖ ದ್ವೀಪಗಳು ಚಂಡಮಾರುತದಿಂದ ಅತಿ ಹೆಚ್ಚು ಹಾನಿಗೊಳಗಾಗಿವೆ. ಪ್ರಸಿದ್ಧ ಪ್ರವಾಸಿ ದ್ವೀಪ ಬೊರಾಕೇ ಕೂಡ ಚಂಡಮಾರುತದಿಂದ ಅಪಾರ ಹಾನಿಗೊಳಗಾಗಿದೆ. ಅನೇಕ ಮನೆಗಳು ಕುಸಿದಿದ್ದು, ಮೊಬೈಲ್ ಫೋನ್ ಹಾಗೂ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ.

English summary
Typhoon Phanfone has killed at least 28 in several central Philippines islands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X