ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಭೂಕಂಪ; ಹಾನಿ ಇಲ್ಲ, ಸುನಾಮಿ ಎಚ್ಚರಿಕೆ ಇಲ್ಲ

|
Google Oneindia Kannada News

ಜಕಾರ್ತಾ, ಆಗಸ್ಟ್ 19 : ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. 6 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.

ಬುಧವಾರ ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಫಿಲಿಪೈನ್ಸ್‌ 6.4 ತೀವ್ರತೆಯ ಭೂಕಂಪಫಿಲಿಪೈನ್ಸ್‌ 6.4 ತೀವ್ರತೆಯ ಭೂಕಂಪ

Two Powerful Earthquakes At Western Indonesia

ಮೊದಲ ಕಂಪನ 6.8 ತೀವ್ರತೆ ಹೊಂದಿತ್ತು. ಆರು ನಿಮಿಷಗಳ ಬಳಿಕ ಮತ್ತೊಮ್ಮೆ ಭೂಮಿ ಕಂಪಿಸಿದ್ದು 6.9 ತೀವ್ರತೆ ದಾಖಲಾಗಿದೆ. ಎರಡು ಬಾರಿ ಭೂಮಿ ಕಂಪಿಸಿದರೂ ಸಹ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಸಿಂಗಪುರ, ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪಸಿಂಗಪುರ, ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ

ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆಯ ವರದಿ ಎರಡು ಬಾರಿ ಭೂಮಿ ಕಂಪಿಸಿದ್ದನ್ನು ಖಚಿತಪಡಿಸಿದೆ. ಸುಮತ್ರಾ ದ್ವೀಪದ ಬಳಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.

ಭೂಕಂಪ ಆಗೋಕು ಮೊದಲೇ ವಾರ್ನಿಂಗ್ ಕೊಡಲಿದೆ ನಿಮ್ಮ ಸ್ಮಾರ್ಟ್‌ಫೋನ್..!ಭೂಕಂಪ ಆಗೋಕು ಮೊದಲೇ ವಾರ್ನಿಂಗ್ ಕೊಡಲಿದೆ ನಿಮ್ಮ ಸ್ಮಾರ್ಟ್‌ಫೋನ್..!

ಬೆಂಕುಲು ಬಳಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ.

270 ಮಿಲಿನಯನ್ ಜನರು ಇರುವ ದ್ವೀಪ ಇಂಡೋನೇಷ್ಯಾ ಪದೇ ಪದೇ ಇಲ್ಲಿ ಭೂಕಂಪ ಸಂಭವಿಸುತ್ತದೆ. ಹಲವು ಬಾರಿ ಭೂಕಂಪವಾದಾಗ ಸುನಾಮಿ ಎಚ್ಚರಿಕೆಯನ್ನು ನೀಡಲಾಗುತ್ತದೆ.

2019ರ ಡಿಸೆಂಬರ್‌ನಲ್ಲಿ ಸುಮತ್ರಾ ದ್ವೀಪದ ಬಳಿ ಭೂಕಂಪವಾಗಿತ್ತು. ಆಗ 102 ಜನರು ಮೃತಪಟ್ಟಿದ್ದರು. ಈ ವರ್ಷವೇ ಹಲವು ಬಾರಿ ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆ ದಾಖಲಾಗಿರುವ ಹಲವು ಭೂಕಂಪ ಸಂಭವಿಸಿದೆ.

English summary
Two powerful and shallow undersea earthquakes shook western Indonesia on Wednesday. No tsunami warning was issued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X