ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ನ ತೈಲ ಟ್ಯಾಂಕರ್ ಮೇಲೆ ಜೆಡ್ಡಾ ಸಮೀಪ ಕ್ಷಿಪಣಿ ದಾಳಿ

|
Google Oneindia Kannada News

ಇರಾನ್ ಗೆ ಸೇರಿದ ಸೈನೋಪಾ ತೈಲ ಟ್ಯಾಂಕರ್ ಮೇಲೆ ಎರಡು ಕ್ಷಿಪಣಿ ದಾಳಿಯಾಗಿ, ಬೆಂಕಿ ಹೊತ್ತು ಉರಿದ ಘಟನೆ ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾ ಸಮೀಪ ನಡೆದಿದೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. "ಸೌದಿ ಅರೇಬಿಯಾದ ಬಂದರು ನಗರು ಜೆಡ್ಡಾ ಸಮೀಪ ಎರಡು ಕ್ಷಿಪಣಿಯು ಇರಾನ್ ಗೆ ಸೇರಿದ ಹಡಗಿನ ಮೇಲೆ ಎರಗಿವೆ" ಎಂದು ನ್ಯಾಷನಲ್ ಇರಾನಿಯನ್ ಆಯಿಲ್ ಕಂಪೆನಿ ಹೇಳಿಕೆಯನ್ನು ಮಾಧ್ಯಮವು ಉದಾಹರಿಸಿದೆ.

ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಆಕ್ರಮಣಕ್ಕೆ ಕಾರಣ ಏನು?ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಆಕ್ರಮಣಕ್ಕೆ ಕಾರಣ ಏನು?

ಸ್ಫೋಟದಿಂದ ಯಾರಿಗೂ ಗಾಯಗಳಾಗಿಲ್ಲ. ಹಡಗಿನ ಎಲ್ಲ ಸಿಬ್ಬಂದಿ ಕ್ಷೇಮವಾಗಿದ್ದಾರೆ. ಸನ್ನಿವೇಶ ಹತೋಟಿಯಲ್ಲಿ ಇದೆ ಎಂದು ತಿಳಿಸಲಾಗಿದೆ. ಸೆಪ್ಟೆಂಬರ್ ಹದಿನಾಲ್ಕನೇ ತಾರೀಕು ಸೌದಿ ಅರೇಬಿಯಾದ ಎರಡು ತೈಲ ಸಂಗ್ರಹದ ಮೇಲೆ ದಾಳಿ ಆದ ಮೇಲೆ ಇರಾನ್ ಮತ್ತು ಸೌದಿ ಅರೇಬಿಯಾ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇದೆ.

 Two Missile Attack On Iran Oil Tanker, No Casualties

ಸೌದಿ ಅರೇಬಿಯಾದಲ್ಲಿ ದಾಳಿ ಆದ ಮೇಲೆ ದಿನಕ್ಕೆ ಆರು ಮಿಲಿಯನ್ ಬ್ಯಾರಲ್ ತನಕ ಆಗುತ್ತಿದ್ದ ತೈಲ ಉತ್ಪಾದನೆ ಸ್ಥಗಿತವಾಗಿತ್ತು. ಆ ದಾಳಿಯ ಹೊಣೆಯನ್ನು ಯೆಮೆನ್ ನ ಹೌಥಿ ಗುಂಪು ಹೊತ್ತುಕೊಂಡಿತ್ತು. ಆದರೆ ಅಮೆರಿಕದ ಪ್ರಕಾರ, ದಾಳಿಕೋರರು ಮೂಲತಃ ನೈರುತ್ಯ ಇರಾನ್ ನವರು.

ಸೌದಿ ಮೇಲಿನ ದಾಳಿಗೆ ಇರಾನ್ ಮೇಲೆ ಆರೋಪ ಮಾಡಲಾಗಿತ್ತು. ಆದರೆ ಹೌಥಿ ಗುಂಪಿನ ದಾಳಿಯಲ್ಲಿ ಇರಾನ್ ನ ಪಾತ್ರವಿಲ್ಲ ಎಂದಿತ್ತು.

English summary
Iran oil tanker attacked by missile near port city of Jeddah, Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X