ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಮೂಲದ ಇಬ್ಬರಿಗೆ ಮರಣೋತ್ತರ ಸಂತ ಪದವಿ

|
Google Oneindia Kannada News

ವ್ಯಾಟಿಕನ್ ಸಿಟಿ, ನ. 23 : ಭಾರತದ ಕ್ರಿಶ್ಚಿಯನ್ನರಿಗೆ ಭಾನುವಾರ ಸಂಭ್ರಮದ ದಿನ. ಕೇರಳ ಮೂಲದ ಇಬ್ಬರಿಗೆ ವ್ಯಾಟಿಕನ್ ಸಿಟಿಯಲ್ಲಿ ಮರಣೋತ್ತರರವಾಗಿ ಸಂತ ಪದವಿ ನೀಡಿ ಗೌರವಿಸಲಾಗಿದೆ.

ಕೇರಳದ ಇಬ್ಬರಿಗೆ ಮರಣೋತ್ತರ ಸಂತ ಪದವಿ ನೀಡಿ ಗೌರವಿಸಲಾಗಿದೆ. ದಿವಂಗತ ಫಾದರ್‌ ಕುರಿಯಕೋಸ್‌ ಇಲಿಯಾಸ್‌ ಚಾವರ ಮತ್ತು ದಿವಂಗತ ಸಿಸ್ಟರ್‌ ಯುಫ್ರೇಸಿಯಾ ಅವರಿಗೆ ಮರಣೋತ್ತರ ಸಂತ ಪದವಿಯನ್ನು ಪೋಪ್‌ ಫ್ರಾನ್ಸಿಸ್‌ ವ್ಯಾಟಿಕನ್‌ನಲ್ಲಿ ಭಾನುವಾರ ಪ್ರದಾನ ಮಾಡಿದರು.[ತುಮಕೂರಿನಲ್ಲಿ ಸಂತರ ಸಮಾಗಮː ಕೇಸರಿ ಕಲರವ]

pope

ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನಡೆದ ಕಾರ್ಯಕ್ರಮ ವಿಶೇಷ ಸಾಮೂಹಿಕ ಪ್ರಾರ್ಥನೆ ಮೂಲಕ ಆರಂಭವಾಯಿತು. ಸಮಾರಂಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಧರ್ಮಗುರುಗಳು ಭಾಗವಹಿಸಿದ್ದರು. ಕೇರಳದ ಚರ್ಚ್‌ಗಳ ನಿಯೋಗ­ದೊಂದಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್‌ ವ್ಯಾಟಿಕನ್‌ಗೆ ತೆರಳಿದ್ದರು. ಕೇರದಿಂದ ಸುಮಾರು 5 ಸಾವಿರಕ್ಕೂ ಅಧಿಕ ಪಾದ್ರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.[ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ 266ನೇ ಪೋಪ್]

ಏನಿದು ಸಂತ ಪದವಿ?
ಕ್ರಿಶ್ಚಿಯನ್ ಸಮುದಾಯದಲ್ಲಿ ಸಂತ ಪದವಿಗೆ ಅತ್ಯುನ್ನತ ಗೌರವವಿದೆ. ಹಿಂದುಗಳ ಮಹರ್ಷಿ, ಮುಸ್ಲಿಮರ ಪ್ರವಾದಿ, ಸಿಖ್ಖರ ಗುರುಗಳಂತೆಯೇ ಇದೊಂದು ಪವಿತ್ರವಾದ ಪದವಿ. ಪವಿತ್ರ ಕೇಂದ್ರ ವ್ಯಾಟಿಕನ್ ಸಿಟಿಯಲ್ಲಿ ಈ ಪದವಿ ಪ್ರದಾನ ಮಾಡಲಾಗುತ್ತದೆ. ಅದರಂತೆ ಈ ಬಾರಿ ಇಬ್ಬರು ಭಾರತೀಯರಿಗೆ ಮರಣೋತ್ತರವಾಗಿ ಸಂತ ಪದವಿ ನೀಡಲಾಗಿದೆ.

English summary
Kerala's Catholic community was overjoyed and held special prayers as the Pope elevate two Keralite religious leaders as saints at a special service in the Vatican on Sunday. Rajya Sabha deputy chairman P J Kurien participated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X