ಭಾರತದ ಮುಸ್ಲಿಂ ಧರ್ಮಗುರುಗಳು ಪಾಕಿಸ್ತಾನದಲ್ಲಿ ನಾಪತ್ತೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವ ದೆಹಲಿ, ಮಾರ್ಚ್ 16: ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದ ಮುಸ್ಲಿಂ ಸಮುದಾಯದ ಧರ್ಮಗುರುಗಳಿಬ್ಬರು ಲಾಹೋರ್ ಮತ್ತು ಕರಾಚಿ ಮಾರ್ಗ ಮಧ್ಯೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಒಬ್ಬರು ದೆಹಲಿಯ ನಿಜಾಮುದ್ದೀನಾ ದರ್ಗಾದ ಮುಖ್ಯ ಧರ್ಮಗುರುಗಳಾಗಿದ್ದಾರೆ.

ಸದ್ಯ ಈ ವಿಚಾರವನ್ನು ಪಾಕಿಸ್ತಾನ ಸರಕಾರದ ಗಮನಕ್ಕೂ ತರಲಾಗಿದೆ. ಮೂಲಗಳ ಪ್ರಕಾರ ನಿಜಾಮುದ್ದೀನ್ ದರ್ಗಾದ ಮುಖ್ಯಗುರು ಆಸಿಫ್ ನಿಜಾಮಿ ಮತ್ತು ನಾಝಿಮ್ ನಿಜಾಮಿ ಲಾಹೋರಿನ ವಿಶ್ವವಿಖ್ಯಾತ ದಾತಾ ದರ್ಬಾರಿಗೆ ಭೇಟಿ ನೀಡಿದ್ದರು. ಅಲ್ಲಿಂದ ನಂತರ ಕರಾಚಿಗೆ ತೆರಳಲು ವಿಮಾನ ಹತ್ತಿದ್ದರು.

Two Indian clerics including Nizamuddin Dargah's head priest go missing in Pak

ಮೂಲಗಳ ಪ್ರಕಾರ ಸರಿಯಾದ ಪ್ರಯಾಣ ದಾಖಲೆಗಳಿಲ್ಲದ ಹಿನ್ನಲೆಯಲ್ಲಿ ನಝೀಮ್ ರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಇದಾದ ನಂತರ ನಝೀಮ್ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ. ಇನ್ನು ಕರಾಚಿಗೆ ತೆರಳಿದ ಆಸೀಫ್ ಕರಾಚಿ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಪತ್ತೆ ವಿಚಾರವನ್ನು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಭಾರತದ ಇಸ್ಲಾಮಾಬಾದ್ ರಾಯಭಾರ ಕಚೇರಿಯ ಮೂಲಕ ಪಾಕಿಸ್ತಾನ ಸರಕಾರದ ಗಮನಕ್ಕೆ ತರಲಾಗಿದೆ.[ಫ್ರಾನ್ಸ್ : ಶಾಲೆಯಲ್ಲಿ ಗುಂಡಿನ ದಾಳಿ, ಲೆಟರ್ ಬಾಂಬ್ ಸ್ಫೋಟ]

ನಾಪತ್ತೆಯಾಗುವ ಮೊದಲು ಅಂದರೆ ಮಾರ್ಚ್ 8ರಂದು ಇಬ್ಬರೂ ಧರ್ಮಗುರುಗಳು ಕರಾಚಿಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾಗಿತ್ತು. ಅದಕ್ಕೂ ಮೊದಲ ಇಬ್ಬರೂ ದಾತಾ ದರ್ಬಾರಿಗೆ ಭೇಟಿ ನೀಡಿದ್ದರು. ನಿಜಾಮುದ್ದೀನ್ ದರ್ಗಾ ಹಾಗೂ ದಾತಾ ದರ್ಬಾರಿನ ಧರ್ಮಗುರುಗಳು ಪರಸ್ಪರ ಮಸೀದಿಗಳಿಗೆ ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. [2018ನೇ ವರ್ಷದ ಎಚ್- 1ಬಿ ವೀಸಾಕ್ಕಾಗಿ ಏ. 3ರಿಂದ ಅರ್ಜಿ ಆಹ್ವಾನ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two Indian clerics, including the head priest of New Delhi's Nizamuddin Dargah, have gone missing in Pakistan, prompting India to take up the matter with the Pakistani government.
Please Wait while comments are loading...