ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಗ್ಗಿನ್ಸ್ ಧರಿಸಿದ್ದಕ್ಕೆ ಇಬ್ಬರು ಮಹಿಳೆಯರಿಗೆ ವಿಮಾನ ಪ್ರವೇಶ ನಿರ್ಬಂಧ

ಡೆನ್ವರ್ ನಿಂದ ಪ್ರಯಾಣ ಆರಂಭಿಸಲು ಕೆಲವೇ ನಿಮಿಷಗಳು ಬಾಕಿಯಿದ್ದಾಗ ಇಬ್ಬರು ಮಹಿಳಾ ಪ್ರಯಾಣಿಕರು ಲೆಗ್ಗಿನ್ಸ್ ಗಳನ್ನು ಧರಿಸಿರುವುದನ್ನು ಗಮನಿಸಿದ ಈ ವಿಮಾನದ ಏಜೆಂಟ್, ಈ ಮಹಿಳೆಯರನ್ನು ನಿರ್ಬಂಧಿಸಿದ್ದಾನೆ.

|
Google Oneindia Kannada News

ಡೆನ್ವರ್ (ಅಮೆರಿಕ), ಮಾರ್ಚ್ 27: ಮಹಿಳೆಯರ ಇತ್ತೀಚಿನ ಫ್ಯಾಷನ್ ಟ್ರಂಡ್ ಎನಿಸಿರುವ ಲೆಗ್ಗಿನ್ಸ್ ಗಳನ್ನು ಧರಿಸಿದ್ದಕ್ಕಾಗಿ ಇಬ್ಬರು ಮಹಿಳೆಯರನ್ನು ಯುನೈಟೆಡ್ ಏರ್ ಲೈನ್ಸ್ ನ ವಿಮಾನವೊಂದರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನಾಧರಿಸಿ ಮಾಡಲಾಗಿರುವ ಈ ವರದಿಯಲ್ಲಿ, ಈ ವಿಮಾನ ಅಮೆರಿಕದ ಕೊಲರಡೊ ರಾಜಧಾನಿ ಡೆನ್ವರ್ ನಿಂದ ಮಿನ್ನಿಸೋಟಾಕ್ಕೆ (ಅಮೆರಿಕ) ಪ್ರಯಾಣ ಬೆಳೆಸಿತ್ತು.

Two Girls Barred From United Flight For Wearing Leggings

ಡೆನ್ವರ್ ನಿಂದ ಪ್ರಯಾಣ ಆರಂಭಿಸಲು ಕೆಲವೇ ನಿಮಿಷಗಳು ಬಾಕಿಯಿದ್ದಾಗ ಇಬ್ಬರು ಮಹಿಳಾ ಪ್ರಯಾಣಿಕರು ಲೆಗ್ಗಿನ್ಸ್ ಗಳನ್ನು ಧರಿಸಿರುವುದನ್ನು ಗಮನಿಸಿದ ಈ ವಿಮಾನದ ಏಜೆಂಟ್, ಈ ಮಹಿಳೆಯರನ್ನು ನಿರ್ಬಂಧಿಸಿದ್ದಾನೆ.

ಈ ರೀತಿಯ ಉಡುಪು ಧರಿಸುವುದು ತಮ್ಮ ಸಂಸ್ಥೆಯ ನಿಯಮಗಳಿಗೆ ವಿರೋಧವಾಗಿದ್ದು ತಕ್ಷಣವೇ ಏರ್ ಪೋರ್ಟ್ ನಲ್ಲಿರುವ ಮಹಿಳೆಯರ ರೆಸ್ಟ್ ರೂಂಗೆ ತೆರಳಿ ಬಟ್ಟೆ ಬದಲಿಸಿಕೊಂಡು ಬರುವಂತೆ ಸೂಚಿಸಿದ್ದಾನೆ. ಆದರೆ, ಮಹಿಳಾ ಪ್ರಯಾಣಿಕರು ಏಜೆಂಟ್ ಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ಒಪ್ಪದ ವಿಮಾನ ಸಂಸ್ಥೆಯ ಸಿಬ್ಬಂದಿ, ಅವರನ್ನು ಪ್ರಯಾಣದಿಂದ ನಿಷೇಧ ಹೇರಿದರು ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುನೈಟೆಡ್ ಏರ್ ಲೈನ್ಸ್, 'ತನ್ನ ಸಂಸ್ಥೆಯ ವಿಮಾನಗಳಲ್ಲಿ ಮಹಿಳೆಯರು ಉದ್ರೇಕಕಾರಿ ಉಡುಪುಗಳನ್ನು ಧರಿಸಿ ಪ್ರಯಾಣಿಸುವುದನ್ನು ನಿಷೇಧಿಸಿದೆ' ಎಂದು ಹೇಳಿದೆ.

English summary
A United Airlines gate agent barred two girls from boarding a flight Sunday morning because the girls were wearing leggings. Another girl who was wearing gray leggings had to change before she was allowed to board the flight from Denver to Minneapolis, a report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X