ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್ ಅಥವಾ ಆಸ್ಟ್ರಾಜೆನೆಕಾದ 2 ಡೋಸ್ ಲಸಿಕೆ "ಡೆಲ್ಟಾ"ಗೆ ಮದ್ದಾಗಬಲ್ಲದು

|
Google Oneindia Kannada News

ಲಂಡನ್, ಜುಲೈ 22: ಫೈಜರ್ ಲಸಿಕೆಯ ಎರಡು ಡೋಸ್‌ ಅಥವಾ ಆಸ್ಟ್ರಾಜೆನೆಕಾದ ಎರಡು ಡೋಸ್‌ ಲಸಿಕೆ, ಅತಿ ವೇಗವಾಗಿ ಹರಡುತ್ತಿರುವ ಕೊರೊನಾ "ಡೆಲ್ಟಾ" ರೂಪಾಂತರಕ್ಕೆ ಕಡಿವಾಣ ಹಾಕಬಲ್ಲದು ಎಂದು ಪಬ್ಲಿಕ್ ಹೆಲ್ತ್‌ ಇಂಗ್ಲೆಂಡ್‌ ತಜ್ಞರು ತಿಳಿಸಿದ್ದಾರೆ.

ಲಂಡನ್‌ ಮೂಲದ ಪಬ್ಲಿಕ್ ಹೆಲ್ತ್‌ ಇಂಗ್ಲೆಂಡ್‌ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಇದರಲ್ಲಿ ಕೊರೊನಾ ಡೆಲ್‌ಟಾ ರೂಪಾಂತರದ ವಿರುದ್ಧ ಲಸಿಕೆಗಳ ಪ್ರಯೋಗದ ಕುರಿತು ಮಾಹಿತಿ ನೀಡಲಾಗಿದೆ. ಇದೀಗ ವಿಶ್ವದಾದ್ಯಂತ ಅತಿವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರದ ವಿರುದ್ಧ ಈ ಎರಡು ಲಸಿಕೆಗಳು ಅತಿ ಪರಿಣಾಮಕಾರಿ ಎಂಬುದನ್ನು ತಿಳಿಸಿವೆ. ಆದರೆ ಹೆಚ್ಚಿನ ರಕ್ಷಣೆಗೆ ಈ ಲಸಿಕೆಗಳ ಒಂದು ಡೋಸ್‌ ಸಾಕಾಗುವುದಿಲ್ಲ ಎಂಬುದನ್ನು ಒತ್ತಿ ಹೇಳಿದೆ.

Two Doses Of Pfizer AstraZeneca Effective Against Delta Variant Shows Study

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಕೊರೊನಾ ಸೋಂಕಿನ ವಿರುದ್ಧ ಬಯೋಂಟೆಕ್‌ನ ಫೈಜರ್ ಹಾಗೂ ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗಳ ದಕ್ಷತೆ ಕುರಿತು ನೈಜ ಮಾಹಿತಿಗಳನ್ನು ಕಲೆಹಾಕಿ ಅಧ್ಯಯನ ನಡೆಸಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಫೈಜರ್ ಲಸಿಕೆಯ ಎರಡು ಡೋಸ್ ಡೆಲ್ಟಾ ರೂಪಾಂತರದ ಸೋಂಕಿನ ತಡೆಯಲ್ಲಿ 88% ಪರಿಣಾಮಕಾರಿ ಹಾಗೂ ಆಲ್ಫಾ ರೂಪಾಂತರದ ವಿರುದ್ಧ 93.7% ಪರಿಣಾಮಕಾರಿ ಎಂದು ತಿಳಿಸಿದೆ. ಈ ಲಸಿಕೆಯ ಒಂದು ಡೋಸ್ 36% ಪರಿಣಾಮಕಾರಿ ಎನ್ನಲಾಗಿದೆ. ಆಸ್ಟ್ರಾಜೆನೆಕಾ ಲಸಿಕೆಯು ಡೆಲ್ಟಾ ಸೋಂಕಿಗೆ 67% ಪರಿಣಾಮಕಾರಿ, ಆಲ್ಫಾ ಸೋಂಕಿಗೆ 74.5% ಪರಿಣಾಮಕಾರಿ ಹಾಗೂ ಈ ಲಸಿಕೆಯ ಒಂದು ಡೋಸ್ 30% ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಪಬ್ಲಿಕ್ ಹೆಲ್ತ್‌ ಇಂಗ್ಲೆಂಡ್‌ ಈ ಹಿಂದೆ ಕೂಡ ಈ ಕುರಿತು ಅಧ್ಯಯನ ನಡೆಸಿದ್ದು, ಡೆಲ್ಟಾ ರೂಪಾಂತರದ ವಿರುದ್ಧ ಈ ಲಸಿಕೆಗಳು 33% ಪರಿಣಾಮಕಾರಿ ಎಂದು ತಿಳಿಸಿತ್ತು.

ಜೀವಿತಾವಧಿವರೆಗೂ ರಕ್ಷಣೆ ನೀಡಬಲ್ಲದು ಈ ಕೊರೊನಾ ಲಸಿಕೆ; ಅಧ್ಯಯನ ಜೀವಿತಾವಧಿವರೆಗೂ ರಕ್ಷಣೆ ನೀಡಬಲ್ಲದು ಈ ಕೊರೊನಾ ಲಸಿಕೆ; ಅಧ್ಯಯನ

"ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪತ್ತೆಯಾಗಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ಬೇರೆಲ್ಲಾ ರೂಪಾಂತರಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಈಚೆಗಷ್ಟೆ ಎಚ್ಚರಿಕೆ ನೀಡಿತ್ತು.

"ಈ ಡೆಲ್ಟಾ ರೂಪಾಂತರ ಈಗಾಗಲೇ ನೂರು ದೇಶಗಳಲ್ಲಿ ಹರಡಿದೆ. ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಈ ರೂಪಾಂತರದ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ರೂಪಾಂತರ ಹರಡುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರವೇ ಜಾಗತಿಕವಾಗಿ ಅತಿ ಪ್ರಬಲವಾದ ರೂಪಾಂತರವಾಗುವ ಸಾಧ್ಯತೆಯಿದೆ" ಎಂದು ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದರು.

English summary
Two doses of Pfizer or AstraZeneca's COVID-19 vaccine effective against the highly transmissible Delta coronavirus variant says public health england research
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X