ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ್ಯುಕೂಪವಾದ ಜಪಾನ್‌ ಹಡಗು: ಕೊರೊನಾಗೆ ಇಬ್ಬರು ಬಲಿ

|
Google Oneindia Kannada News

ಟೋಕಿಯೋ, ಫೆಬ್ರವರಿ 20: ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಮತ್ತಿಬ್ಬರು ಕೊರೊನಾ ರೋಗದಿಂದ ಮೃತಪಟ್ಟಿದ್ದಾರೆ.

ಇನ್ನೂ 70 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ. 70 ಜನರ ಪೈಕಿ 38 ಜನರಲ್ಲಿ ಜ್ವರ ಮತ್ತು ಕೆಮ್ಮಿನಂತಹ ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರಕ್ತ ಪರೀಕ್ಷೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊರೊನಾ ವೈರಸ್: ಜಪಾನ್ ಹಡಗಿನಲ್ಲಿ ಇರುವ ಮೂವರು ಭಾರತೀಯರಿಗೆ ಸೋಂಕುಕೊರೊನಾ ವೈರಸ್: ಜಪಾನ್ ಹಡಗಿನಲ್ಲಿ ಇರುವ ಮೂವರು ಭಾರತೀಯರಿಗೆ ಸೋಂಕು

3,700 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಒಟ್ಟು 1,219 ಜನರನ್ನು ಸಚಿವಾಲಯ ಇದುವರೆಗೆ ಪರೀಕ್ಷಿಸಿದೆ ಎಂದು ಜಪಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಎನ್‌ಎಚ್‌ಕೆ ಗೆ ಕ್ಯಾಟೊ ತಿಳಿಸಿದ್ದಾರೆ.

Two Deaths Reported From Quarantined Ship

80 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ ಇನ್ನು ಚೀನಾದಲ್ಲಿ ಕೊರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದೀಗ ಚೀನಾದಲ್ಲಿ ಸೋಂಕು ಪೀಡಿತರ ಸಂಖ್ಯೆ 80 ಸಾವಿರಕ್ಕೇರಿದೆ.

ಟೋಕಿಯೋದ ಗಡಿಭಾಗದಲ್ಲಿರುವ ಕನಗಾವ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ 80ರ ಹರೆಯದ ವೃದ್ಧೆ ಕೊರೊನಾ ವೈರಸ್​ನಿಂದಾಗಿ ಮೃತ ಪಟ್ಟಿರುವುದಾಗಿ ಜಪಾನ್​ನ ಆರೋಗ್ಯ ಸಚಿವ ಕಟ್ಸುನೊನು ಕ್ಯಾಟೊ ತಿಳಿಸಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್​ ದಾಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬುಧವಾರ ಒಂದೇ ದಿನದಲ್ಲಿ ಕನಿಷ್ಟ 256 ಜನರು ಸಾವನ್ನಪ್ಪಿರುವುದು ವರದಿಯಾಗಿದೆ.

ಕೊರೊನಾ ಕೇಂದ್ರ ಬಿಂದುವಾಗಿರುವ ಹ್ಯೂಬೆಯಲ್ಲಿ108 ಮಂದಿ ಮೃತಪಟ್ಟಿದ್ದಾರೆ.

English summary
Two elderly passengers from the quarantined Diamond Princess ship had died of the disease, Japanese public broadcaster NHK reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X