ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಕಾಲಿಟ್ಟ ಕೊರೊನಾ; 2 ಪ್ರಕರಣಗಳು ಪತ್ತೆ

|
Google Oneindia Kannada News

ಕರಾಚಿ, ಫೆಬ್ರವರಿ 26 : ಜಗತ್ತಿನ ವಿವಿಧ ದೇಶಗಳಲ್ಲಿ ಆತಂಕ ಹುಟ್ಟು ಹಾಕಿರುವ ಕೊರೊನಾ ವೈರಸ್ ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ವಿಶ್ವದಲ್ಲಿ ಇದುವರೆಗೂ 2,700ಕ್ಕೂ ಅಧಿಕ ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ 2 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೇಶದ ಆರೋಗ್ಯ ಇಲಾಖೆ ಇಬ್ಬರಿಗೆ ಸೋಂಕು ತಗುಲಿರುವುದನ್ನು ಖಚಿತಪಡಿಸಿದೆ. ಚೀನಾ, ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಈಗಾಗಲೇ ಕೊರೊನಾ ಆತಂಕವನ್ನು ಹುಟ್ಟು ಹಾಕಿದೆ.

ಆರೋಗ್ಯ ಸಚಿವರಿಗೇ ಕೊರೊನಾ ವೈರಸ್ ಸೋಂಕುಆರೋಗ್ಯ ಸಚಿವರಿಗೇ ಕೊರೊನಾ ವೈರಸ್ ಸೋಂಕು

ಕರಾಚಿ ನಿವಾಸಿಯಾಗಿರುವ 22 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದೆ. ಮಂಗಳವಾರ ಆತನನ್ನು ಪರೀಕ್ಷಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆಯೇ ಹೇಳಿದೆ.

 ಆಸ್ಟ್ರಿಯಾವನ್ನು ಆವರಿಸಿದ ಕೊರೊನಾ: ಮೊದಲೆರೆಡು ಪ್ರಕರಣಗಳು ಪತ್ತೆ ಆಸ್ಟ್ರಿಯಾವನ್ನು ಆವರಿಸಿದ ಕೊರೊನಾ: ಮೊದಲೆರೆಡು ಪ್ರಕರಣಗಳು ಪತ್ತೆ

Coronavirus

"22 ವರ್ಷದ ಯುವಕ ಇರಾನ್‌ಗೆ ಪ್ರಯಾಣ ಬೆಳೆಸಿದ್ದ. ಫೆಬ್ರವರಿ 20ರಂದು ಇರಾನ್‌ನಿಂದ ಕರಾಚಿಗೆ ಆಗಮಿಸಿದ್ದ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮನ್ವಯ ಅಧಿಕಾರಿ ಮೀರಾನ್ ಯೂಸೂಫ್ ಹೇಳಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 893ಕ್ಕೆ ಏರಿಕೆ

ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ಪರೀಕ್ಷೆ ಮಾಡಲಾಗುತ್ತಿದೆ. ಇರಾನ್ ಮತ್ತು ಕರಾಚಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇರಾನ್‌ನಲ್ಲಿ ಕೊರನಾ ಸೋಂಕು ಪತ್ತೆಯಾದ ಬಳಿಕ ಪಾಕಿಸ್ತಾನ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ದೇಶದಲ್ಲಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ವಿಶೇಷ ಘಟಕಗಳನ್ನು ಸ್ಥಾಪನೆ ಮಾಡಿತ್ತು.

English summary
Pakistan health ministry said that two cases of coronavirus reported in the country. The death toll from coronavirus is over 2,700 worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X