ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ತಾರ್‌ಪುರ್: 74 ವರ್ಷಗಳ ಬಳಿಕ ಒಂದಾದ ಸಹೋದರರು

|
Google Oneindia Kannada News

ಇಸ್ಲಾಮಾಬಾದ್, ಜನವರಿ 13:ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರ ಆಗಿದ್ದ ಸಹೋದರರು 74 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ.

1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು.

ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಲ್ಲಿ ಮತ್ತೆ ಒಂದಾಗಿದ್ದಾರೆ.

Two Brothers, Separated During Partition, Meet After 74 Years At Kartarpur

ಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕರ್ತಾರ್‌ಪುರದವರೆಗೆ ಭಾರತದಿಂದ ಪಾಕಿಸ್ತಾನಕ್ಕೆ ವೀಸಾ-ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದ್ದಕ್ಕಾಗಿ ಸಹೋದರರಿಬ್ಬರು ಉಭಯ ದೇಶಗಳ ಸರ್ಕಾರಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಕರ್ತಾರ್‌‌ಪುರ ಕಾರಿಡಾರ್‌‌ 2019 ರ ನವೆಂಬರ್‌ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. 74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Recommended Video

Siddharth ಗೆ ಬೇಕಿತ್ತಾ ಇದೆಲ್ಲಾ!! | Oneindia Kannada

English summary
Two brothers, who were separated during the India-Pakistan Partition in 1947 were reunited after 74 years in Kartarpur, local media reported on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X