ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಗನಯಾತ್ರಿಗಳಿಂದ ಬಾಹ್ಯಾಕಾಶ ಕೇಂದ್ರದ ಹೊರಗೆ ಮೊದಲ ನಡಿಗೆ

|
Google Oneindia Kannada News

ಬೀಜಿಂಗ್, ಜು.04: ಚೀನಾದ ಇಬ್ಬರು ಗಗನಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಬಾರಿಗೆ ನಡೆದಾಡಿದ್ದು, 15 ಮೀಟರ್ (50 ಅಡಿ) ಉದ್ದದ ರೊಬೋಟಿಕ್ ಆರ್ಮ್ ಅನ್ನು ಸರಿಪಡಿಸುವ ಕಾರ್ಯ ನಡೆಸಿದರು.

ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಈ ಇಬ್ಬರು ಗಗನ ಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಇದ್ದರೆ ತಂಡದ ಮತ್ತೋರ್ವ ಸದಸ್ಯ ಕಮಾಂಡರ್ ನೀ ಹೈಶೆಂಗ್ ಕೇಂದ್ರದ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲುಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲು

ಗಗನಯಾತ್ರಿಗಳು ಜೂನ್ 17 ರಂದು ಚೀನಾ ಮೂರನೇ ಕಕ್ಷೀಯ ನಿಲ್ದಾಣಕ್ಕೆ ಮೂರು ತಿಂಗಳ ಕಾರ್ಯಚರಣೆಗಾಗು ಆಗಮಿಸಿದ್ದಾರೆ. ಮೇ ತಿಂಗಳಲ್ಲಿ ಮಾರ್ಸ್‌ನಲ್ಲಿ ರೋಬಾಟ್ ರೋವರ್ ಅನ್ನು ಇಳಿಸಿದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮದ ಭಾಗ ಇದಾಗಿದೆ.

Two astronauts at China’s new space station make first spacewalk

ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ನಡುವೆ ಈ ಮಿಷನ್‌ ಕೈಗೊಳ್ಳಲಾಗಿದೆ.

ನಿಲ್ದಾಣದ ಮೊದಲ ಮಾದರಿ ಟಿಯಾನೆ ಅನ್ನು ಏಪ್ರಿಲ್ 29 ರಂದು ಪ್ರಾರಂಭಿಸಲಾಯಿತು. ತದನಂತರ ಆಹಾರ ಮತ್ತು ಇಂಧನವನ್ನು ಹೊತ್ತ ಸ್ವಯಂಚಾಲಿಯ ಅಂತರಿಕ್ಷ ನೌಕೆಯನ್ನು ಕಳುಹಿಸಲಾಗಿತ್ತು. ಲಿಯು, ನಿ ಮತ್ತು ಟ್ಯಾಂಗ್ ಎಂಬ ಮೂವರು ಗಗನಯಾತ್ರಿಗಳು ಜೂನ್‌ 17ರಂದು ಬಾಹ್ಯಾಕಾಶ ಕೇಂದ್ರವನ್ನು ಆಗಮಿಸಿದರು.

ಚೀನಾದ ಬಹುದೊಡ್ಡ ಸಾಧನೆ! ಬಾಹ್ಯಾಕಾಶ ನಿಲ್ದಾಣಕ್ಕೆ 'ಎಂಟರ್ ದಿ ಡ್ರ್ಯಾಗನ್'ಚೀನಾದ ಬಹುದೊಡ್ಡ ಸಾಧನೆ! ಬಾಹ್ಯಾಕಾಶ ನಿಲ್ದಾಣಕ್ಕೆ 'ಎಂಟರ್ ದಿ ಡ್ರ್ಯಾಗನ್'

ರಾಷ್ಟ್ರ ಮಾಧ್ಯಮದ ಪ್ರಕಾರ, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಭಾನುವಾರ ಕಕ್ಷೀಯ ಕೇಂದ್ರದ ಉಳಿದ ಭಾಗವನ್ನು ಜೋಡಿಸಲು ಬಳಸಲಾಗುವ ರೋಬಾಟ್ ಸ್ಥಾಪನೆಯ ಕಾರ್ಯ ಪೂರ್ಣಗೊಳಿಸಲು ಆರಂಭಿಸಿದ್ದಾರೆ. ಅಗತ್ಯವಿದ್ದಲ್ಲಿ ಆರು ಗಂಟೆಗಳ ಕಾಲ ಇಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಅವರ ಬಾಹ್ಯಾಕಾಶ ಸೂಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ವರದಿ ಮಾಡಿದೆ.

ಚೀನಾ ಮುಂದಿನ ವರ್ಷದ ಅಂತ್ಯದ ವೇಳೆಗೆ 11 ಅಂತರಿಕ್ಷ ನೌಕೆ ಉಡಾವಣೆ ಮಾಡುವ ಉದ್ದೇಶ ಹೊಂದಿದೆ.

(ಒನ್‌ಇಂಡಿಯಾ ಸುದ್ದಿ)

English summary
Two Chinese astronauts made the first spacewalk on Sunday outside China’s new orbital station to work on setting up a 15-meter (50-foot) long robotic arm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X