ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದದ್ದು ಕಂಚು, ಬಿಂಬಿಸುತ್ತಿರುವುದು 20 ಚಿನ್ನ ಗೆದ್ದಂತೆ: ಪಾಕ್ ಪತ್ರಕರ್ತ

|
Google Oneindia Kannada News

ಲಾಹೋರ್, ಆಗಸ್ಟ್ 19: ರಿಯೋ ಒಲಿಂಪಿಕ್ಸ್ ನಲ್ಲಿ ಸಾಕ್ಷಿ ಮಲಿಕ್ ಮೂಲಕ ದೇಶಕ್ಕೆ ಮೊದಲ ಪದಕ ಬಂದ ನಂತರ ಈ ಬಗ್ಗೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಟ್ವಿಟ್ಟರ್ ನಲ್ಲಿ ಅಧಿಕ ಪ್ರಸಂಗತನದ ಹೇಳಿಕೆಯನ್ನು ನೀಡಿದ್ದಾರೆ.

ಗೆದ್ದದ್ದು ಕಂಚಿನ ಪದಕ, ಬಿಂಬಿಸುತ್ತಿರುವುದು ಇಪ್ಪತ್ತು ಚಿನ್ನದ ಪದಕ ಗೆದ್ದಂತೆ ಎಂದು ಪಾಕಿಸ್ತಾನದ ಪತ್ರಕರ್ತ ಒಮರ್ ಖುರೇಷಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. (ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ)

113 ಸಾವಿರ ಹಿಂಬಾಲಕರನ್ನು ಹೊಂದಿರುವ, ಸಮಾ ಟಿವಿಯ ಸಂಪಾಕದರೂ ಆಗಿರುವ ಖುರೇಷಿ ಟ್ವೀಟ್ ಸಂದೇಶ ವ್ಯಾಪಕ ಟೀಕೆಗೊಳಗಾಗಿದೆ.

ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಜನ ಖುರೇಷಿ ವಿರುದ್ದ ವ್ಯಕ್ತ ಪಡಿಸಿದ್ದಾರೆ. ಹೌದು, ನಮಗೆ 20 ಚಿನ್ನದ ಪದಕ ಗೆದ್ದಷ್ಟೇ ಸಂತೋಷವಾಗಿದೆ ಎಂದು ಬಚ್ಚನ್ ತಿರುಗೇಟು ನೀಡಿದ್ದಾರೆ.

ಪಾಕ್ ಪತ್ರಕರ್ತ ಬರೆದಿದ್ದು ಏನು, ಬಚ್ಚನ್ ಮತ್ತು ಇತರರ ಟ್ವೀಟ್ ಪ್ರತಿಕ್ರಿಯೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಖುರೇಷಿ ಟ್ವೀಟ್

ಖುರೇಷಿ ಟ್ವೀಟ್

119 ಸ್ಪರ್ಧಿಗಳಲ್ಲಿ ಅಂತೂ ಒಬ್ಬರು ಪದಕ ಗೆದ್ದರು - ಕಂಚಿನ ಪದಕ. ಇಪ್ಪತ್ತು ಚಿನ್ನದ ಪದಕ ಬಂದಂತೆ ಬಿಂಬಿಸುತ್ತಿದ್ದಾರೆಂದು ಒಮರ್ ಖುರೇಷಿ ಟ್ವೀಟ್ ಮಾಡಿದ್ದಾರೆ.

ಭಾರತೀಯರ ಅಸಹಿಷ್ಣುತೆ

ನನ್ನ ಟ್ವೀಟಿಗೆ ಭಾರತೀಯರ ಟೀಕೆ ವ್ಯಕ್ತವಾಗುತ್ತಿದೆ, ಜೀವ ಬೆದರಿಕೆ ಕೂಡಾ, ಇದು ಭಾರತೀಯರ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತಿದೆ ಎಂದು ಖುರೇಷಿ ಮತ್ತೆ ಟ್ವೀಟ್ ಮಾಡಿದ್ದಾರೆ.

ಅಮಿತಾಬ್ ಟ್ವೀಟ್

ನನಗೆ ಸಾಕ್ಷಿ ಕಂಚಿನ ಪದಕ ಗೆದ್ದದ್ದು ಸಾವಿರ ಚಿನ್ನ ಗೆದ್ದಂತೆ. ಆಕೆ ಭಾರತೀಯಳು ಎನ್ನುವುದಕ್ಕೆ ಹೆಮ್ಮೆಯಿದೆ - ಅಮಿತಾಬ್

ಶೂಟಿಂಗ್ ನಲ್ಲಿ ಚಿನ್ನ

ಉಗ್ರರನ್ನು ಸದೆ ಬಡೆಯುತ್ತಿರುವುದಕ್ಕೆ ಭಾರತದ ಆರ್ಮಿಗೆ ಚಿನ್ನದ ಪದಕ ಸಿಗಬೇಕಿತ್ತು.

ಭಾರತದ ಒಟ್ಟಾರೆ ಸಾಧನೆ

ಸ್ವಾತಂತ್ರ್ಯಾನಂತರ ಭಾರತ 18 ಒಲಿಂಪಿಕ್ಸ್ ನಲ್ಲಿ 4 ಬೆಳ್ಳಿ ಗೆದ್ದರೆ ಪಾಕಿಸ್ತಾನ 3 ಬೆಳ್ಳಿ ಗೆದ್ದಿದೆ - ಒಮರ್ ಖುರೇಷಿ

ಶೇಖರ್ ಗುಪ್ತ

ಕ್ರೀಡೆಯ ವಿಚಾರದಲ್ಲಿ ರಾಷ್ಟ್ರೀಯತೆಯನ್ನು ತರಬಾರದು. ಇತ್ತೀಚಿನ ಸರಣಿಯಲ್ಲಿ ನಾವು ಇಲ್ಲಿ ಎಲ್ಲಾ ದೇಶದವರನ್ನು ಬೆಂಬಲಿಸಿದ್ದೆವು ಎಂದು ಶೇಖರ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಹೀಗೊಂದು ಟ್ವೀಟ್

ಹೀಗೊಂದು ಟ್ವೀಟ್

ಇಷ್ಟೊಂದು ಭಯೋತ್ಪಾದಕರು ಇದ್ದರೂ, ಶೂಟಿಂಗ್ ಗೆ ಯಾರೂ ಅರ್ಹತೆ ಪಡೆದಿಲ್ಲ.

English summary
Omar Quraishi, a senior Pakistan journalist's tweet turns into India-Pak battleground after Sakshi Malik's medal win in Olympics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X