ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ರೀತಿ ಟ್ವಿಟ್ಟರ್‌ನಲ್ಲಿಯೂ ಬರುತ್ತಿದೆ 'ಸ್ಟೋರಿಸ್' ಫೀಚರ್

|
Google Oneindia Kannada News

ಬೆಂಗಳೂರು, ಮಾರ್ಚ್ 5: ಟ್ವಿಟ್ಟರ್ ಸಂಸ್ಥೆ ಮತ್ತೊಂದು ಫೀಚರ್ ಅನ್ನು ಸೇರಿಸಿಕೊಂಡಿದೆ. ಇನ್ನು ಮುಂದೆ ಟ್ವಿಟ್ಟರ್ ಬಳಕೆದಾರರು ಕೂಡ 'ಸ್ಟೋರಿಸ್' ಹಾಕಬಹುದಾಗಿದೆ.

ಸೋಷಿಯಲ್ ಮೀಡಿಯಾ ಬಳಸುವವರಿಗೆ ಸ್ಟೋರಿಸ್ ಎಂದರೆ ಏನು ಎನ್ನುವುದು ತಿಳಿದಿರುತ್ತದೆ. ಸ್ಟೋರಿಸ್‌ಗೆ ಫೋಟೋ, ಥಾಟ್, ಬರಹ ಹೀಗೆ ಏನು ಬೇಕಾದರೂ ಹಾಕಬಹುದು. ಹೀಗೆ ಹಾಕಿದ್ದ ಪೋಸ್ಟ್ 24 ಗಂಟೆಗಳವರೆಗೆ ಮಾತ್ರ ಇರುತ್ತದೆ. ಇಂದಿನ ಜನರೇಶನ್ ಸ್ಟೋರಿಸ್ ಫಿದಾ ಆಗಿದ್ದಾರೆ.

ಸ್ಟೋರಿಸ್ ಫೀಚರ್ ಇಷ್ಟು ದಿನ ಫೇಸ್ ಬುಕ್, ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್ ಗಳಲ್ಲಿ ಇತ್ತು. ವಾಟ್ಸ್ ಅಪ್ ಇದೇ ಫೀಚರ್ ಹೊಂದಿದ್ದರೂ, ಅದನ್ನು ಸ್ಟೇಟಸ್ ಎಂದು ಕರೆಯಲಾಗುತ್ತಿತ್ತು. ಆದರೆ, ಇದೀಗ ಟ್ವಿಟ್ಟರ್ ಕೂಡ ಸ್ಟೋರಿಸ್ ಫೀಚರ್ ತರಲು ತಯಾರಿ ಮಾಡಿಕೊಂಡಿದೆ.

Twitter Testing Its Own Version Of Stories Called Fleets

ಈ ಬಗ್ಗೆ ಟ್ವಿಟ್ಟರ್ ಪ್ರಾಡಕ್ಟ್ ಲೀಡ್ ಕಾವ್ಯೊನ್ ಬಾಯ್ಕಪುರ್ ಟ್ವೀಟ್ ಮಾಡಿದ್ದಾರೆ. 'ಫೀಟ್ಸ್' ಎಂಬ ಹೆಸರಿನಲ್ಲಿ ಟ್ವಿಟ್ಟರ್ ಸ್ಟೋರಿಸ್ ಇರಲಿದೆ. ಆದರೆ, ಟ್ವಿಟ್ಟರ್ ಫೀಟ್ಸ್ ಗೆ ಲೈಕ್ ಹಾಗೂ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಿಲ್ಲ.

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಫೇಸ್‌ಬುಕ್, ಗೂಗಲ್, ಟ್ವಿಟ್ಟರ್ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಫೇಸ್‌ಬುಕ್, ಗೂಗಲ್, ಟ್ವಿಟ್ಟರ್

ಸ್ಟೋರಿಸ್ ಫೀಚರ್ ಅನ್ನು ಮೊದಲು ಸ್ನಾಪ್ ಚಾಟ್ ತಂದಿತ್ತು. ಆ ನಂತರ ಅದು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿಯೂ ಬಂತು. ಇದೀಗ ಟ್ವಿಟ್ಟರ್ ನಲ್ಲಿಯೂ ಈ ಆಯ್ಕೆ ಬರಲಿದ್ದು, ಬಳಕೆದಾರರ ಮನವಿಗೆ ಸಂಸ್ಥೆ ಸ್ಪಂದಿಸಿದೆ. ಈ ಫೀಚರ್ ಸದ್ಯಕ್ಕೆ ಟೆಸ್ಟಿಂಗ್ ಹಂತದಲ್ಲಿ ಇದೆ.

English summary
Like Facebook Instagram and Snapchat Twitter testing its own version of stories called Fleets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X