ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆ

|
Google Oneindia Kannada News

ನವದೆಹಲಿ, ಮೇ 2: ನಿರೀಕ್ಷಿಸಿದಂತೆ ಟ್ವಿಟ್ಟರ್‌ನ ಸಿಇಒ ಪರಾಗ್ ಅಗರ್ವಾಲ್ ಅವರ ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಎಲಾನ್ ಮಸ್ಕ್ ಅವರಿಂದ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಮುಗಿದ ಬಳಿಕ ಟ್ವಿಟ್ಟರ್ ಮ್ಯಾನೇಜ್ಮೆಂಟ್‌ನಲ್ಲಿ ಅಮೂಲಾಗ್ರ ಬದಲಾವಣೆ ಆಗುವ ನಿರೀಕ್ಷೆ ಇದೆ. ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಮ್ಯಾನೇಜ್ಮೆಂಟ್‌ಗೆ ಹೊಸ ತಂಡವನ್ನು ಕಟ್ಟುವ ಸಾಧ್ಯತೆ ಇದೆ. ಭಾರತ ಮೂಲದ ಪರಾಗ್ ಅಗರ್ವಾಲ್ ಅವರ ಸಿಇಒ ಸ್ಥಾನಕ್ಕೆ ಬೇರೆಯವರನ್ನ ತಂದು ಕೂರಿಸಬಹುದು ಎನ್ನಲಾಗಿದೆ.

ತನಗೆ ಉನ್ನತ ಮೂಲದಿಂದ ಈ ಮಾಹಿತಿ ಬಂದಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಪರಾಗ್ ಅಗರ್ವಾಲ್ ಸ್ಥಾನಕ್ಕೆ ಯಾರು ನೇಮಕ ಆಗುತ್ತಾರೆ ಎಂಬುದು ಗೊತ್ತಾಗಿಲ್ಲ. ಆದರೆ, ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಮುಗಿಯುವವರೆಗಂತೂ ಪರಾಗ್ ಅವರು ಸಿಇಒ ಆಗಿರಲಿದ್ದಾರೆ.

 ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೆ ಸಿಗುವ ಹಣ ಎಷ್ಟು? ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೆ ಸಿಗುವ ಹಣ ಎಷ್ಟು?

ಭಾರೀ ಮೊತ್ತದ ಕಾಂಪೆನ್ಸೇಶನ್ ಪಡೆಯಲಿದ್ದಾರೆ ಪರಾಗ್:
ಕಳೆದ ನವೆಂಬರ್‌ನಲ್ಲಿ ಟ್ವಿಟ್ಟರ್‌ಗೆ ಪರಾಗ್ ಅಗರ್ವಾಲ್ ಸಿಇಒ ಆಗಿ ನೇಮಕವಾಗಿದ್ದರು. ಅವರ ಕಾಂಟ್ರಾಕ್ಟ್ ನಿಯಮದ ಪ್ರಕಾರ ಒಂದು ವರ್ಷದ ಒಳಗೆ ಸಿಇಒ ಸ್ಥಾನದಿಂದ ಅವರು ಹೊರಹೋಗುವ ಪರಿಸ್ಥಿತಿ ಬಂದರೆ ಸಾಕಷ್ಟು ಪರಿಹಾರವನ್ನು ಕಂಪನಿಯು ಕೊಡಬೇಕಾಗುತ್ತೆ. ಒಂದು ಅಂದಾಜಿನ ಪ್ರಕಾರ 4.2 ಕೋಟಿ ಡಾಲರ್ (ಸುಮಾರು 320 ಕೋಟಿ ರೂಪಾಯಿ) ಹಣವನ್ನು ಪರಿಹಾರವಾಗಿ ಪರಾಗ್ ಅಗರ್ವಾಲ್ ಪಡೆಯುವ ನಿರೀಕ್ಷೆ ಇದೆ.

Twitter may replace Parag Agarwal with new CEO

ವಿಶ್ವದ ಅತಿ ಶ್ರೀಮಂತ ಎನಿಸಿರುವ ಎಲಾನ್ ಮಸ್ಕ್ ಅವರು ಕೆಲ ವಾರಗಳ ಹಿಂದೆ ಟ್ವಿಟ್ಟರ್ ಖರೀದಿ ಮಾಡುತ್ತೇನೆಂದು ಟ್ವೀಟ್ ಮಾಡಿದಾಗ ಆ ಕಂಪನಿಯ ಬಹಷ್ಟು ಉದ್ಯೋಗಿಗಳು ವ್ಯಾಕುಲಗೊಂಡಿದ್ದರು. ಮಸ್ಕ್ ಅವರ ಪ್ರವೇಶದಿಂದ ಟ್ವಿಟ್ಟರ್ ಕಂಪನಿ ಉಳಿಸಿಕೊಂಡು ಬಂದಿದ್ದ ನೀತಿ ನಿಯಮಗಳು ಸಂಪೂರ್ಣ ತಲೆಕೆಳಗಾಗಿ ಬಿಡಬಹುದು ಎಂಬುದು ಅವರ ಆಲೋಚನೆಯಾಗಿತ್ತೆನ್ನಲಾಗಿದೆ. ರಾಜಸ್ಥಾನ ಮೂಲದ ಸಿಇಒ ಪರಾಗ್ ಅಗರ್ವಾಲ್ ಅವರೂ ಕೂಡ ಎಲಾನ್ ಮಸ್ಕ್ ಅವರಿಗೆ ಟ್ವಿಟ್ಟರ್ ಮಾರಾಟವಾಗುವುದು ಇಷ್ಟವಿರಲಿಲ್ಲವೆನ್ನಲಾಗಿದೆ.

ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು?, ನೆಟ್ಟಿಗರು ಹೇಳ್ತಾರೆ ನೋಡಿ!ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು?, ನೆಟ್ಟಿಗರು ಹೇಳ್ತಾರೆ ನೋಡಿ!

ಅತ್ತ, ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಈಗಿನ ಮ್ಯಾನೇಜ್ಮೆಂಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಕೂಡ ಮಾಡಿದ್ದರು. ಹೀಗಾಗಿ, ಅವರು ಟ್ವಿಟ್ಟರ್‌ನ ಅಧಿಕಾರ ತೆಗೆದುಕೊಂಡ ಬಳಿಕ ಪರಾಗ್ ಅಗರ್ವಾಲ್ ಅವರ ಬದಲು ಬೇರೊಬ್ಬರನ್ನು ಸಿಇಒ ಸ್ಥಾನದಲ್ಲಿ ಕೂರಿಸುವ ಸಾಧ್ಯತೆ ದಟ್ಟವಾಗಿದೆ.

ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷಕೋಟಿ ರೂ) ಹಣಕ್ಕೆ ಟ್ವಿಟ್ಟರ್ ಅನ್ನು ಖರೀದಿಸಿದ್ದಾರೆ. ಅದಕ್ಕಾಗಿ ಇದೇ ಜನವರಿಯಿಂದಲೇ ಅವರು ಟ್ವಿಟ್ಟರ್‌ನ ಶೇರುಗಳನ್ನು ಬಹಳ ರಹಸ್ಯವಾಗಿ ಖರೀದಿಸಲು ಆರಂಭಿಸಿದ್ದರು. ಶೇ. 9.2ರಷ್ಟು ಷೇರುಗಳ ಒಡೆಯರಾದ ಬಳಿಕ ಅವರು ಕಾನೂನಾತ್ಮಕವಾಗಿ ಟ್ವಿಟ್ಟರ್ ಖರೀದಿಗೆ ಬಿಡ್ ಹಾಕಿ ಇತರ ಷೇರುದಾರರ ಮನವೊಲಿಸಿ ಕೊನೆಗೂ ಗೆಲುವು ಸಾಧಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Elon Musk has lined up a new CEO for Twitter Parag Agrawal, news agency Reuters has reported quoting an unnamed source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X