ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಲ್ಲಿ 130 ಕೋಟಿ ಸಂಬಳ ಪಡೆಯುವ ವಿಜಯಾ ಗದ್ದೆ; ಮಸ್ಕ್ ಪ್ರವೇಶದ ಬಳಿಕ ಗದ್ದೆ ಕೆಲಸ ಉಳಿಯುತ್ತಾ?

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಮೇ 5: ಎಲಾನ್ ಮಸ್ಕ್ ಪ್ರವೇಶದ ಬಳಿಕ ಟ್ವಿಟ್ಟರ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಟ್ವಿಟ್ಟರ್‌ನ ಸಿಇಒ ಸ್ಥಾನದಲ್ಲಿ ಪಲ್ಲಟವಾಗಬಹುದು. ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರ ಬದಲಾವಣೆ ಅಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇದೇ ಹೊತ್ತಿನಲ್ಲಿ ಈಗ ಟ್ವಿಟ್ಟರ್‌ನಲ್ಲಿ ಪ್ರಮುಖ ಹುದ್ದೆಯಲ್ಲಿರುವ ಭಾರತೀಯ ಮೂಲದ ವಿಜಯಾ ಗದ್ದೆ ಸ್ಥಾನಕ್ಕೂ ಕುತ್ತು ಬಂದಿದೆ ಎನ್ನುವ ಸುದ್ದಿ ಇದೆ. ಆಂಧ್ರ ಮೂಲದ ವಿಜಯಾ ಗದ್ದೆ ಟ್ವಿಟ್ಟರ್‌ನ ಲೀಗಲ್ ಕೌನ್ಸಿಲರ್ ಆಗಿದ್ದಾರೆ.

ಟ್ವೀಟ್‌ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲ ಟ್ವೀಟ್‌ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲ

ಟ್ವಿಟ್ಟರ್‌ನ ಹೊಸ ಒಡೆಯ ಎಲಾನ್ ಮಸ್ಕ್ ಬಹಳ ಹಿಂದೆಯೇ ಟ್ವಿಟ್ಟರ್‌ನ ಕಾನೂನು ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದುಂಟು. ಹೀಗಾಗಿ, ವಿಜಯಾ ಗದ್ದೆ ಸ್ಥಾನ ಅಲುಗಾಡುತ್ತಿರಬಹುದು.

Know how much Vijaya Gadde gets if sacked in Twitter

ಟ್ವಿಟ್ಟರ್‌ನ ಕಾನೂನು ಸಲಹೆಗಾರ್ತಿಯಾಗಿ 48 ವರ್ಷದ ವಿಜಯಾ ಗದ್ದೆ ಒಳ್ಳೆಯ ಸಂಬಳ ಪಡೆಯುತ್ತಿದ್ದಾರೆ. ಅವರ ಸಂಬಳ ವರ್ಷಕ್ಕೆ 17 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ) ಇದೆ.

ಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆ

ಒಂದು ವೇಳೆ ಟ್ವಿಟ್ಟರ್‌ನಲ್ಲಿ ಅವರು ಕೆಲಸ ಕಳೆದುಕೊಂಡರೆ ಪರಿಹಾರವಾಗಿ 95 ಕೋಟಿ ರೂ ಪಡೆಯುವ ಅಂದಾಜು ಇದೆ. ಇದರಲ್ಲಿ ಅವರ ಪಾಲಿನ ಟ್ವಿಟ್ಟರ್ ಕಂಪನಿ ಷೇರುಗಳೂ ಒಳಗೊಂಡಿವೆ.

ಕೆಲಸಕ್ಕೆ ಯಾಕೆ ಕುತ್ತು?; ಎಲಾನ್ ಮಸ್ಕ್ ಬಂದ ಬಳಿಕ ಟ್ವಿಟ್ಟರ್‌ನ ಕಾರ್ಯನಿರ್ವಹಣೆಯಲ್ಲಿ ಬಹಳಷ್ಟು ಬದಲಾವಣೆಗಳಾಗುವ ನಿರೀಕ್ಷೆ ಇದೆ. ಟ್ವಿಟ್ಟರ್ ಅನ್ನು ಲಾಭದಾಯಕ ಸಂಸ್ಥೆಯಾಗಿ ಹೇಗೆ ಬೆಳೆಸುವುದು ಎಂಬುದು ಮಸ್ಕ್‌ಗೆ ಆದ್ಯತೆಯ ವಿಷಯವಾಗಿದೆ.

Know how much Vijaya Gadde gets if sacked in Twitter

ಟ್ವಿಟ್ಟರ್‌ನಿಂದ ಯಾವ್ಯಾವ ರೀತಿ ಲಾಭ ಮಾಡಬಹುದು? ಎಂಬ ಆಲೋಚನೆಯಲ್ಲಿದ್ದಾರೆ. ಕಂಪನಿಯ ಸಿಬ್ಬಂದಿವರ್ಗದ ಸಂಖ್ಯೆಗೆ ಕಡಿವಾಣ ಹಾಕುವುದು, ದೊಡ್ಡ ಹುದ್ದೆಯಲ್ಲಿರುವವರ ಸಂಬಳ ಕಡಿತ ಮಾಡುವುದು ಇತ್ಯಾದಿ ಕ್ರಮಗಳಿಗೆ ಅವರು ಮುಂದಾಗಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ.

ಇನ್ನು, ಟ್ವಿಟ್ಟರ್ ಬಹಳ ಮುಕ್ತವಾಗಿರಬೇಕು. ಅಭಿಪ್ರಾಯಭೇದಕ್ಕಾಗಿ ಒಂದು ಟ್ವಿಟ್ಟರ್ ಖಾತೆಯನ್ನು ತೆಗೆದುಹಾಕುವುದು ಇತ್ಯಾದಿ ಇರಬಾರದು. ವಾಕ್ ಸ್ವಾತಂತ್ರ್ಯದ ಮಾದರಿಯಾಗಿ ಟ್ವಿಟ್ಟರ್ ಅನ್ನು ರೂಪಿಸುವುದಾಗಿ ಎಲಾನ್ ಮಸ್ಕ್ ಹೇಳಿಕೊಂಡಿದ್ದುಂಟು.

ಆದರೆ, ಹಿಂದೆ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನ ತೆಗೆದುಹಾಕಿದ್ದರ ಬಗ್ಗೆ ಮಸ್ಕ್ ಅವರಿಗೆ ಬೇಸರ ಇದೆ. ಹಾಗೆಯೇ, ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ಪತ್ರಿಕೆಯ ಟ್ವಿಟ್ಟರ್ ಖಾತೆ ಕಿತ್ತುಹಾಕಲಾಗಿತ್ತು. ಆ ಬಗ್ಗೆ ಎಲಾನ್ ಮಸ್ಕ್ ಕೆಲ ದಿನಗಳ ಹಿಂದೆ ಕಿಡಿಕಾರಿದ್ದರು.

ಹಂಟರ್ ಬೈಡನ್‌ರ ಲ್ಯಾಪ್‌ಟಾಪ್ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದಕ್ಕೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ಪತ್ರಿಕೆಯ ಖಾತೆಯನ್ನ ಅಮಾನತುಗೊಳಿಸಲಾಗಿತ್ತು. ಈ ಕ್ರಮದ ಹಿಂದೆ ವಿಜಯಾ ಗದ್ದೆ ಕೈ ಇತ್ತು. ಈ ಬಗ್ಗೆ ಮಸ್ಕ್ ಬಹಿರಂಗವಾಗಿಯೆ ಅಸಮಾಧಾನ ಹೊರಹಾಕಿದ್ದರು. "ಸತ್ಯದ ಸುದ್ದಿಯನ್ನು ಹಾಕಿದ್ದಕ್ಕೆ ಪ್ರಮುಖ ಸುದ್ದಿ ಸಂಸ್ಥೆಯ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸುವುದು ಅಸಂಬದ್ಧ ಕ್ರಮ" ಎಂದು ಏಪ್ರಿಲ್ 27ರಂದು ಟ್ವೀಟ್ ಮಾಡಿದ್ದಾರೆ.

ವಿಜಯಾ ಗದ್ದೆ ಪರಿಚಯ; ಭಾರತದಲ್ಲಿ ಜನಿಸಿದ ವಿಜಯಾ ಗದ್ದೆ ತಂದೆ ಕೆಮಿಕಲ್ ಇಂಜಿನಿಯರ್ ಆಗಿದ್ದು, ಕಾರ್ಯ ನಿಮಿತ್ತ ಟೆಕ್ಸಾಸ್‌ಗೆ ತೆರಳಿದರು. ಹೀಗಾಗಿ, ವಿಜಯಾ ಅವರ ಬಾಲ್ಯದ ದಿನಗಳು ಟೆಕ್ಸಾಸ್ ನಲ್ಲಿ ಕಳೆದರು. ಅಲ್ಲಿಂದ ವಿಜಯಾ ಅವರ ಕುಟುಂಬ ಈಸ್ಟ್ ಕೋಸ್ಟ್ ಕಡೆ ವರ್ಗವಾಗಿದ್ದರಿದ ವಿಜಯಾ ಅವರು ನ್ಯೂಜೆರ್ಸಿಯಲ್ಲಿ ಹೈಸ್ಕೂಲ್ ಮುಗಿಸಿದರು.

ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರೆ ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಪದವೀಧರರಾದ ವಿಜಯಾ ಅವರು ಬೇ ಏರಿಯಾದಲ್ಲಿ ಕೆಲ ಸ್ಟಾರ್ ಅಪ್ ಕಂಪನಿಗಳಲ್ಲಿ ವೃತ್ತಿ ಆರಂಭಿಸಿ 10 ವರ್ಷಗಳ ಅನುಭವ ಹೊಂದಿದ ಬಳಿಕ 2011ರಲ್ಲಿ ಸೋಷಿಯಲ್-ಮೀಡಿಯಾ(ಟ್ವಿಟ್ಟರ್) ಕಂಪನಿಗೆ ಸೇರಿಕೊಂಡರು.

ಜನಪ್ರಿಯ ಕಾರ್ಪೊರೇಟ್ ವಕೀಲೆ ಕಾರ್ಪೊರೇಟ್ ವಕೀಲೆಯಾಗಿ ಗದ್ದೆ, ಕಂಪನಿಯಲ್ಲಿ ನೀತಿಗಳನ್ನು ರೂಪಿಸುವ ಕಾರ್ಯ ನಿರ್ವಹಿಸುತ್ತಾರೆ, ಜಾಗತಿಕ ರಾಜಕಾರಣದಲ್ಲಿ ಕಳೆದ ಒಂದು ದಶಕದಲ್ಲಿ ಟ್ವಿಟರ್ ಪಾತ್ರವು ಹೆಚ್ಚಾಗಲು ಹಾಗೂ ಬಳಕೆದಾರರ ಗೌಪ್ಯತೆ, ಸುರಕ್ಷತೆಗೆ ಗದ್ದೆ ಕಾರಣರು ಎನ್ನಬಹುದು. ಫಾರ್ಚೂನ್‌ ವರದಿ ಪ್ರಕಾರ, ಟ್ವಿಟರ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡೊರ್ಸೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ ವಿಜಯಾ ಅವರು ಕಚೇರಿಯಲ್ಲಿದ್ದರು. 2018 ರ ನವೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟ್ಟರ್ ಸಂಸ್ಥೆ ನಿಯೋಗ ಭೇಟಿಯಾದಾಗ ಡೊರ್ಸಿಯೊಂದಿಗೆ ವಿಜಯಾ ಸಹ ಬಂದಿದ್ದರು.

Angels ಎಂಬ ಸಂಸ್ಥೆಯ ಸಹ ಸ್ಥಾಪಕಿ: ಹಲವು ಜನಪ್ರಿಯ ಮ್ಯಾಗಜೀನ್‌ಗಳು ವಿಜಯಾ ಗದ್ದೆ ಅವರನ್ನು ಪ್ರಭಾವಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಎಂದು ಬಣ್ಣಿಸಿ ಸರಣಿ ಲೇಖನಗಳನ್ನು ಬರೆದಿವೆ. ಟ್ವಿಟ್ಟರ್ ಅಲ್ಲದೆ Angels ಎಂಬ ಸಂಸ್ಥೆಯ ಸಹ ಸ್ಥಾಪಕಿಯಾಗಿರುವ ವಿಜಯಾ ಅವರು ಸಂಸ್ಥೆಗಳಿಂದ ಮಹಿಳಾ ಉದ್ಯೋಗಿಗಳಿಗೆ ಸಿಗಬೇಕಿರುವ ಪರಿಹಾರ ಮೊತ್ತ ತಾರತಮ್ಯದ ಬಗ್ಗೆ ಹೋರಾಟ ನಡೆಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Twitter's top legal counsel Vijaya Gadde may get 95 crore rs if she is sacked by Elon Musk, says a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X