ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

YAHOO ತೆಕ್ಕೆಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್?

By Madhusoodhan
|
Google Oneindia Kannada News

ನ್ಯೂಯಾರ್ಕ್, ಜೂನ್ 04: ಸಾಮಾಜಿಕ ತಾಣದಲ್ಲಿ ಮತ್ತೊಂದು ಬದಲಾವಣೆ ಆಗುವ ಲಕ್ಷಣಗಳು ಗೋಚರವಾಗಿವೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಅಧಿಕಾರಿಗಳು ಯಾಹೂ ಸಂಸ್ಥೆಯ ಸಿಇಒ ಮರಿಸ್ಸಾ ಮಾಯೇರ್ ಅವರನ್ನುಭೇಟಿ ಮಾಡಿ ವಿಲೀನದ ಬಗ್ಗೆ ಮಾತನಾಡಿದ್ದಾರೆ.

ಆದರೆ ಟ್ವಿಟರ್ ಮತ್ತು ಯಾಹೂ ಎರಡು ಕಂಪನಿಗಳು ಸುದ್ದಿಯನ್ನು ಅಲ್ಲಗಳೆದಿದ್ದು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬದಲಾವಣೆ ಆದರೂ ಆಶ್ಚರ್ಯವಿಲ್ಲ. ['ಅಮೀರ್ ಖಾನ್ ಸೋದರಿ' ಪ್ರಿಯಾಮಣಿಗೆ ಟ್ವೀಟ್ ಪೆಟ್ಟು]

yahoo

ತಕ್ಷಣದ ಸುದ್ದಿಗಳನ್ನು ನೀಡುವುದರಲ್ಲಿ ಟ್ವಿಟ್ಟರ್ ಬಹುದೊಡ್ಡ ಮಾಧ್ಯಮವಾಗಿ ಬೆಳೆದು ನಿಂತಿದೆ. ಹಾಗಾಗಿ ಯಾಹೂ ಟ್ವಿಟ್ಟರ್ ನ್ನು ತನ್ನ ಆಡಳಿತಕ್ಕೆ ತೆಗೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿದೆ.

ಈ ಆಡಳಿತ ಮಂಡಲಿಯ ಸಭೆಯಲ್ಲಿ, ಟ್ವಿಟ್ಟರ್ ಮತ್ತು ಯಾಹೂ ಸಂಸ್ಥೆಯ ಕಾರ್ಯಕಾರಿ ಅಧಿಕಾರಿಗಳು ಈ ವಿಲೀನದ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.[ಬೆಂಗಳೂರಿನ ಸಂಸ್ಥೆ ಖರೀದಿಸಿದ ದೈತ್ಯ ಯಾಹೂ]

"ತಕ್ಷಣದ ಸುದ್ದಿಗೆ ಟ್ವಿಟ್ಟರ್ ನೆಚ್ಚಿನ ತಾಣವಾಗಿ ಬೆಳೆದಿದೆ ಮತ್ತು ಯಾಹೂ ಈ ತಾಣದ ಮೇಲೆ ಕಣ್ಣಿಟ್ಟಿದೆ. ಈ ವಿಲೀನ ಯೋಜನೆ ಸಾಧ್ಯವಿಲ್ಲ ಎಂದೇನಿಲ್ಲ" ಎಂದು ಮೂಲಗಳು ತಿಳಿಸಿವೆ. ಮುಂದಿನ ವಾರ ಮತ್ತೊಂದು ಸಭೆ ನಡೆಯಲ್ಲಿದ್ದು ಸ್ಪಷ್ಟ ಮಾಹಿತಿ ಸಿಗಲಿದೆ.

English summary
Executives from the sinking micro-blogging website Twitter have met Yahoo CEO Marissa Mayer to discuss merger possibilities. At the management meeting, Twitter and Yahoo executives spent several hours hashing out Yahoo's financials and whether a strategic combo might make sense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X