ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬಿಯಾದಲ್ಲಿ ಅವಳಿ ಬಾಂಬ್ ಸ್ಫೋಟಕ್ಕೆ 22 ಬಲಿ

By ವಿಕಾಸ್ ನಂಜಪ್ಪ
|
Google Oneindia Kannada News

ಟ್ರಿಪೋಲಿ, ಜನವರಿ 24: ಲಿಬಿಯಾದ ಬೆಂಘಾಜಿ ನಗರದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅವಳಿ ಬಾಂಬ್ ಸ್ಫೋಟದಲ್ಲಿ 22 ಜನರು ಅಸುನೀಗಿದ್ದಾರೆ.

ಬೆಂಘಾಜಿಯ ಅಲ್ ಸಲ್ಮಾನಿ ಜಿಲ್ಲೆಯಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಜನರು ಮಸೀದಿಯಿಂದ ಪ್ರಾರ್ಥನೆ ಮುಗಿಸಿ ವಾಪಾಸಾಗುತ್ತಿದ್ದ ವೇಳೇ ಬಾಂಬ್ ಸ್ಫೋಟಿಸಿದ್ದು ಹತ್ತಾರು ಜನರ ಸಾವಿಗೆ ಕಾರಣವಾಗಿದೆ.

ಮೊದಲ ಬಾಂಬ್ ಮಸೀದಿಯ ಮುಂಭಾಗ ಸ್ಫೋಟಿಸಿದ್ದರೆ, ಅದೇ ಪ್ರದೇಶದಲ್ಲಿ ಮೂವತ್ತು ನಿಮಿಷ ತಡವಾಗಿ ಎರಡನೇ ಬಾಂಬ್ ಸ್ಫೋಟಿಸಿದೆ. ಸತ್ತವರಲ್ಲಿ ಸೈನಿಕರು ಮತ್ತು ಸಾಮಾನ್ಯ ಜನರು ಸೇರಿದ್ದಾರೆ.

Twin bombings kill 22 in Libya

ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡ್ಢಾಪಿಯನ್ನು 2011ರಲ್ಲಿ ನ್ಯಾಟೋ ಪಡೆಗಳು ಕೊಂದ ನಂತರ ದೇಶ ಬೆಂಕಿಯ ಬಾಣಲೆಯಾಗಿದೆ. ಇದಾದ ಬಳಿಕ 2014ರಿಂದ ದೇಶದಲ್ಲಿ ಖಲಿಫಾ ಹಫ್ತಾರ್, ಇಸ್ಲಾಮಿಕ್ ಸಂಘಟನೆಗಳು ಮತ್ತು ಇತರರ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ. ಈ ಕಾರಣಕ್ಕೆ ಬಾಂಬ್ ಗಳು ದಿನನಿತ್ಯ ಬೀಳುತ್ತಿರುತ್ತವೆ. ಅವುಗಳಲ್ಲೇ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಬಲವಾಗಿದ್ದ 22 ಜನರನ್ನು ಬಲಿ ಪಡೆದಿದೆ.

English summary
At least 22 persons were killed in a double bomb attack in the Libyan city of Benghazi on Tuesday. The attack took place at Benghazi’s Al Salmani district just as worshippers were leaving a Mosque after prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X