ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ 17 ಮಿಲಿಯನ್ ಪೌಂಡ್ ಬೋನಸ್ ಕೊಟ್ಟ ಸಿಇಒ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 04: ಟರ್ಕಿ ದೇಶದ ಇ ಕಾಮರ್ಸ್ ಸಂಸ್ಥೆ ಸಿಇಒ ಈಗ ಉದ್ಯಮ ಲೋಕದ ಬಿಗ್ ಬಾಸ್ ಎನಿಸಿಕೊಂಡಿದ್ದಾರೆ. ತನ್ನ ಉದ್ಯೋಗಿಗಳಿಗೆ 17 ಮಿಲಿಯನ್ ಪೌಂಡ್ ಬೋನಸ್ ನೀಡಿದ್ದಾರೆ.

ಟರ್ಕಿಯ ಆನ್ ಲೈನ್ ಫುಡ್ ಸರ್ವೀಸ್ ಸಂಸ್ಥೆ ಯೆಮೆಕ್ಸೆಪೆಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೆವ್ಜತ್ ಯಡಿನ್ ಅವರು ತಮ್ಮ ಸಂಸ್ಥೆಯನ್ನು ಜರ್ಮನಿಯ ಡೆಲಿವರಿ ಹೀರೋ ಕಂಪನಿಗೆ 375 ಮಿಲಿಯನ್ ಪೌಂಟ್ ಮೊತ್ತಕ್ಕೆ ಮಾರಾಟ ಮಾಡಿದ ಬೆನ್ನಲ್ಲೇ ಸಂಸ್ಥೆಯ 114 ಉದ್ಯೋಗಿಗಳಿಗೆ 17 ಮಿಲಿಯನ್ ಪೌಂಡ್ ಘೋಷಿಸಿದ್ದಾರೆ.

ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಎಲ್ಲಾ ಸಿಬ್ಬಂದಿಗಳು ಕಾರಣ, ಯಶಸ್ಸಿನಲ್ಲಿ ಅವರ ಪಾಲು ಅವರಿಗೆ ನೀಡುತ್ತಿದ್ದೇನೆ ಎಂದಿದ್ದಾರೆ.

Turkish tech firm CEO gives 17 million pounds as bonus to employees

2000ರಲ್ಲಿ 50,000 ಪೌಂಡ್ ಬಂಡವಾಳದೊಂದಿಗೆ ಸಂಸ್ಥೆ ಆರಂಭಿಸಿದ್ದ ಯಡಿನ್ ಅವರು ಭಾರಿ ಮೊತ್ತದ ಬೋನಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯವಾಗಿ ಈ ಸಂಸ್ಥೆಯ ಉದ್ಯೋಗಿಗಳ ಸಂಬಳ 700 ರಿಂದ 1,200 ಪೌಂಡ್ ಗಳಷ್ಟಿದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.

1999ರಲ್ಲಿ ಅಮೆರಿಕದ ಉದ್ಯಮಿ ಬಾಬ್ ಥಾಮ್ಸನ್ ಅವರು ತಮ್ಮ ಮಿಚಿಗನ್ ನ ಗ್ರ್ಯಾಂಡ್ ರಾಪಿಡ್ಸ್ ಅಸ್ಫಾಲ್ಟ್ ಸಂಸ್ಥೆಯ 550 ಸಿಬ್ಬಂದಿಗೆ 128 ಮಿಲಿಯನ್ ಡಾಲರ್ ಬೋನಸ್ ನೀಡಿದ್ದರು. 200 ಡಾಲರ್ ನಿಂದ 1 ಮಿಲಿಯನ್ ಡಾಲರ್ ತನಕ ಬೋನಸ್ ಸಿಕ್ಕಿತ್ತು.

English summary
Nevzat Aydin, The CEO of a Turkish tech firm Yemek-sepeti, has shown exemplary large-heartedness by giving away millions as bonus to his employees, as per media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X