ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯಿಂದ ಡ್ರೋಣ್ ದಾಳಿ; 19 ಸಿರಿಯಾ ಸೈನಿಕರು ಬಲಿ

|
Google Oneindia Kannada News

ಡಮಾಸ್ಕಸ್, ಮಾರ್ಚ್ 02 : ಟರ್ಕಿ ನಡೆಸಿದ ಡ್ರೋಣ್ ದಾಳಿಗೆ ಸಿರಿಯಾದ 19 ಸೈನಿಕರು ಬಲಿಯಾಗಿದ್ದಾರೆ. ಎರಡೂ ದೇಶಗಳ ನಡುವಿನ ಶಸ್ತ್ರಾಸ್ತ್ರ ಸಂಘರ್ಷದಿಂದಾಗಿ ಗಡಿಯಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಟರ್ಕಿ ಇಡ್ಲಿಬ್ ಪ್ರಾಂತ್ಯದ ಸಿರಿಯಾ ಸೈನಿಕರ ನೆಲೆಯನ್ನು ಗುರಿಯಾಗಿಸಿಕೊಂಡು ಡ್ರೋಣ್ ದಾಳಿ ನಡೆಸಿದೆ. ಫೆಬ್ರವರಿ 28ರಂದು ಸಿರಿಯಾ ನಡೆಸಿದ ದಾಳಿಯಲ್ಲಿ 33 ಟರ್ಕಿಯ ಸೈನಿಕರು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ತೀರಿಸಿಕೊಳ್ಳುವುದಾಗಿ ಟರ್ಕಿ ಘೋಷಿಸಿತ್ತು. ಭಾನುವಾರ ದಾಳಿ ಮಾಡಿದೆ.

ಸಿರಿಯಾ ವೈಮಾನಿಕ ದಾಳಿ: 34 ಟರ್ಕಿ ಸೈನಿಕರು ಬಲಿಸಿರಿಯಾ ವೈಮಾನಿಕ ದಾಳಿ: 34 ಟರ್ಕಿ ಸೈನಿಕರು ಬಲಿ

Turkish

ಭಾನುವಾರ ಇಡ್ಲಿಬ್ ಪಾಂತ್ಯದಲ್ಲಿನ ಸೇನಾ ನೆಲೆ ಗುರಿಯಾಗಿಸಿಕೊಂಡು ಟರ್ಕಿ ದಾಳಿ ಮಾಡಿದೆ. ಟರ್ಕಿ ಸೇನೆ ಬಂಡುಕೋರರಿಗೆ ನೆರವು ನೀಡುತ್ತಿದೆ ಎಂದು ರಷ್ಯಾ ಆರೋಪ ಮಾಡಿತ್ತು. ಈ ಆರೋಪದ ಬಳಿಕ ಸಿರಿಯಾ ಟರ್ಕಿ ಸೈನಿಕರ ಮೇಲೆ ದಾಳಿ ಮಾಡಿತ್ತು.

ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು

ಉಭಯ ದೇಶಗಳ ನಡುವಿನ ಸಂಘರ್ಷದಿಂದಾಗಿ ಟರ್ಕಿ ಮತ್ತು ಸಿರಿಯಾ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿರಿಯಾ ಮತ್ತು ಟರ್ಕಿ ನಡುವಿನ ಸಂಬಂಧ ಹಳಸಿದ್ದು, ಉಭಯ ದೇಶಗಳು ಶಸ್ತ್ರಾಸ್ತ್ರ ಸಂಘರ್ಷಕ್ಕೆ ಇಳಿದಿವೆ.

ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಆಕ್ರಮಣಕ್ಕೆ ಕಾರಣ ಏನು?ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಆಕ್ರಮಣಕ್ಕೆ ಕಾರಣ ಏನು?

ಸಿರಿಯಾ ಐಎಸ್‌ಐಎಸ್ ಉಗ್ರರ ದೌರ್ಜನ್ಯಕ್ಕೆ ಸಿಲುಕಿ ತತ್ತರಿಸಿರುವ ದೇಶ. ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಲವರು ದೇಶ ಬಿಟ್ಟು ಅಕ್ಕಪಕ್ಕದ ಲೆಬನಾನ್, ಟರ್ಕಿ, ಜೋರ್ಡಾನ್ ಮುಂತಾದ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

English summary
19 Syrian soldiers killed in Turkish drone strikes. At least 33 Turkish soldiers killed after Syrian attack on February 28, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X