ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ ಟರ್ಕಿ: ಇದರ ಮೌಲ್ಯ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ!

|
Google Oneindia Kannada News

ಟರ್ಕಿ, ಡಿಸೆಂಬರ್ 25: ಅದಾಗಲೇ ಚಿನ್ನದ ಗಣಿಕಾರಿಕೆಯಲ್ಲಿ ಈ ವರ್ಷ ತನ್ನದ ದಾಖಲೆ ಮುರಿದಿದ್ದ ಟರ್ಕಿಯು 99 ಟನ್‌ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ್ದು ಇದರ ಮೌಲ್ಯವು ಆರು ಶತಕೋಟಿ ಡಾಲರ್‌ಗಿಂತ ಹೆಚ್ಚಿದೆ.

ಟರ್ಕಿಯು ಕಂಡುಹಿಡಿದಿರುವ ಚಿನ್ನದ ನಿಕ್ಷೇಪವು ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ ಎನ್ನಲಾಗಿದೆ. ಈ ನಿಧಿಯನ್ನು ಟರ್ಕಿಯ ಕೃಷಿ ಸಾಲ ಸಹಕಾರ ಸಂಸ್ಥೆಗಳ ಮುಖ್ಯಸ್ಥ ಫಹ್ರೆಟಿನ್ ಪೊಯ್ರಾಜ್ ಮತ್ತು ರಸಗೊಬ್ಬರ ಉತ್ಪಾದನಾ ಸಂಸ್ಥೆಯಾದ ಗುಬರ್ಟಾಸ್ ಕಂಡುಹಿಡಿದಿದ್ದಾರೆ ಎಂದು ರಾಜ್ಯ ಟರ್ಕಿಶ್ ಸುದ್ದಿ ಸಂಸ್ಥೆ ಅನಾಡೋಲು ವರದಿ ಮಾಡಿದೆ.

ಸತತ 2 ದಿನಗಳು ಇಳಿಕೆಗೊಂಡಿದ್ದ ಚಿನ್ನದ ಬೆಲೆ ಈಗ ಎಷ್ಟಿದೆ?ಸತತ 2 ದಿನಗಳು ಇಳಿಕೆಗೊಂಡಿದ್ದ ಚಿನ್ನದ ಬೆಲೆ ಈಗ ಎಷ್ಟಿದೆ?

ಈ ಹೊಸ ಚಿನ್ನದ ನಿಕ್ಷೇಪವನ್ನು ಎರಡು ವರ್ಷದೊಳಗೆ ತೆಗೆಯಲು ಪ್ರಾರಂಭಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ. ಈ ಸುದ್ದಿಯು ಹೊರಬೀಳುತ್ತಿದ್ದಂತೆ ಟರ್ಕಿಶ್ ವಿನಿಮಯ ಕೇಂದ್ರಗಳಲ್ಲಿ ಗುಬರ್ಟಾಸ್ ಷೇರುಗಳು ಶೇಕಡಾ 10 ರಷ್ಟು ಏರಿದೆ.

Turkey Discovers Massive Gold Treasure Worth More Than GDPs of Many Countries

ಈ ವರ್ಷ ಟರ್ಕಿ 38 ಟನ್ ಚಿನ್ನ ಉತ್ಪಾದಿಸುವ ಮೂಲಕ ತನ್ನ ದಾಖಲೆಯನ್ನು ಮುರಿಯಿತು. ಇಂಧನ ಸಚಿವ ಫೇತ್ ಡೊನ್ಮೆಜ್ ಸೆಪ್ಟೆಂಬರ್‌ನಲ್ಲಿ ವಾರ್ಷಿಕ 100 ಟನ್‌ಗಳಷ್ಟು ಉತ್ಪಾದನೆಯನ್ನು ತಲುಪುವ ಗುರಿಯನ್ನು ಹೊಂದಿದ್ದರು. ಇದೀಗ ಹೊಸ ನಿಕ್ಷೇಪವು ಎಲ್ಲಾ ರೀತಿಯಲ್ಲಿ ಗುರಿ ಮುಟ್ಟಲು ಪ್ರೇರಣೆ ನೀಡಿದೆ.

ಈ ಆವಿಷ್ಕಾರದ ಮೌಲ್ಯವು ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಾಗಿದ್ದು, ಅಂದಾಜು ಮೌಲ್ಯ 6 ಬಿಲಿಯನ್ ಡಾಲರ್ನಷ್ಟಿದೆ. ಮಾಲ್ಡೀವ್ಸ್‌ನ ಜಿಡಿಪಿ 4.87 ಬಿಲಿಯನ್ ಡಾಲರ್ ಆಗಿದೆ. ಬಾರ್ಬಡೋಸ್, ಗಯಾನಾ, ಮಾಂಟೆನೆಗ್ರೊ, ಮಾರಿಟಾನಿಯಾ, ಲೆಸೊಥೊ ದೇಶಗಳ ಜಿಡಿಪಿಯು 6 ಬಿಲಿಯನ್ ಡಾಲರ್‌ಗಳಿಗಿಂತ ಕಡಿಮೆಯಿದೆ.

English summary
Turkey has discovered a massive gold treasure. Total weight of this gold treasure is said to be 99 tonnes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X