ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾದಲ್ಲಿ ಮುಸ್ಲಿಂ ಮಹಿಳೆಯರಿಂದ ಸೆಕ್ಸ್ ಜಿಹಾದ್!

By Srinath
|
Google Oneindia Kannada News

ಟ್ಯುನಿಶಾ, ಸೆಪ್ಟೆಂಬರ್ 21: ಸಿರಿಯಾ ನಾಗರಿಕ ಯುದ್ಧದಲ್ಲಿ ಅತ್ಯಂತ ಮಾರಕವಾದ ರಾಸಾಯನಿಕ ಅಸ್ತ್ರ ಬಳಕೆಯಾಗಿದೆ ಎನ್ನುವುದು ವಿಶ್ವಸಂಸ್ಥೆಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಖಚಿತಪಡಿಸಲಾಗಿದೆ. ಈ ಮಧ್ಯೆ, ಆತಂಕಕಾರಿ ಸುದ್ದಿಯೊಂದು ಟ್ಯುನಿಶಿಯಾದಿಂದ ಹೊರಬಿದ್ದಿದೆ.

ಸಿರಿಯಾ ನಾಗರಿಕ ಯುದ್ಧದಲ್ಲಿ ಸಕ್ರಿಯರಾಗಿರುವ ಬಂಡುಕೋರ ಮುಸ್ಲಿಂ ಯೋಧರಿಗೆ ಲೈಂಗಿಕ ಸುಖ ನೀಡಲು ಟ್ಯುನಿಶಿಯಾದ ಮಹಿಳೆಯರನ್ನು ಸೆಕ್ಸ್ ಜಿಹಾದ್ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.

ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರದ ವಿರುದ್ಧ ದಂಗೆಯೆದ್ದ ಬಂಡುಕೋರರಿಗೆ ಈ ಮಹಿಳೆಯರು ತಮ್ಮನ್ನು ಲೈಂಗಿಕವಾಗಿ ಅರ್ಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ jihad al-nikah ಎನ್ನುತ್ತಾರೆ.

ಸೆಕ್ಸ್ ಜಿಹಾದ್: ಸಂಸತ್ತಿಗೆ ಅಧಿಕೃತ ಮಾಹಿತಿ

ಸೆಕ್ಸ್ ಜಿಹಾದ್: ಸಂಸತ್ತಿಗೆ ಅಧಿಕೃತ ಮಾಹಿತಿ

ಈ ವಿಷಯವನ್ನು ಟ್ಯುನಿಶಿಯಾದ ಆಂತರಿಕ ವ್ಯವಹಾರಗಳ ಸಚಿವ Lotfi ben Jeddou ಅವರು ಗುರುವಾರ ಸಂಸತ್ತಿನಲ್ಲಿಯೇ ಈ ವಿಷಯ ತಿಳಿಸಿದ್ದಾರೆ.
ಸೆಕ್ಸ್ ಜಿಹಾದ್ ಹೆಸರಿನಲ್ಲಿ ನೂರಾರು ಸೈನಿಕರ ಜತೆ ಸಂಭೋಗ ನಡೆಸಿದ ಇಂತಹ ಮಹಿಳೆಯರು ಗರ್ಭ ಧರಿಸಿ, ಟ್ಯುನಿಶಿಯಾಕ್ಕೆ ವಾಪಸಾಗುತ್ತಿದ್ದಾರೆ ಎಂದು ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಸೆಕ್ಸ್ ಜಿಹಾದ್ ಯುದ್ಧ: ಸುನ್ನಿ ಮುಸ್ಲಿಮರಲ್ಲಿ ಹೆಚ್ಚು

ಸೆಕ್ಸ್ ಜಿಹಾದ್ ಯುದ್ಧ: ಸುನ್ನಿ ಮುಸ್ಲಿಮರಲ್ಲಿ ಹೆಚ್ಚು

ಆದರೆ ಈ ರೀತಿ ಎಷ್ಟು ಮಹಿಳೆಯರು ದೇಶಕ್ಕೆ ಮರಳಿದ್ದಾರೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇಂತಹ ಸಂಪ್ರದಾಯ ಸುನ್ನಿ ಮುಸ್ಲಿಮರಲ್ಲಿ ಹೆಚ್ಚಾಗಿದ್ದು, ಇದನ್ನು ಯುವತಿಯರು 'ಪವಿತ್ರ ಯುದ್ಧ' ಎಂದು ಭಾವಿಸುತ್ತಾರಂತೆ.

ಸೆಕ್ಸ್ ಜಿಹಾದ್: ಒಬ್ಬೊಬ್ಬರೂ ಹತ್ತಾರು ಬಂಡುಕೋರರಿಗೆ ಆಹಾರ

ಸೆಕ್ಸ್ ಜಿಹಾದ್: ಒಬ್ಬೊಬ್ಬರೂ ಹತ್ತಾರು ಬಂಡುಕೋರರಿಗೆ ಆಹಾರ

ಒಬ್ಬೊಬ್ಬ ಮಹಿಳೆಯೂ ಒಂದು ದಿನಕ್ಕೆ 20 ರಿಂದ 100 ಬಂಡುಕೋರರಿಗೆ ಲೈಂಗಿಕ ಸುಖ ನೀಡಿ, ಗರ್ಭ ಧರಿಸಿದ ನಂತರ ಟ್ಯುನಿಶಾಕ್ಕೆ ವಾಪಸಾಗುತ್ತಿದ್ದಾರೆ. ಈ ನೆಟ್ ವರ್ಕ್ ಜೋರಾಗಿದೆ.

ಸೆಕ್ಸ್ ಜಿಹಾದ್: ಸಾವಿರಾರು ಯುವತಿಯರು ಬಂಡುಕೋರರಿಗೆ ಆಹಾರ

ಸೆಕ್ಸ್ ಜಿಹಾದ್: ಸಾವಿರಾರು ಯುವತಿಯರು ಬಂಡುಕೋರರಿಗೆ ಆಹಾರ

ಕಳೆದ ಮಾರ್ಚ್ ನಿಂದ ಸುಮಾರು 6 ಸಾವಿರ ಯುವತಿಯರನ್ನು ಸೆಕ್ಸ್ ಜಿಹಾದ್ ನಿಂದ ಪಾರುಮಾಡಲಾಗಿದೆ. ಆದಾಗ್ಯೂ ಸಾವಿರಾರು ಯುವತಿಯರು ಬಂಡುಕೋರರನ್ನು ತಣಿಸಲು ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

English summary
Tunisia sensual jihad women intercourse with army personnel. Tunisian women have traveled to Syria to wage 'sexual jihad', performing intercourse with dozens of Islamist fighters and returning home pregnant, Tunisia’s Interior Minister Lotfi ben Jeddou told MPs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X