ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೂನಿಷಿಯಾದ 'ಕ್ವಾರ್ಟೆಟ್' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

By Vanitha
|
Google Oneindia Kannada News

ನಾರ್ವೆ, ಅಕ್ಟೋಬರ್, 09 : ಜಗತ್ತಿನ ಪ್ರತಿಷ್ಟಿತ ನೊಬೆಲ್ ಶಾಂತಿ ಪ್ರಶಸ್ತಿ ಈ ಬಾರಿ ಟುನಿಷಿಯಾದ 'ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್ ಸಂಸ್ಥೆ'ಗೆ ನೀಡಲಾಗಿದೆ. ನಾರ್ವೆಯನ್ ನಲ್ಲಿ ಅಕ್ಟೋಬರ್ 09ರ ಶುಕ್ರವಾರದಂದು ನಡೆದ ಕಾರ್ಯಕ್ರಮದಲ್ಲಿ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕ ಕೊಡುಗೆ ನೀಡಿರುವುದರ ಸಲುವಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್ ಸಂಸ್ಥೆಗೆ ಕೊಡಲಾಗಿದೆ ಎಂದು ನಾರ್ವೆಯನ್ ಕಮಿಟಿ ತಿಳಿಸಿದೆ.[ಭೌತ ವಿಜ್ಞಾನದ 2 ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ]

Tunisia's National Dialogue Quartet wins 2015 Nobel Peace Prize

ಡುನಿಷಿಯಾ ರಾಷ್ಟ್ರದ ನಾಗರಿಕ ವಲಯ ಯುದ್ಧದಲ್ಲಿ ಮುಳುಗಿದ್ದ ಸಮಯದಲ್ಲಿ ಶಾಂತಿಯುತ ರಾಜಕೀಯಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ತಿಳಿಸಿಕೊಟ್ಟಿದ್ದಾರೆ. ಇದು ನಾಡಿನ ಅತಿ ಭರವಸೆಯ ಮೂಲಭೂತ ಹಕ್ಕಾಗಿ ಇದೀಗೂ ಉಳಿದುಕೊಂಡಿದೆ. ಈ ಸಲುವಾಗಿ ಕ್ವಾರ್ಟೆಟ್ ಸಂಸ್ಥೆ ಶಾಂತಿ ಪುರಸ್ಕಾರಕ್ಕೆ ಭಾಜನವಾಗಿದೆ.

ಭೌತಶಾಸ್ತ್ರದಲ್ಲಿ 2, ವೈದ್ಯ ವಿಜ್ಞಾನದಲ್ಲಿ 2, ರಸಾಯನ ಶಾಸ್ತ್ರದಲ್ಲಿ 2, ಸಾಹಿತ್ಯದಲ್ಲಿ ಒಬ್ಬರಿಗೆ ಈ ವರ್ಷದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಇದನ್ನು 1994ರಿಂದ ಆಲ್ಡ್ರೆಡ್ ನೊಬೆಲ್ ಅವರ ನೆನಪಿನಾರ್ಥ ನೀಡಲಾಗುತ್ತಿದೆ.

English summary
The Nobel Peace Prize was awarded to Tunisia's National Dialogue Quartet on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X