ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಇಂಡಿಯಾ ವಿಮಾನ ವೇಳಾಪಟ್ಟಿ ಬದಲಾಯಿಸಲು ಕುವೈತ್‌ ತುಳುಕೂಟ ಮನವಿ

|
Google Oneindia Kannada News

ಕುವೈತ್‌, ಜನವರಿ 02: ಮಂಗಳೂರು-ಕುವೈತ್-ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ಸ್ ವಿಮಾನದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಕೋರಿ ತುಳುಕೂಟ ಏರ್‌ ಇಂಡಿಯಾಕ್ಕೆ ಮನವಿ ಮಾಡಿದೆ.

ವೈರಲ್ ವಿಡಿಯೋ: ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯ ರಂಪಾಟವೈರಲ್ ವಿಡಿಯೋ: ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯ ರಂಪಾಟ

ತುಳುಕೂಟ ಕುವೈತ್ ನ ಅಧ್ಯಕ್ಷರಾದ ರಮೇಶ್ ಶೇಖರ್ ಭಂಡಾರಿ ಹಾಗೂ ಮಾಜಿ ಅಧ್ಯಕ್ಷರಾದ ವಿಲ್ಸನ್ ಡಿಸೋಜ಼ ಅವರು ಡಿಸೆಂಬರ್ 30,2018ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ಸ್ ನ ಕುವೈತ್ ವಿಭಾಗದ ದೇಶೀಯ ಮುಖ್ಯಸ್ಥರಾದ ಶ್ರೀ ಹರ್ ಜೀತ್ ಸಾಹ್ನೆ ಅವರನ್ನು ಭೇಟಿಯಾಗಿ ವಿಮಾನದ ವೇಳಾಪಟ್ಟಿ ಬದಲಾಯಿಸುವಂತೆ ಮನವಿ ಸಲ್ಲಿಸಿದರು.

ಏರ್ ಇಂಡಿಯಾದಲ್ಲಿ 115ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಏರ್ ಇಂಡಿಯಾದಲ್ಲಿ 115ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಮಂಗಳೂರು- ಕುವೈಟ್‌- ಮಂಗಳೂರು ನಡುವೆ ವಾರಕ್ಕೆ ಮೂರು ಬಾರಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಚರಿಸುತ್ತದೆ. ಈ ಮೊದಲು ಮಂಗಳವಾರ, ಗುರುವಾರ, ಶನಿವಾರ ಮಂಗಳೂರಿನಿಂದ ರಾತ್ರಿ 8.45ಕ್ಕೆ ಹೊರಟು 11.45ಕ್ಕೆ ಕುವೈಟ್‌ ತಲುಪುತ್ತಿತ್ತು; ತಡರಾತ್ರಿ 12.30ಕ್ಕೆ ಅಲ್ಲಿಂದ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿತ್ತು.

Tulukuta requst Air India to change flight timings to India from Kuwait

ಆದರೆ ಈಗ (ಸೋಮವಾರ, ಬುಧವಾರ , ಶುಕ್ರವಾರ) ಬೆಳಗ್ಗೆ 7ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 11.15 ಕುವೈಟ್‌ಗೆ; ಕುವೈಟ್‌ನಿಂದ ಅಪರಾಹ್ನ 12.15ಕ್ಕೆ ಮಂಗಳೂರಿನತ್ತ ಹೊರಡುತ್ತಿದೆ. ಈ ಸಮಯವು ಉದ್ಯೋಗಿಗಳಿಗೆ ಅನಾನುಕೂಲವಾಗಿದ್ದು ಕೇವಲ ಪ್ರಯಾಣಕ್ಕೆ ಎರಡು ದಿನದ ರಜೆ ವ್ಯರ್ಥವಾಗುತ್ತಿದೆ. ಹಾಗಾಗಿ ಈ ವೇಳಾಪಟ್ಟಿಯ ಬದಲಾಗಿ ಹಿಂದಿನ ಸಮಯವನ್ನೇ ಜಾರಿಗೊಳಿಸಬೇಕೆಂದು ಮನವಿಪತ್ರದಲ್ಲಿ ಕೋರಲಾಗಿದೆ.

ಕಟ್ಟಡಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ: 179 ಪ್ರಯಾಣಿಕರು ಬಚಾವ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ: 179 ಪ್ರಯಾಣಿಕರು ಬಚಾವ್

ಹರ್ ಜೀತ್ ಸಾಹ್ನೆಯವರು ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದೆಂಬ ಭರವಸೆಯನ್ನು ನೀಡಿದರು. ಈ ಮನವಿಪತ್ರ ಸಲ್ಲಿಕೆಯಲ್ಲಿ ತುಳುಕೂಟ ಕುವೈತ್ ನ ಜೊತೆ ಕರಾವಳಿ ಕರ್ನಾಟಕದ ಇತರ ಸಂಘ ಸಂಸ್ಥೆಗಳಾದ ಬಂಟರ ಸಂಘ ಕುವೈತ್,ಕುವೈತ್ ಕನ್ನಡ ಕೂಟ, ಬಿಲ್ಲವ ಸಂಘ ಕುವೈತ್, ಜಿ.ಎಸ್.ಬಿ. ಸಭಾ ಕುವೈತ್, ಕುವೈತ್ ಕೆನರಾ ವೆಲ್ ಫೇರ್ ಅಸ್ಸೋಸಿಯೇಶನ್, ಕುವೈತ್ ಪಾಂಗ್ಲಾ ಅಸ್ಸೋಸಿಯೇಶನ್, KKMA ಕರ್ನಾಟಕ ವಿಭಾಗ, ಯುನೈಟೆಡ್ ಮ್ಯಾಂಗಲೋರಿಯನ್ಸ್ ಕುವೈತ್,ಪಂಬೂರು ವೆಲ್ ಫೇರ್ ಅಸ್ಸೋಸಿಯೇಶನ್, ಕಣಜಾರ್ ವೆಲ್ ಫೇರ್ ಅಸ್ಸೋಸಿಯೇಶನ್, ಶಿರ್ವ ವೆಲ್ ಫೇರ್ ಅಸ್ಸೋಸಿಯೇಶನ್ ಕುವೈತ್,ಆಗ್ನೇಸಿಯನ್ ಅಲ್ಯುಮ್ನೆ ಕುವೈತ್, ಮೊಗವೀರ್ಸ್ ಅಸ್ಸೋಸಿಯೇಶನ್,ಸೈಂಟ್ ಅಲೋಶಿಯಸ್ ಕಾಲೇಜ್ ಅಲ್ಯುಮ್ನಿ ಅಸ್ಸೋಸಿಯೇಶನ್, ಬೆಳ್ಳೆವಿಶನ್ ಕುವೈತ್, ಕುಂದಾಪುರ್ ವರಾಡೊ ವೆಲ್ ಫೇರ್ ಅಸ್ಸೋಸಿಯೇಶನ್, ಕುವೈತ್ ಬ್ರಹ್ಮಾವರ್ ವೆಲ್ ಫೇರ್ ಅಸ್ಸೋಸಿಯೇಶನ್, ರಾಮಕ್ಷತ್ರಿಯ ಸಂಘ ಕುವೈತ್ ಇವರೆಲ್ಲರೂ ಕೈಜೋಡಿಸಿದ್ದಾರೆ.

English summary
Kuwaith Tulukuta request Air India CEO to change flights timings to India from Kuwait. Tulukuta president Ramesh Bhandari and former president Wilson met Air India CEO yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X