ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ

|
Google Oneindia Kannada News

ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 04 ರಿಂದ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಇದೀಗ ಕಡಲ ತೀರಕ್ಕೆ ಸುನಾಮಿ ಬಂದಪ್ಪಳಿಸಿದೆ.

ಮೂರು ಬಾರಿ ಒಂದೇ ಜಾಗದಲ್ಲಿ ಭೂಕಂಪ ಸಂಭವಿಸಿದೆ. ಮಾಧ್ಯಮಗಳ ವರದಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ನ್ಯೂಜಿಲೆಂಡ್ ದೇಶದ ಪೂರ್ವಭಾಗದಲ್ಲಿರುವ ನಾರ್ತ್ ಐಲೆಂಡ್ ದ್ವೀಪದ ಬಳಿ ಒಂದಾದ ಮೇಲೊಂದು ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ.

Tsunami Warning As Third Strong Earthquake Strikes Off New Zealand

ಒಂದು ಭೂಕಂಪವಂತೂ ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ಹೊಂದಿತ್ತು. ಎಂಟು ಗಂಟೆ ಅಂತರದಲ್ಲಿ ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿದೆ. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸರಣಿ ಭೂಕಂಪಕ್ಕೆ ಕಿವೀಸ್ ನಾಡು ಬೆಚ್ಚಿಬಿದ್ದಿತು.

ಅದರ ಪರಿಣಾಮವಾಗಿ ಪೂರ್ವ ಕಡಲ ತೀರದಾದ್ಯಂತ ಸಣ್ಣ ಸುನಾಮಿ ಅಲೆ ಅಪ್ಪಳಿಸಿತು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೊದಲ ಭೂಕಂಪವಾದಾಗಲೇ ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಹೀಗಾಗಿ ಸುನಾಮಿಯಿಂದ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ.

ಇಂಡೋನೇಷ್ಯಾದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಿಂದ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ದೊಡ್ಡ ಸುನಾಮಿ ಸೃಷ್ಟಿಯಾಗಿ ಲಕ್ಷಾಂತರ ಮಂದಿಯನ್ನು ಬಲಿಪಡೆದಿತ್ತು.

ಈ ಭೂಕಂಪದಿಂದ ಸಾವು ನೋವು ಸಂಭವಿಸಿದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದಕ್ಕಿಂತಲೂ ಕಡಿಮೆ ತೀವ್ರತೆಯ ಭೂಕಂಪ ಈ ಹಿಂದೆ ನ್ಯೂಜಿಲೆಂಡ್​ನಲ್ಲಿ ಸಂಭವಿಸಿದ್ದಾಗ ನೂರಾರು ಮಂದಿ ಸಾವನ್ನಪ್ಪಿದ್ದರು.

English summary
Small tsunami waves triggered by a series of powerful earthquakes hit the east coast of New Zealand’s North Island on Friday and authorities said thousands of residents who had evacuated to higher ground could now return to their homes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X