ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಿಬರಹ ಎಂಥ ಘೋರ... ತಾತನ ಕೈಯಲ್ಲಿ ಮೊಮ್ಮಗನ ಕಳೇಬರ!

|
Google Oneindia Kannada News

ಅನಾಮತ್ತಾಗಿ ಬಂದ ರಕ್ಕಸ ಅಲೆಯೊಂದು ಇಂಡೋನೇಷ್ಯಾದ 400 ಕ್ಕೂ ಹೆಚ್ಚು ಅಮಾಯಕರ ಜೀವವನ್ನು ತಿಂದು ತೇಗಿದೆ.

ಸಮುದ್ರದ ಆಳದಲ್ಲಿ ಭೂಮಿ 7.7 ತೀವ್ರತೆಯಲ್ಲಿ ಕಂಪಿಸಿಸದ ಪರಿಣಾಮ ಉಂಟಾದ ಸುನಾಮಿ ಇಂಡೋನೇಷ್ಯಾದ ಚಿತ್ರಣವನ್ನೇ ಬದಲಿಸಿದೆ. 2006 ರಲ್ಲಿ ಸಂಭವಿಸಿದ್ದ ಭೀಕರ ಸುನಾಮಿಯನ್ನೇ ನೆನಪಿಸುವ ರೀತಿಯಲ್ಲಿ ಸಂಭವಿಸಿದ ಈ ದುರಂತದಿಂದಾಗಿ ಲಕ್ಷಾಂತರ ಜನ ಮನೆ ಕಳೆದುಕೊಂಡಿದ್ದಾರೆ.

ಇದು ಇಂಡೋನೇಷ್ಯಾದ ಕತೆಯಾದರೆ ಜಗತ್ತಿನ ಹಲವು ದೇಶಗಳು ಇಂದು ವಿಶ್ವ ಹೃದಯದಿನವನ್ನು ಆಚರಿಸಿ, ಹೃದ್ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇಂಡೋನೇಷ್ಯಾ ಸುನಾಮಿ ಆರ್ಭಟಕ್ಕೆ ಕನಿಷ್ಠ 400 ಸಾವು, ಅನೇಕರು ನಾಪತ್ತೆ ಇಂಡೋನೇಷ್ಯಾ ಸುನಾಮಿ ಆರ್ಭಟಕ್ಕೆ ಕನಿಷ್ಠ 400 ಸಾವು, ಅನೇಕರು ನಾಪತ್ತೆ

ಭಾರತದಲ್ಲಿ ಹೃದಯ ದಿನದ ಜೊತೆಗೆ, ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವರ್ಷಾಚರಣೆಯೂ ಅದ್ಧೂರಿಯಾಗಿ ನಡೆಯುತ್ತಿದೆ...

ಈ ಎಲ್ಲ ಸುದ್ದಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ತುಣುಕು ಸುದ್ದಿ, ನಿಮಗಾಗಿ ಇಲ್ಲಿದೆ...

ತಾತನ ಕೈಯಲ್ಲಿ ಮೊಮ್ಮಗನ ಕಳೇಬರ

ತಾತನ ಕೈಯಲ್ಲಿ ಮೊಮ್ಮಗನ ಕಳೇಬರ

ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿಯಿಂದಾಗಿ ಮೃತನಾದ ಪುಟ್ಟ ಮೊಮ್ಮಗನ ಕಳೇಬರವನ್ನು ಎತ್ತಿಕೊಂಡು, ವೃದ್ಧನೊಬ್ಬ ಬಿಕ್ಕುತ್ತಿರುವ ದೃಶ್ಯ ಸುನಾಮಿಯ ಭೀಕರತೆಗೆ ಸಾಕ್ಷಿಯಾಗಿದೆ. 7.7 ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದಾಗಿ ಇಂಡೋನೇಷ್ಯಾದಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಸಾವಿವಾರು ಮಂದಿ ಕಣ್ಮರೆಯಾಗಿದ್ದಾರೆ.

ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ, 5 ಮಂದಿ ಸಾವು, ಕುಟುಂಬಗಳು ಕಣ್ಮರೆಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ, 5 ಮಂದಿ ಸಾವು, ಕುಟುಂಬಗಳು ಕಣ್ಮರೆ

ಗಂಭೀರ ಮಾತುಕತೆ

ಗಂಭೀರ ಮಾತುಕತೆ

ನವದೆಹಲಿಯ ವಿಜ್ಞಾನಭವನದಲ್ಲಿ 'ಅಕಾಡೆಮಿಕ್ ಲೀಡರ್ಶಿಪ್ ಆನ್ ಎಜ್ಯುಕೇಶನ್ ಫಾರ್ ರಿಸರ್ಜೆನ್ಸ್' ಸಮ್ಮೇಳನದಲ್ಲಿ ಆರ್ ಎಫ್ ಆರ್ ಎಫ್ ಅಧ್ಯಕ್ಷ ಸಚ್ಚಿದಾನಂದ ಜೋಷಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಗಂಭೀರವಾಗಿ ಚರ್ಚಿಸುತ್ತಿರುವ ಕ್ಷಣ.

ವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸ

ಪರಾಕ್ರಮ ಪರ್ವದ ಸಂಭ್ರಮ

ಪರಾಕ್ರಮ ಪರ್ವದ ಸಂಭ್ರಮ

ರಾಜಸ್ಥಾನದ ಜೋದ್ಪುರದಲ್ಲಿ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವರ್ಷಾಚರಣೆಯ ನಿಮಿತ್ತ ನಡೆದ 'ಪರಾಕ್ರಮ ಪರ್ವ' ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಪುಸ್ತಕವೊಂದನ್ನು ನೀಡುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಭರಮಾಡಿಕೊಂಡ ಕ್ಷಣ.

ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ

ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ

ಸೆ.28 ರಂದು ಮುಂಬೈಯ ತಮ್ಮ ನಿವಾಸದಲ್ಲಿ 89 ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಅವರನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭೇಟಿಯಾಗಿ, ಶುಭ ಹಾರೈಸಿದರು.

ಪ್ರಣಾಳ ಶಿಶು ಘಟಕ ಉದ್ಘಾಟಿಸಿದ ಸೋಹಾ

ಪ್ರಣಾಳ ಶಿಶು ಘಟಕ ಉದ್ಘಾಟಿಸಿದ ಸೋಹಾ

ಮಹಾರಾಷ್ಟ್ರದ ಥಾಣೆಯಲ್ಲಿ ಪ್ರಣಾಳ ಶಿಶು ಘಟಕವೊಂದನ್ನು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಉದ್ಘಾಟಿಸಿದರು. ನಂತರ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.

ಕಡ್ಡಿ ಪೈಲ್ವಾನಂಗೆ ಪರೀಕ್ಷೆ!

ಕಡ್ಡಿ ಪೈಲ್ವಾನಂಗೆ ಪರೀಕ್ಷೆ!

ಬಿಹಾರದ ಪಾಟ್ನಾದ ದನಪುರ ಎಂಬಲ್ಲಿ ಸೇನೆಗೆ ಸೇರುವ ಆಕಾಂಕ್ಷೆಯಲ್ಲಿರುವವರಿಗೆ ದೈಹಿಕ ಪರೀಕ್ಷೆ ನಡೆಸಲಾಯಿತು. ಕಡ್ಡಿ ಪೈಲ್ವಾನನಂತಿರುವ ವ್ಯಕ್ತಿಯೊಬ್ಬ ಪರೀಕ್ಷೆಗಾಗಿ ಎದೆಯೊಡ್ಡಿದ ದೃಶ್ಯವಿದು.

ಹೃದಯ ದಿನದ ಜಾಗೃತಿಗೆ ಮ್ಯಾರಥಾನ್

ಹೃದಯ ದಿನದ ಜಾಗೃತಿಗೆ ಮ್ಯಾರಥಾನ್

ಪಶ್ಚಿಮ ಬಂಗಾಳದ ಹೊರ್ವಾಹ್ ನ ದುಮುರ್ಜಲಾ ಸ್ಟೇಡಿಯಂ ನಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಮಿನಿ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಜನರು. ಸೆ.29 ರ ವಿಶ್ವ ಹೃದಯ ದಿನದ ಮಹತ್ವ ಮತ್ತು ಹೃದಯದ ಆರೋಗ್ಯದ ಕುರಿತ ಜಾಗೃತಿಗೆ ಈ ಮ್ಯಾರಥಾನ್ ಮೀಸಲಾಗಿತ್ತು.

ಯೋಧರ ಆಯುಧ ವಿದ್ಯಾರ್ಥಿಗಳ ಕೈಲಿ!

ಯೋಧರ ಆಯುಧ ವಿದ್ಯಾರ್ಥಿಗಳ ಕೈಲಿ!

ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವರ್ಷಾಚರಣೆಯ ನಿಮಿತ್ತ ಬಿಹಅರದ ಪಾಟ್ನಾದ ದನಪುರ ಎಂಬಲ್ಲಿ ಸೈನಿಕರು ಬಳಸುವ ಆಯುಧಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಹೆಮ್ಮೆಯ ಯೋಧರು ಈ ಆಯುಧಗಳನ್ನು ಹಿಡಿದೇ ನಮ್ಮನ್ನು ರಕ್ಷಿಸುತ್ತಿರುವುದನ್ನು ವಿದ್ಯಾರ್ಥಿಗಳು ಭಾವುಕರಾಗಿ ವೀಕ್ಷಿಸಿದರು.

English summary
A man carries the body of a child who was killed in the tsunami in Palu, Central Sulawesi, Indonesia. A powerful earthquake rocked the Indonesian island of Sulawesi kills more than 400 people so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X