• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್‌ನಲ್ಲಿ 7.0 ತೀವ್ರತೆಯ ಭೂಕಂಪ; ಸುನಾಮಿ ಅಲರ್ಟ್

|

ಟೋಕಿಯೋ, ಮಾರ್ಚ್ 20: ಈಶಾನ್ಯ ಜಪಾನ್‌ನ ಹೊನ್‌ಶು ಪೂರ್ವ ಕರಾವಳಿಯಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿದೆ.

ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ಭೂಕಂಪ ದಾಖಲಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಶನಿವಾರ ಬೆಳಿಗ್ಗೆ 9ರ ಸುಮಾರಿಗೆ ಮಿಯಾಗಿ ಪ್ರದೇಶದಲ್ಲಿ 60 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಪ್ರದೇಶದ ಸುತ್ತಮುತ್ತ ಸುನಾಮಿ ಎಚ್ಚರಿಕೆ ಹೊರಡಿಸಲಾಗಿದೆ.

ನ್ಯೂಜಿಲೆಂಡ್‌ನಲ್ಲಿ 2 ದಿನಗಳಲ್ಲಿ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪ ನ್ಯೂಜಿಲೆಂಡ್‌ನಲ್ಲಿ 2 ದಿನಗಳಲ್ಲಿ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪ

ಪ್ರದೇಶದ ಪರಮಾಣು ಸ್ಥಾವರದ ಸ್ಥಿತಿಗತಿ ಕುರಿತು ಸ್ಥಳೀಯ ಆಡಳಿತ ಪರಿಶೀಲನೆ ನಡೆಸಿದ್ದು, ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ವರದಿ ನೀಡಿವೆ. ಭೂಕಂಪದ ಹಿನ್ನೆಲೆಯಲ್ಲಿ ಬುಲೆಟ್ ಟ್ರೇನ್ ಒಳಗೊಂಡಂತೆ ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

2011ರಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹತ್ತು ವರ್ಷಗಳ ನಂತರ ಇದೀಗ 7.0 ತೀವ್ರತೆಯ ಭೂಕಂಪ ಸಂಭವಿಸಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಭೂಕಂಪ ಸಂಭವಿಸುತ್ತಿದ್ದಂತೆ ಸಾಗರ ತೀರಗಳಲ್ಲಿನ ನಿವಾಸಿಗಳು ಸ್ಥಳಾಂತರವಾಗಿದ್ದಾರೆ.

English summary
Japan's meteorological agency issued a tsunami advisory on Saturday, after a strong 7.2-magnitude earthquake struck off the northeastern coast of japan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X