ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ಶೃಂಗಸಭೆ: ಸಿಂಗಾಪುರಕ್ಕೆ ಬಂದಿಳಿದ ಟ್ರಂಪ್, ಕಿಮ್

By Sachhidananda Acharya
|
Google Oneindia Kannada News

ಸಿಂಗಾಪುರ, ಜೂನ್ 11: ಐತಿಹಾಸಿಕ ಅಮೆರಿಕಾ ಮತ್ತು ಉತ್ತರ ಕೊರಿಯಾ ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಎರಡೂ ದೇಶಗಳ ಶೃಂಗಸಭೆ ಸಿಂಗಾಪುರದ ಐಷಾರಾಮಿ ಸೆಂಟೋಸಾ ದ್ವೀಪದಲ್ಲಿ ನಾಳೆ ಅಂದರೆ ಜೂನ್ 12ರಂದು ನಡೆಯಲಿದೆ.

ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಉನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಂಗಾಪುರಕ್ಕೆ ಬಂದಿಳಿದಿದ್ದಾರೆ.

ಜೂನ್ 12ರಂದು ಟ್ರಂಪ್ - ಕಿಮ್ ಜಾಂಗ್ ಉನ್ ಸಿಂಗಾಪುರದಲ್ಲಿ ಮುಖಾಮುಖಿಜೂನ್ 12ರಂದು ಟ್ರಂಪ್ - ಕಿಮ್ ಜಾಂಗ್ ಉನ್ ಸಿಂಗಾಪುರದಲ್ಲಿ ಮುಖಾಮುಖಿ

ಭಾನುವಾರ ಕಿಮ್ ಏರ್ ಚೀನಾ 747 ವಿಮಾನದ ಮೂಲಕ ಸಿಂಗಾಪುರಕ್ಕೆ ಬಂದಿಳಿದರು. ಅವರನ್ನು ಸಿಂಗಾಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಕಿಮ್ ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Trump, Kim arrives in Singapore ahead of historic summit

ಉಭಯ ನಾಯಕರ ಭೇಟಿ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಬಿಗಿ ಭದ್ರತೆ ಕೈಗೊಳ್ಳಾಗಿದೆ. ಅದರಲ್ಲೂ ಇಬ್ಬರೂ ನಾಯಕರು ತಂಗಿರುವ ಹೋಟೆಲ್ ಸುತ್ತ ಏಳು ಸುತ್ತಿನ ಕೋಟೆಯನ್ನೇ ರಚಿಸಲಾಗಿದೆ.

ನಾಳೆ ಬೆಳಿಗ್ಗೆ 9 ಗಂಟೆಗೆ ಸೆಂಟೋಸಾ ದ್ವೀಪದಲ್ಲಿ ಉಭಯ ನಾಯಕರ ಮಾತುಕತೆ ಆರಂಭವಾಗಲಿದೆ. ಈ ಸಭೆಯ ನಂತರ ಸಂಪೂರ್ಣ ಅಣ್ವಸ್ತ್ರ ನಿಷೇಧ ಹಾಗೂ ದಕ್ಷಿಣ ಕೊರಿಯಾ ಜೊತೆಗಿನ 65 ವರ್ಷಗಳ ಶೀತಲ ಸಮರಕ್ಕೆ ಉತ್ತರ ಕೊರಿಯಾ ಕೊನೆ ಹಾಡಲಿದೆಯಾ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ದೊರೆಯಲಿದೆ.

English summary
North Korean leader Kim Jong-un and US President Donald Trump have touched down in Singapore, setting the stage for a landmark summit aimed at averting a nuclear crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X