ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ 70 ದಿನದಲ್ಲಿ ನಿರ್ಗಮಿಸುತ್ತಾರೆ, ಆದರೆ ನಾವಿಲ್ಲಿ ಕೊನೆವರೆಗೂ ಉಳಿಯುತ್ತೇವೆ: ಇರಾನ್

|
Google Oneindia Kannada News

ಟೆಹರಾನ್, ನವೆಂಬರ್ 9: ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷಗಿರಿ ಅಂತ್ಯಗೊಳ್ಳುವ ಮೊದಲು ಇರಾನ್ ಮೇಲೆ ಹೊಸದಾಗಿ ಹಲವು ಕಠಿಣ ನಿರ್ಬಂಧಗಳನ್ನು ಹೇರಲು ಚಿಂತನೆ ನಡೆಸಿದೆ ಎಂಬ ವರದಿಯ ನಡುವೆಯೇ ಇರಾನ್, ಭವಿಷ್ಯದಲ್ಲಿ ಸಹಾಯಕ್ಕಾಗಿ ಅಮೆರಿಕ ಮೇಲೆ ಅತಿಯಾಗಿ ಅವಲಂಬಿತವಾಗಬಾರದು ಎಂದು ಮಧ್ಯಪ್ರಾಚ್ಯದಲ್ಲಿರುವ ತನ್ನ ವೈರಿ ದೇಶಗಳಿಗೆ ಹೇಳಿದೆ.

'ಟ್ರಂಪ್ ಇನ್ನು 70 ದಿನಗಳಲ್ಲಿ ಹೋಗಿಬಿಡುತ್ತಾರೆ. ಆದರೆ ನಾವು ಇಲ್ಲಿ ಕೊನೆಯವರೆಗೂ ಇರುತ್ತೇವೆ' ಎಂದು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜಾರಿಫ್ ಸೋಮವಾರ ಟ್ವೀಟ್ ಮಾಡಿದ್ದು, 'ಇದು ನಮ್ಮ ನೆರೆಹೊರೆಯವರಿಗೆ ಪ್ರಾಮಾಣಿಕ ಸಂದೇಶ' ಎಂದಿದ್ದಾರೆ.

ಕೊನೆಯ ದಿನದವರೆಗೂ ಬೈಡನ್‌ರನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ ಡೊನಾಲ್ಡ್ ಟ್ರಂಪ್ !ಕೊನೆಯ ದಿನದವರೆಗೂ ಬೈಡನ್‌ರನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ ಡೊನಾಲ್ಡ್ ಟ್ರಂಪ್ !

ಒಂದು ಇಂಗ್ಲಿಷ್ ಮತ್ತು ಇನ್ನೊಂದು ಅರೇಬಿಕ್ ಭಾಷೆಗಳಲ್ಲಿ ಟ್ವೀಟ್ ಮಾಡಿರುವ ಜಾರಿಫ್, ಭದ್ರತೆ ಒದಗಿಸುವ ಸಲುವಾಗಿ ಹೊರಗಿನವರನ್ನು ಬೇಡುವುದನ್ನು ನಿಲ್ಲಿಸುವಂತೆ ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮಾತುಕತೆಯನ್ನು ಆರಂಭಿಸುವಂತೆ ನೆರೆಯ ದೇಶಗಳಿಗೆ ಕರೆ ನೀಡಿದ್ದಾರೆ.

Trump Is Gone In 70 Days But We will Remain Here Forever: Iran FM To Neighbors

ಇರಾನ್ ಮೇಲೆ ಅಮೆರಿಕವು ಹೊಸ ಹೊಸ ನಿರ್ಬಂಧಗಳ ಪ್ರವಾಹವನ್ನೇ ಹರಿಸಲು ಚಿಂತನೆ ನಡೆಸಿದೆ ಎಂಬ ಮಾಧ್ಯಮ ವರದಿಗಳ ಮರುದಿನ ಜಾರಿಫ್ ನೆರೆಯ ದೇಶಗಳಿಗೆ ಈ ಸಂದೇಶ ರವಾನಿಸಿದ್ದಾರೆ.

ನೂತನ ಅಧ್ಯಕ್ಷ ಜೋ ಬೈಡನ್‌ಗೆ ಅಭಿನಂದಿಸಲು ನಿರಾಕರಿಸಿದ ಚೀನಾನೂತನ ಅಧ್ಯಕ್ಷ ಜೋ ಬೈಡನ್‌ಗೆ ಅಭಿನಂದಿಸಲು ನಿರಾಕರಿಸಿದ ಚೀನಾ

'ನಮ್ಮ ನೆರೆಹೊರೆಯವರಿಗೆ ಒಂದು ಪ್ರಾಮಾಣಿಕ ಸಂದೇಶ. ಟ್ರಂಪ್ ಇನ್ನು 70 ದಿನಗಳಲ್ಲಿ ಹೋಗುತ್ತಾರೆ. ಆದರೆ ನಾವು ಇಲ್ಲಿ ಕೊನೆಯವರೆಗೂ ಉಳಿಯುತ್ತೇವೆ. ಭದ್ರತೆ ಒದಗಿಸಲು ಹೊರಗಿನವರೊಂದಿಗೆ ಪಂಥ ಕಟ್ಟುವುದು ಸರಿಯಾದ ಕ್ರಮವಲ್ಲ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಮ್ಮ ನೆರೆಯ ದೇಶಗಳೊಂದಿಗೆ ನಮ್ಮ ಕೈಜೋಡಿಸುತ್ತೇವೆ. ಜತೆಯಾಗಿ ಮಾತ್ರವೇ ನಾವು ಎಲ್ಲರಿಗೂ ಉತ್ತಮ ಭವಿಷ್ಯ ರೂಪಿಸಬಹುದು' ಎಂದು ಅವರು ಹೇಳಿದ್ದಾರೆ.

English summary
Iran Foreign minister Mohammad Javad Zarif said to his neighbor countries in Middle East, Trump is gone in 70 days, but we will remain here forever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X