ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

By Mahesh
|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 23: 'ಕೌಶಲ್ಯ ಆಧಾರಿತ ವಲಸೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದ್ದು, ಇದರ ಅನ್ವಯ ಹೊಸ ಎಚ್1ಬಿ ನೀತಿ ಜಾರಿಗೆ ತರಲು ಯುಎಸ್ ಆಡಳಿತ ಮುಂದಾಗಿದೆ. ಎಚ್1-ಬಿ ವೀಸಾಗಳ ನೀಡಿಕೆ ವಿಧಾನ ಕಠಿಣವಾಗಲಿದ್ದು, ಭಾರತದ ಐಟಿ ಕ್ಷೇತ್ರಕ್ಕೆ ಆಘಾತಕಾರಿಯಾಗಿದೆ.

ಅಭ್ಯರ್ಥಿಗಳು ಒಳ್ಳೆ ಕೌಶಲ್ಯದ ಜತೆಗೆ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ದರೆ ಮಾತ್ರ ಯುಎಸ್ ಪ್ರವೇಶಿಸಲು ಸಾಧ್ಯ. ಹೊಸ ವೀಸಾ ನೀತಿಯಂತೆ ಒಂದು ಅಥವಾ ಅದಕ್ಕಿಂತ ಹೆಚ್ಚು ತೃತೀಯ ವ್ಯಕ್ತಿಗಳ ಕಾರ್ಯಸ್ಥಳ(third party worksite)ಗಳಿಗೆ ನಿಯೋಜಿಸಲ್ಪಡುವ ಉದ್ಯೋಗಿಗಳಿಗೆ ನೀಡುವ ಎಚ್1-ಬಿ ವೀಸಾ ನೀಡಿಕೆಯಲ್ಲಿ ಕಟ್ಟುನಿಟ್ಟಿನ ವಿಧಾನಗಳನ್ನು ಅನುಸರಿಸಲಾಗಿದೆ.

Trump changes H1B Visa rules, Indian IT companies to be hit

H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ

ಹೊಸ ನೀತಿಯಂತೆ, third party worksite ನಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡುವ ವೀಸಾಗಳ ಅವಧಿ 3 ವರ್ಷಗಳ ತನಕ ಇರುತ್ತದೆ. ಆದರೆ, ಇದರ ನವೀಕರಣ ಪ್ರಕ್ರಿಯೆ ಸುಲಭವಾಗಿಲ್ಲ. ಎಚ್1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಅವಧಿ ಏಪ್ರಿಲ್ 02ರಿಂದ ಆರಂಭವಾಗುವ ಸಾಧ್ಯತೆಯಿದೆ.

ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ

ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿಯಿಂದ ಭಾರಿ ಹೊಡೆತ ಬೀಳಲಿದೆ.

English summary
The new H1B Visa policy announced by Donald Trump government makes it difficult to Indian IT companies. Companies those to be employed at one or more third party work sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X