ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 11: ಕಳೆದ ಜೂನ್ ನಲ್ಲಿ ಭೇಟಿಯಾಗಿದ್ದ ಉತ್ತರ ಕೋರಿಯಾ ಮುಖಂಡ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭೇಟಿಯಾಗಲಿದ್ದಾರಾ?

ಕಿಮ್ -ಟ್ರಂಪ್ ಕುಚುಕು ಕುಚುಕು: ದಿಗ್ಗಜರ ಐತಿಹಾಸಿಕ ಭೇಟಿಯ ಮುಖ್ಯಾಂಶಕಿಮ್ -ಟ್ರಂಪ್ ಕುಚುಕು ಕುಚುಕು: ದಿಗ್ಗಜರ ಐತಿಹಾಸಿಕ ಭೇಟಿಯ ಮುಖ್ಯಾಂಶ

ವೈಟ್ ಹೌಸ್ ಮುಲಗಳ ಪ್ರಕಾರ ಎಲ್ಲವೂ ಅಂದುಕೊಂಡಂತೇ ಆದರೆ ಸದ್ಯದಲ್ಲೇ ಈ ಇಬ್ಬರು ದಿಗ್ಗಜರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ. ಉತ್ತರ ಕೋರಿಯಾ ಮುಖಂಡ ಕಿಮ್ ಜಾಂಗ್ ಉನ್ ಟ್ರಂಪ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಆ ಪತ್ರದಲ್ಲಿ ಮತ್ತೊಮ್ಮೆ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ ಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ

ಕಳೆದ ಜೂನ್ ನಲ್ಲಿ ಭೇಟಿಯಾಗಿದ್ದ ಈ ಇಬ್ಬರು ದಿಗ್ಗಜರು ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಭೇಟಿಯ ಸಂದರ್ಭದಲ್ಲಿ ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ ಸೂಚಿಸಿದ್ದು ಐತಿಹಾಸಿಕ ನಡೆ ಎಂದು ಬಣ್ಣನೆಯಾಗಿತ್ತು.

Trump and Kim may meet again for the 2nd time

ಈ ಭೇಟಿಯನ್ನು ಕಿಮ್ ಜಾಂಗ್ ಉನ್ ಒಂದು ಕಾಲ್ಪನಿಕ ಕಾದಂಬರಿಯಂತಿದೆ ಎಂದು ಬಣ್ಣಿಸಿದ್ದರೆ, ಇದೊಂದು ಅತ್ಯುತ್ತಮ ಭೇಟಿ ಎಂದು ಟ್ರಂಪ್ ಹಾಡಿ ಹೊಗಳಿದ್ದರು.

English summary
United States President Donald Trump is open for another follow-up meeting with North Korean leader Kim Jong Un, White House Secretary Sarah Sanders said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X