ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ವರ್ಷದಿಂದ ಪರ್ವತದಲ್ಲಿ ಹೆಪ್ಪುಗಟ್ಟಿದ್ದ ಚಿನ್ನ ಸಿಕ್ತು!

By Srinath
|
Google Oneindia Kannada News

Treasure trove in metal box stamped 'Made in India' found off Mont Blanc France
ಆಲ್ಬರ್ಟ್‌ವಿಲೆ (ಫ್ರಾನ್ಸ್), ಸೆ. 27: ಇಲ್ಲೊಂದು ಕುತೂಹಲಕಾರಿ, ಅಚ್ಚರಿ ಸುದ್ದಿ ಇದೆ!

1950 ಮತ್ತು 1966 ರಲ್ಲಿ ಮೌಂಟ್ ಬ್ಲಾಂಕ್‌ ಹಿಮ ಪರ್ವತ ಶ್ರೇಣಿಯಲ್ಲಿ ಏರ್ ಇಂಡಿಯಾದ ಎರಡು ವಿಮಾನಗಳು ಅಪಘಾತಕ್ಕೀಡಾಗಿದ್ದವು. 1966ರ ಜನವರಿ 24 ರಂದು ಸಂಭವಿಸಿದ ಅಪಘಾತದಲ್ಲಿ ಭಾರತದ ಅಣು ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ ಸೇರಿದಂತೆ 117 ಮಂದಿ ಮೃತಪಟ್ಟಿದ್ದರು. ಈ ವಿಮಾನ ಮುಂಬೈನಿಂದ ಹೊರಟಿತ್ತು.

ಆದರೆ 50 ವರ್ಷಗಳ ಹಿಂದೆ ಭಾರತದ ವಿಮಾನ ಅಪಘಾತ ಸಂಭವಿಸಿದ ಸ್ಥಳದಲ್ಲಿ ಇದೀಗ ಭಾರಿ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ಎಷ್ಟು ಅಂತೀರಾ!? ಪ್ರಯಾಣಿಕರು ತಮ್ಮ ಜತೆ ಕೊಂಡೊಯ್ಯಬಹುದಾದಷ್ಟು ಪ್ರಮಾಣದ ಸಣ್ಣಪುಟ್ಟ ಚಿನ್ನಾಭರಣ ಅದಲ್ಲ. ಬರೋಬ್ಬರಿ 2.20 ಕೋಟಿ ರೂ ಬೆಲೆಯ ಅಂದರೆ 3,32,000 ಡಾಲರ್ ಮೌಲ್ಯದ ಪಚ್ಚೆ ಹರಳು, ಮಾಣಿಕ್ಯ ಮತ್ತು ಇಂದ್ರನೀಲ ಮಣಿ ಸಿಕ್ಕಿದೆ.

ಎಕ್ಸಾಕ್ಟ್ ಆಗಿ ಎಲ್ಲಿ ಅಂದಿರಾ? ಪೂರ್ವ ಫ್ರಾನ್ಸ್‌ ನ ಮೌಂಟ್ ಬ್ಲಾಂಕ್‌ ನಲ್ಲಿ. ಯಾರಿಗೆ ಸಿಕ್ಕಿದ್ದು ಅಂದರೆ ಫ್ರಾನ್ಸಿನ ಪರ್ವತಾರೋಹಿಯೊಬ್ಬರಿಗೆ! ಅತ್ಯಂತ ಪ್ರಮಾಣಿಕರಾಗಿ ಅವರು ಅದನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ.

ಮುಂದೆ ಕೇಳಿ... ಮೌಂಟ್ ಬ್ಲಾಂಕ್‌ ಹಿಮತಪ್ಪಲಿನಲ್ಲಿ ಮೆಟಲ್ ಬಾಕ್ಸ್‌ ನಲ್ಲಿ ಈ ಸಂಪತ್ತು ಇತ್ತು. ಈ ಬಾಕ್ಸ್ ಮೇಲೆ Made in India ಎಂದು ಬರೆದಿದ್ದರಿಂದ, ಅದು ನಮ್ಮದಲ್ಲ. ನಿರ್ದಿಷ್ಟವಾಗಿ ಬೇರೆ ಯಾರೊಬ್ಬರಿಗೋ ಸೇರಿದ್ದಾಗಿದೆ ಎಂದು ಗ್ರಹಿಸಿದ ಪರ್ವತಾರೋಹಿ ಅದನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಈಗಾಗಲೇ ಫ್ರಾನ್ಸ್‌ನ ಅಧಿಕಾರಿಗಳು ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿ ಈ ವಿಷಯ ಮುಟ್ಟಿಸಿದ್ದಾರೆ. ಒಂದು ವೇಳೆ ಈ ಸಂಪತ್ತಿನ ವಾರಸುದಾರರು ಸಿಕ್ಕದಿದ್ದರೆ ಅದು, ಸ್ಥಳೀಯ ಕಾನೂನಿನ ಪ್ರಕಾರ ಪರ್ವತಾರೋಹಿಗೇ ಸೇರುತ್ತದೆ!

English summary
Treasure trove in metal box stamped 'Made in India' found off Mont Blanc France. The jewels, estimated to be worth up to 246,000 euros ($ 332,000), lay hidden in a metal box that was on board an Indian plane that crashed in the desolate landscape some 50 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X